ಮೂಲ್ಕಿ ಸೀಮೆಯ ಅರಸು ಕಂಬಳ 

ಮೂಲ್ಕಿ: ಕಂಬಳದ ಕ್ರೀಡೆಯಲ್ಲಿ ಸಾಮರಸ್ಯದ ತುಳುನಾಡಿನ ಬದುಕನ್ನು ಕಾಣಬಹುದು, ಮೂಲ್ಕಿ ಸೀಮೆಯ ಅರಸು ಕಂಬಳದ ಗತವೈಭವವನ್ನು ಭವಿಷ್ಯದಲ್ಲಿ ತಿಳಿಹೇಳಲು ಎಲ್ಲರೂ ಪ್ರಯತ್ನಿಸಬೇಕು, ನಮ್ಮ ತುಳುನಾಡ ಪರಂಪರೆಯನ್ನು ಕಂಬಳ ಪ್ರತಿಬಿಂಬಿಸುತ್ತಿದೆ ಎಂದು ಮುಂಬಯ ಅಂದೇರಿ-ಬಾಂದ್ರಾ ಬಂಟ್ಸ್ ಸಂಘದ ಪ್ರಾಂತೀಯ ಅಧ್ಯಕ್ಷ ಐಕಳ ಗುಣಪಾಲ ಆರ್. ಶೆಟ್ಟಿ ಹೇಳಿದರು.
ಅವರು ಹಳೆಯಂಗಡಿಯ ಪಡುಪಣಂಬೂರಿನಲ್ಲಿ ಭಾನುವಾರ ಐತಿಹಾಸಿಕ ಮೂಲ್ಕಿ ಸೀಮೆಯ ಅರಸು ಕಂಬಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಅರಮನೆಯ ಚಂದ್ರನಾಥ ಸ್ವಾಮಿ ಬಸದಿ, ಪದ್ಮಾವತಿ ಅಮ್ಮನವರ ಬಸದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ ರಾಜ ಮರ್ಯಾದೆಯ ಗೌರವವನ್ನು ಪಡೆದು ಕಂಬಳಕ್ಕೆ ಚಾಲನೆ ನೀಡಲು ಸಮಿತಿಗೆ ಆದೇಶಿಸಿದರು.
ಅರಸು ಕಂಬಳದ ಮುಂಬಯಿ ಸಮಿತಿಯ ಕೊಲ್ನಾಡು ಉತ್ತುಂಜೆಯ ಭುಜಂಗ ಎಂ. ಶೆಟ್ಟಿ , ಅತ್ತೂರು ಬಾಬು ಎನ್. ಶೆಟ್ಟಿ ಅರಮನೆಯ ಎಂ. ಗೌತಮ್ ಜೈನ್, ಸುರತ್ಕಲ್ ಬಂಟರ ಸಂಘದ ಎಂ.ಜೆ. ಶೆಟ್ಟಿ, ಹಿರಿಯರಾದ ಸುಂದರ ದೇವಾಡಿಗ, ಕಂಬಳ ಸಮಿತಿಯ ಗೌರವಾಧ್ಯಕ್ಷ ಎಂ.ಎಚ್.ಅರವಿಂದ ಪೂಂಜಾ, ಅಧ್ಯಕ್ಷ ಕೊಲ್ನಾಡುಗುತ್ತು ರಾಮಚಂದ್ರ ನಾಯ್ಕ್, ಕಾರ್ಯಾಧ್ಯಕ್ಷರಾದ ಪಂಜಗುತ್ತು ಶಾಂತರಾಮ ಶೆಟ್ಟಿ, ವಿನೋದ್ ಎಸ್.ಸಾಲ್ಯಾನ್ ಬೆಳ್ಳಾಯರು, ಚಂದ್ರಶೇಖರ್ ಜಿ. ಶಶೀಂದ್ರ ಎಂ. ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಎಡ್ಮೆಮಾರ್ ನವೀನ್‌ಕುಮಾರ್ ಶೆಟ್ಟಿ, ಕೋಶಾಧಿಕಾರಿ ಕೆ.ವಿಜಯ್‌ಕುಮಾರ್ ಶೆಟ್ಟಿ ಕೊಲ್ನಾಡು, ಸಹ ಕಾರ್ಯದರ್ಶಿಗಳಾದ ಎಂ.ಕೆ. ಹೆಬ್ಬಾರ್, ರಮೇಶ್ ಸುವರ್ಣ, ನವೀನ್‌ಕುಮಾರ್ ಪಡುಪಣಂಬೂರು, ರಂಜೀತ್ ಕೆ. ಪುತ್ರನ್ ಪಡುತೋಟ, ಉಮೇಶ್ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.
ಮೂಲ್ಕಿ ಸೀಮೆಯ ಅರಸು ಕಂಬಳದಲ್ಲಿ ಕರಾವಳಿ ಜಿಲ್ಲೆಯ ವಿವಿಧೆಡೆಯ 100 ಕ್ಕೂ ಹೆಚ್ಚು ಕೋಣಗಳು ಭಾಗವಹಿಸಿದ್ದವು.

Narendra Kerekadu

Mulki-21121502 Mulki-21121503

Comments

comments

Comments are closed.

Read previous post:
Mulki-21121501
ಬಿಜೆಪಿ ಮೂಲ್ಕಿ ಮೂಡಬಿದ್ರಿ ಮಂಡಲ ಸಮಿತಿ

ಕಿನ್ನಿಗೋಳಿ: ಬಿಜೆಪಿ ಮೂಲ್ಕಿ ಮೂಡಬಿದ್ರಿ ಮಂಡಲದ ಕಿನ್ನಿಗೋಳಿ ಪಂಚಾಯತಿ ಸಮಿತಿಯ ಅಧ್ಯಕ್ಷರಾಗಿ ಜತ್ತಬೆಟ್ಟು ರವಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಸಂತೋಶ್ ಶೆಟ್ಟಿ ಪುನರೂರು, ಉಪಾಧ್ಯಕ್ಷರಾಗಿ ನೀತಾ...

Close