ಶಾಂತಿ ನಗರ ಈದ್ ಮಿಲಾದ್ ಕಾರ್ಯಕ್ರಮ

 ಕಿನ್ನಿಗೋಳಿ : ಖಿಲ್‌ರಿಯಾ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ಕಮಿಟಿ ತಾಳಿಪಾಡಿ ಗುತ್ತು ಶಾಂತಿ ನಗರ ಕಿನ್ನಿಗೋಳಿ ಆಶ್ರಯದಲ್ಲಿ ಈದ್ ಮಿಲಾದ್ ಪ್ರಯುಕ್ತ ಮದ್ರಸ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ರಮ ಬುಧವಾರ ನಡೆಯಿತು.
ಮಸೀದಿ ಅಧ್ಯಕ್ಷ ಹಾಜೀ. ಕೆ.ಎಚ್. ಮಯ್ಯದ್ದಿ ಅಧ್ಯಕ್ಷತೆ ವಹಿಸಿದ್ದರು.
ಕೆ.ಜೆ.ಎಂ. ಮಸಿದಿಯ ಖತೀಬ್ ಪಿ. ಜೆ. ಅಹ್ಮದ್ ಮದನಿ ದುವಾ ಆಶೀರ್ವಚನ ಗೈದರು.
ಮದರಸ ವಿದ್ಯಾರ್ಥಿಗಳಿಗೆ ಇಸ್ಲಾಂನ ಚೌಕಟ್ಟಿನಲ್ಲಿ ವಿವಿಧ ಪ್ರಕಾರದ ಸ್ಪರ್ಧೆಗಳು ನಡೆದು ವಿಜೇತರಿಗೆ ಪಿ.ಎಚ್. ರಿಝ್ವಾನ್ ಪುನರೂರು ಬಹುಮಾನಗಳನ್ನು ವಿತರಿಸಿದರು.
ಕಿನ್ನಿಗೋಳಿ. ಎಂ.ಜೆ.ಎಂ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಸಾಖಾಫಿ, ಪುನರೂರು ಮಸೀದಿಯ ಮಾಜೀ ಖತೀಬ್ ಹಸನನ ಸಖಾಫಿ, ಕಿನ್ನಿಗೋಳಿ ಸಾರ್ವಜನಿಕ ಈದ್ ಮಿಲಾದ್ ಸಮಿತಿಯ ಅಧ್ಯಕ್ಷ ಟಿ.ಕೆ. ಅಬ್ದುಲ್ ಖಾದರ್, ಶಾಂತಿ ನಗರ ಎನ್.ಎಚ್.ಎ. ಯ ಅಧ್ಯಕ್ಷ ಜೆ.ಎಂ. ಕಬೀರ್, ಕೆ.ಜೆ.ಎಂ ಕಟ್ಟಡ ಸಮಿತಿಯ ಸಧ್ಯಕ್ಷ ಟಿ.ಹಸನಬ್ಬ ಮತ್ತಿತರರು ಉಪಸ್ಥಿತರಿದ್ದರು.

Kinnigoli-25121506

 

Comments

comments

Comments are closed.

Read previous post:
Kinnigoli-25121505
ಪಕ್ಷಿಕೆರೆ ಮಿಲಾದ್ ಪೆಸ್ಟ್

ಕಿನ್ನಿಗೋಳಿ : ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿ ಪಕ್ಷಿಕೆರೆ ಹಾಗೂ ರಿಯಾಲುಲ್ ಇಸ್ಲಾಮ್ ಜಮಾಅತ್ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಮಿಲಾದ್ ಪೆಸ್ಟ್ ಪ್ರತ್ರಿಭಾ ಕಾರಂಜಿ ಹಾಗೂ ಮಸೀದಿಯ ಮಿನಾರ...

Close