ಕಟೀಲು ಕ್ರಿಸ್ಮಸ್ ಸೌಹಾರ್ದ ಸಂಗಮ- 2015

ಕಟೀಲು : ಶಾಂತಿ , ಪ್ರೀತಿ , ಸೌಹಾರ್ದದತೆ ಜೀವನವನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಕ್ರಿಸ್‌ಮಸ್ ಹಾಗೂ ಹೊಸವರ್ಷ ವರ್ಷ ಎಲ್ಲರಿಗೂ ಒಳಿತನ್ನುಂಟು ಮಾಡಲಿ ಎಂದು ಕಟೀಲು ಸಂತ ಜಾಕೊಬರ ಚರ್ಚ್ ಪ್ರಧಾನ ಧರ್ಮಗುರು ಡಾ. ಫಾ. ರೊನಾಲ್ದ್ ಕುಟಿನ್ಹೊ ಹೇಳಿದರು.
ಶ್ರೀ ಕಟೀಲು ವಿವಿಧೋದ್ದೇಶ ಸಹಕಾರ ಸಂಘ ಹಾಗೂ ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಶ್ರಯದಲ್ಲಿ ಗುರುವಾರ ನಡೆದ ಕ್ರಿಸ್ಮಸ್ ಸೌಹಾರ್ದ ಸಂಗಮ- 2015 ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘದ ಕೃಷಿಕ ಸದಸ್ಯರಾದ ಹಸನಬ್ಬ ಕಿನ್ನಿಗೋಳಿ, ಜೋನ್ ಡಿಸೋಜ ಬಡಗ ಎಕ್ಕಾರು, ಹರೀಶ್ ಬಿ ಕೋಟ್ಯಾನ್ ಅಜಾರು ಕಟೀಲು, ಅಪ್ಪಿ ಮಲ್ಲಿಗೆಯಂಗಡಿ, ಸೀತಾರಾಮ ಪೂಜಾರಿ ಮಿತ್ತಬಲು, ಗಣೇಶ್ ಶೆಟ್ಟಿ ಕೊಂಡೆಮೂಲ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಕಟೀಲು ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ. ಸಂಜೀವ ಮಡಿವಾಳ, ಮುರಳೀಧರ ಉಪಾಧ್ಯಾಯ, ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ವಸಂತಿ ಎನ್ ಶೆಟ್ಟಿ , ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಾಧಿಕಾರಿ ಸಾವಿತ್ರಿ ರೈ, ಸಹಕಾರ ಸಂಘ ಬ್ಯಾಂಕ್‌ನ ಉಪಾಧ್ಯಕ್ಷ ಸ್ಟೇನಿ ಪಿಂಟೋ, ನಿರ್ದೆಶಕರಾದ ರಾಮದಾಸ ಕಾಮತ್, ಸುರೇಶ್ ಕೆ. ಬಿ, ರಿಚರ್ಡ್ ಸಲ್ದಾನಾ, ಪ್ರವೀಣ್ ಸಾಲ್ಯಾನ್, ಸುಜಾತಾ, ರಮೇಶ್ ಕೆ, ಉಪಸ್ಥಿತರಿದ್ದರು.
ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಷಾ ಸ್ವಾಗತಿಸಿದರು. ಯಶೋದಾ ಆರ್. ಕಾರ್ಯಕ್ರಮ ನಿರೂಪಿಸಿದರು.

Kinnigoli-25121503

Comments

comments

Comments are closed.

Read previous post:
Kinnigoli-25121502
ಶಿಕ್ಷಣದ ಬಗ್ಗೆ ಒಲವು ಮೂಡಿಸಬೇಕು

ಕಿನ್ನಿಗೋಳಿ : ಶಿಕ್ಷಣ ಮತ್ತು ಜ್ಞಾನವನ್ನು ನೀಡುವಂತ ವಿದ್ಯಾಸಂಸ್ಥೆಗಳ ಹಾಗೂ ಕನ್ನಡ ಮಾತೃ ಭಾಷೆಯ ಬಗ್ಗೆ ಒಲವು ಮೂಡುವಂತೆ ಹೆತ್ತವರು ಪೋಷಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ಬೆಳೆಸಬೇಕು ಎಂದು...

Close