ಕೆ.ಎಸ್ ರಾವ್ ನಗರ ಮೀಲಾದುನ್ನಬಿ

ಮುಲ್ಕಿ : ಮುಲ್ಕಿಯ ಕೆ.ಎಸ್ ರಾವ್ ನಗರ ಶಾಫಿ ಜುಮಾ ಮಸೀದಿಯ ವತಿಯಿಂದ ಮೀಲಾದುನ್ನಬಿ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಬುಧವಾರ ಮಸೀದಿಯ ವಠಾರದಲ್ಲಿ ನಡೆಯಿತು.
ಬೊಳ್ಳೂರು ಮುಹಿಯುದ್ಧೀನ್ ಜುಮಾ ಮಸೀದಿಯ ಖತೀಬ್ ಅಲ್‌ಹಾಜಿ ಅಝ್‌ಹರ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು.
ಮುಲ್ಕಿ ಕೆ.ಎಸ್ ರಾವ್ ನಗರ ಶಾಫಿ ಜುಮಾ ಮಸೀದಿಯ ಅಧ್ಯಕ್ಷ ಎಂ.ಕೆ.ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಜುಮ್ಮಾ ಮಸೀದಿ ಖತೀಬ್ ಇಸ್ಹಾಕ್ ಫೈಝಿ ದುವಾ ಹಾಗೂ ಆಶೀರ್ವಚನವನ್ನು ನೆರವೇರಿಸಿದರು. ಕಾಶಿಪಟ್ಣ ದಾರುನ್ನೂರು ಇಸ್ಲಾಮಿಕ್ ಅಕಾಡೆಮಿ ಕೆ.ಐ. ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಭಾಷಣಗೈದರು.
ಈ ಸಂದರ್ಭ ಮೊಯ್ದೀನ್, ಹಸನ್‌ಬಾವ ಕೊಲ್ನಾಡು, ಸತ್ತಾರ್ ಸಾಹೇಬ್, ಹಸನಬ್ಬ, ಮುಹಮ್ಮದ್ ಸಖಾಪಿ ಅವರನ್ನು ಸನ್ಮಾನಿಸಿಸಲಾಯಿತು. ಪ್ರತಿಭಾ ಕಾರಂಜಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.
ಜಮಾತ್ ಉಪಾಧ್ಯಕ್ಷ ಇಸ್ಮಾಯೀಲ್, ಕಾರ್ಯದರ್ಶೀ ರಿಯಾಝ್, ಮುಲ್ಕಿ ನಗರ ಪಂಚಾಯತ್ ಸದಸ್ಯ ಆಸೀಫ್ ಕೊಲ್ನಾಡು, ಉದ್ಯಮಿ ರಫೀಕ್ ಎ.ಎಚ್ ಮತ್ತಿತರರು ಉಪಸ್ಥಿತರಿದ್ದರು.

Abdul Rahman Haleangadi

Kinnigoli-25121507

Comments

comments

Comments are closed.

Read previous post:
Kinnigoli-25121506
ಶಾಂತಿ ನಗರ ಈದ್ ಮಿಲಾದ್ ಕಾರ್ಯಕ್ರಮ

 ಕಿನ್ನಿಗೋಳಿ : ಖಿಲ್‌ರಿಯಾ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ಕಮಿಟಿ ತಾಳಿಪಾಡಿ ಗುತ್ತು ಶಾಂತಿ ನಗರ ಕಿನ್ನಿಗೋಳಿ ಆಶ್ರಯದಲ್ಲಿ ಈದ್ ಮಿಲಾದ್ ಪ್ರಯುಕ್ತ ಮದ್ರಸ ವಿದ್ಯಾರ್ಥಿಗಳ...

Close