ಪಕ್ಷಿಕೆರೆ ಮಿಲಾದ್ ಪೆಸ್ಟ್

ಕಿನ್ನಿಗೋಳಿ : ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿ ಪಕ್ಷಿಕೆರೆ ಹಾಗೂ ರಿಯಾಲುಲ್ ಇಸ್ಲಾಮ್ ಜಮಾಅತ್ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಮಿಲಾದ್ ಪೆಸ್ಟ್ ಪ್ರತ್ರಿಭಾ ಕಾರಂಜಿ ಹಾಗೂ ಮಸೀದಿಯ ಮಿನಾರ ಉದ್ಘಾಟನಾ ಕಾರ್ಯಕ್ರಮ ಮಸೀದಿಯ ವಠಾರದಲ್ಲಿ ಬುಧವಾರ ನಡೆಯಿತು.
ಜಮಾಅತ್ ಸಮಿತಿಯ ಅಧ್ಯಕ್ಷ ಕೆ. ಮುಹಮ್ಮದ್ ನೂರಾನಿಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಸೀಧಿಯ ಖತೀಬ್ ಅಬ್ದುಲ್ ಖಾದರ್ ಮದನಿ ದುವಾ ಆಶೀರ್ವಚನ ಹಾಗೂ ಮಿನಾರ ಉದ್ಘಾಟಿಸಿದರು.
ಪ್ರತಿಭಾ ಕಾರಂಜಿಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಮಿನಾರದ ದಾನಿ ಮೀರಾನ್ ಹಾಜಿ ಪಕ್ಷಿಕೆರೆ, ಅಬ್ದುಲ್ ಹಮೀದ್ ಮದನಿ, ಉಮರುಲ್ ಪಾರೂಖ್ ಮದನಿ, ಮುಹಮ್ಮದ್ ಮುಸ್ತಫಾ ಝೈನಿ, ಕಲಂದರ್ ಸದಿ ಉಪಸ್ಥಿತರಿದ್ದರು.

Kinnigoli-25121505

Comments

comments

Comments are closed.

Read previous post:
Kinnigoli-25121504
ಗುತ್ತಕಾಡು ಈದ್ ಮಿಲಾದ್ ಮೆರವಣಿಗೆ

ಕಿನ್ನಿಗೋಳಿ : ಗುತ್ತಕಾಡು ಶಾಂತಿನಗರ ನೂರುಲ್ ಹುದಾ ಎಸೋಸಿಯೇಶನ್ ಆಶ್ರಯದಲ್ಲಿ ಈದ್ ಮಿಲಾದ್ ಮೆರವಣಿಗೆ ಗುರುವಾರ ನಡೆಯಿತು.  

Close