ಅಭಿವೃದ್ದಿ ಪೂರಕ ಶಿಕ್ಷಣ ನಮ್ಮದಾಗಬೇಕು

ಕಿನ್ನಿಗೋಳಿ : ಸ್ನೇಹ ಸೌಹಾರ್ಧತೆಯ ಮೌಲ್ಯಧಾರಿತ ಶಿಕ್ಷಣ ಹಾಗೂ ಭವಿಷ್ಯದಲ್ಲಿ ದೇಶದ ಉನ್ನತಿ ಅಭಿವೃದ್ದಿ ಪೂರಕವಾದ ಶಿಕ್ಷಣ ನಮ್ಮದಾಗಬೇಕು ಎಂದು ಮುಲ್ಕಿ ಚರ್ಚ್ ಧರ್ಮಗುರು ಫಾ. ಪ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್ ಹೇಳಿದರು.
ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಎಂ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಆಡಳಿತ ಸಮಿತಿ ಉಪಾಧ್ಯಕ್ಷ ಪಿ. ಸತೀಶ್ ರಾವ್, ಕೋಶಾಧಿಕಾರಿ ಸತೀಶ್ಚಂದ್ರ ಹೆಗ್ಡೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಶಾಲಾ ನಾಯಕಿಯರಾದ ಸದ್ವಿತಿ ವೈ. ಶೆಟ್ಟಿ, ಕಿಶನ್ ಉಪಸ್ಥಿತರಿದ್ದರು.
ಶಾಲಾ ಕಾರ್ಯದರ್ಶಿ ವಿಲಿಯಂ ಸಿಕ್ವೇರಾ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕ ಗಿಲ್ಬರ್ಟ್ ಡಿಸೋಜ ಶಾಲಾ ವರದಿ ವಾಚಿಸಿದರು. ಶಿಕ್ಷಕಿ ರೂಪ ಪಕ್ಕಳ ವಂದಿಸಿದರು. ಶಿಕ್ಷಕಿ ಗಂಗಾದೇವಿ ಕಾರ್ಯಕ್ರಮ ನಿರೂಪಿಸಿದರು.

Kinnigoli-25121501

Comments

comments

Comments are closed.

Read previous post:
Kinnigoli-211215010
ನಿಡ್ಡೋಡಿ ಬಂಟರ ಸಂಘದ ಬೆಳ್ಳಿ ಹಬ್ಬ

ಕಿನ್ನಿಗೋಳಿ: ಸಮಾಜದ ಸರ್ವಾಂಗೀಣ ಅಭಿವೃದ್ದಿಗಾಗಿ ದುಡಿದಾಗ ಸಂಘಟನೆ ಸಮರ್ಥವಾಗಿ ಕಾರ್ಯ ನಿವರ್ಹಿಸಬಲ್ಲದು ಎಂದು ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ನಿಡ್ಡೋಡಿ ಶುಂಠಿಲಪದವು ಬಾಪೂಜಿ ಶಾಲಾ ವಠಾರದಲ್ಲಿ...

Close