ಶಿಕ್ಷಣದ ಬಗ್ಗೆ ಒಲವು ಮೂಡಿಸಬೇಕು

ಕಿನ್ನಿಗೋಳಿ : ಶಿಕ್ಷಣ ಮತ್ತು ಜ್ಞಾನವನ್ನು ನೀಡುವಂತ ವಿದ್ಯಾಸಂಸ್ಥೆಗಳ ಹಾಗೂ ಕನ್ನಡ ಮಾತೃ ಭಾಷೆಯ ಬಗ್ಗೆ ಒಲವು ಮೂಡುವಂತೆ ಹೆತ್ತವರು ಪೋಷಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ಬೆಳೆಸಬೇಕು ಎಂದು ಪೊಳಲಿ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತ್ಯಾನಂದ ಹೇಳಿದರು.
ಬುಧವಾರ ಶಿಮಂತೂರು ಶ್ರೀ ಶಾರದಾ ಪ್ರೌಢ ಶಾಲೆ, ಮೋಡೆಲ್ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿ ಮಾತನಾಡಿದರು.
ಶ್ರೀ ಶಾರದಾ ಸೊಸೈಟಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ, ದ.ಕ. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೊ, ಶಿಮಂತೂರು ಶ್ರೀ ಶಾರದಾ ಪ್ರೌಢ ಶಾಲಾ ಕೋಶಾಧಿಕಾರಿ ಭುವನಾಭಿರಾಮ ಉಡುಪ, ಸಿ. ಆರ್. ಪಿ. ಜಗದೀಶ ನಾವಡ, ಸುರೇಶ್ ಎಸ್. ರಾವ್ ಪುನರೂರು, ಕರುಣಾಕರ ಆಳ್ವ , ಪ್ರೊ. ಧರ್ಮಾನಂದ ಕೆ. ಕುಂದರ್, ಎಲ್. ಎನ್. ಶಾಸ್ತ್ರೀ, ಪುರಂದರ ಡಿ. ಶೆಟ್ಟಿಗಾರ್, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಪೃಥ್ವೀಶ ಎಸ್. ಕರಿಕೆ, ಮೋಡೆಲ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಗೀತಾ ಎಸ್, ಪ್ರಾಥಮಿಕ ಶಾಲಾ ಶಿಕ್ಷಕ ಎಂ. ಜಿ. ಶಿವರುದ್ರಪ್ಪ, ಶಾಲಾಭಿವೃದ್ಧಿ ಸಮಿತಿಯ ರಮೇಶ, ಶಶಿಕಲಾ, ಶಾಲಾ ನಾಯಕರಾದ ದಿಶಾ, ಗ್ಲೆನ್ ಸಿಕ್ವೇರಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-25121502

Comments

comments

Comments are closed.

Read previous post:
Kinnigoli-25121501
ಅಭಿವೃದ್ದಿ ಪೂರಕ ಶಿಕ್ಷಣ ನಮ್ಮದಾಗಬೇಕು

ಕಿನ್ನಿಗೋಳಿ : ಸ್ನೇಹ ಸೌಹಾರ್ಧತೆಯ ಮೌಲ್ಯಧಾರಿತ ಶಿಕ್ಷಣ ಹಾಗೂ ಭವಿಷ್ಯದಲ್ಲಿ ದೇಶದ ಉನ್ನತಿ ಅಭಿವೃದ್ದಿ ಪೂರಕವಾದ ಶಿಕ್ಷಣ ನಮ್ಮದಾಗಬೇಕು ಎಂದು ಮುಲ್ಕಿ ಚರ್ಚ್ ಧರ್ಮಗುರು ಫಾ. ಪ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್...

Close