ಜನವರಿ 3 ಐಕಳ ಕಂಬಳ

ಕಿನ್ನಿಗೋಳಿ: ಐಕಳ ಕಾಂತಾಬಾರೆ-ಬೂದಾಬಾರೆ ಜೋಡು ಕರೆ ಕಂಬಳ ಜನವರಿ 3 ರಂದು ನಡೆಯಲಿದೆ ಎಂದು ಐಕಳ ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ಡಾ.ದೇವೀ ಪ್ರಸಾದ್ ಶೆಟ್ಟಿ ಬೆಳಪು ಐಕಳ ಕಂಬಳ ಗದ್ದೆಯ ಮಂಜೊಟ್ಟಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
40ನೇ ವರ್ಷದ ಕಂಬಳೋತ್ಸವವನ್ನು ಅಂತರಾಷ್ಟೀಯ ವಾಸ್ತುತಜ್ಞ, ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಬೆಳಿಗ್ಗೆ 11ಗಂಟೆಗೆ ಉದ್ಘಾಟಿಸಲಿದ್ದು ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಶಾಂತರಾಮ್ ಶೆಟ್ಟಿ ಬಾರ್ಕೂರು ಭಾಗವಹಿಸಲಿದ್ದಾರೆ. ಸಾಯಂಕಾಲ 5.30ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಗೌರವಾನ್ವಿತ ಸಭಾಪತಿಗಳಾದ ಡಿ.ಹೆಚ್ ಶಂಕರಮೂರ್ತಿ ಉದ್ಘಾಟಿಸಲಿದ್ದು ಕಂಬಳ ಸಮಿತಿಯ ಗೌರವಾಧ್ಯಕ್ಷ ಹಾಗೂ ದ.ಕ ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸಹಕಾರಿ ರತ್ನ ಡಾ. ಎಂ. ಎನ್ ರಾಜೇಂದ್ರ ಕುಮಾರ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲೆಯ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ, ಕ್ಷೇತ್ರದ ಶಾಸಕ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್, ಉಡುಪಿ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಆರೋಗ್ಯ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಉದ್ಯಮಿ ಪ್ರಕಾಶ್ ಶೆಟ್ಟಿ ಬೆಂಗಳೂರು, ನಾಡೋಜ ಡಾ. ಜಿ. ಶಂಕರ್, ಹಾಗೂ ಸಹಿತ ವಿವಿಧ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ ಕಾರ್ಯಕ್ರಮದಲ್ಲಿ ತುಳುನಾಡಿನ ವಿಶೇಷ ಸಾಧಕರಾದ ಡಾ. ಪಿ. ಅನಂತಕೃಷ್ಣ ಭಟ್, ಮಂಜುನಾಥ ಭಂಡಾರಿ ಶೆಡ್ಡೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಗಿಡಿಗೆರೆ ರಾಮಕ್ಕ ಅವನ್ನು ಸನ್ಮಾನಿಸಲಾಗುವುದು ಎಂದರು.
ಪ್ರತಿಕಾಗೋಷ್ಠಿಯಲ್ಲಿ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಐಕಳಬಾವ ಚಿತ್ತರಂಜನ್ ಭಂಡಾರಿ, ಸಂಚಾಲಕ ಮುರಳೀಧರ ಶೆಟ್ಟಿ ಐಕಳ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಬಿದ್ರಿ, ಸಂತೋಷ್ ಕುಮಾರ್ ಹೆಗ್ಡೆ, ಕೃಷ್ಣ ಮಾರ್ಲ, ಸುಧಾಮ ಶೆಟ್ಟಿ ಐಕಳ, ಯೋಗೀಶ್ ರಾವ್ ಏಳಿಂಜೆ, ಶಶಿಧರ ಐಕಳ, ಐಕಳ ಜಯಪಾಲ ಶೆಟ್ಟಿ ಉಪಸ್ಥಿತರಿದ್ದರು.

Comments

comments

Comments are closed.

Read previous post:
Mulki-28121507
ಎರಡನೇ ವರ್ಷದ ವಧು ವರ ಅನ್ವೇಷಣಾ ಕಾರ್ಯಕ್ರಮ

ಮೂಲ್ಕಿ: ಗೇರುಕಟ್ಟೆ ಒಂಬತ್ತು ಮಾಗಣೆಯ ಮುಂಡಾಲ ಶಿವ ಸಮಾಜದ ಪ್ರಥಮ ವರ್ಷದ ವಧು ವರರ ಅನ್ವೇಷಣಾ ಕಾರ್ಯಕ್ರಮ ಯಶ್ವಸಾಗಿದ್ದು, ಒಟ್ಟು 190 ವದುವರರು ತಮ್ಮ ಹೆಸರು ನೊಂದಾಯಿಸಿದ್ದು,...

Close