ಪ್ರೀತಿ, ಸುಖಶಾಂತಿಯ ಸಂದೇಶ ಸಾರುವ ಕ್ರಿಸ್‌ಮಸ್ ಹಬ್ಬ

ಕಿನ್ನಿಗೋಳಿ : ಶಾಂತಿ, ಪ್ರೀತಿ, ಸೌಹಾರ್ದತೆಯ ಸಮಾಜದ ನಿರ್ಮಾಣ ಸುಸಂಸ್ಕ್ರತ ದೇಶದ ಅನಾವರಣ ಯೇಸು ಕ್ರಿಸ್ತರ ಜೀವನ ಸಂದೇಶಗಳು ನಮಗೆ ಮಾರ್ಗ ದರ್ಶನವಾಗಲಿ ಎಂದು ಜೆಪ್ಪು ಸಂತ ಅಂತೋನಿ ಆಶ್ರಮದ ನಿರ್ದೇಶಕ ಫಾ. ಓನಿಲ್ ಡಿಸೋಜ ಹೇಳಿದರು.
ಪದ್ಮನೂರು ಸಾರ್ವಜನಿಕ ಬಯಲಾಟ ಸಮಿತಿ, ಹಾಗೂ ಕಿನ್ನಿಗೋಳಿ ಕೊಸೆಸಮ್ಮನವರ ಚರ್ಚ್‌ನ ಸಂತ ಮೈಕಲ್, ಸಂತ ರಫಾಯೆಲ್ ಸುಕುರ್ ಮಾತೆ ವಾಳೆಗಳು, ಧರ್ಮಸ್ಥಳ ಸ್ವ-ಸಹಾಯ ಗುಂಪುಗಳು, ರೋಕ್ ಗೈಸ್ ಜಂಟಿ ಆಶ್ರಯದಲ್ಲಿ ಪದ್ಮನೂರು ಸಾರ್ವಜನಿಕ ಕ್ರಿಸ್ಮಸ್ ಸುವರ್ಣ ಮಹೋತ್ಸವ ಸಂಭ್ರಮ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಉದ್ಯಮಿ ಪ್ರಥ್ವಿರಾಜ ಆಚಾರ್ಯ, ಗುತ್ತಿಗೆದಾರ ಉಸ್ಮಾನ್, ಚಾರ್ಟರ‍್ಡ್ ಅಕೌಂಟೆಂಟ್ ವಲೇರಿಯನ್ ಆರಾನ್ನ ಅವರ ಪರವಾಗಿ ತಾಯಿ ಲಿಲ್ಲಿ ಅರಾನ್ಹ ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ಚರ್ಚ್‌ನ ಧರ್ಮಗುರು ಫಾ. ವಿನ್ಸಂಟ್ ಮೊಂತೆರೊ ಅಧ್ಯಕ್ಷತೆ ವಹಿಸಿದ್ದರು. ಯುವಜನ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್, ಗುತ್ತಕಾಡು ಮಸೀದಿ ಖತೀಬ ಅಬ್ದುಲ್ ಲತೀಫ್ ಸಖಾಫಿ, ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾ. ಪಂ. ಸದಸ್ಯ ರಾಜು ಕುಂದರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಪದ್ಮನೂರು ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಕೆ.ಎ. ಖಾದರ್ ಮತ್ತಿತರರು ಉಪಸ್ಥಿತರಿದ್ದರು.
ಜೋಸೆಫ್ ಕ್ವಾಡ್ರಸ್ ಸ್ವಾಗತಿಸಿದರು ವಿಲ್ಪ್ರೆಡ್ ಜೆ. ಮಥಾಯಸ್ ಮತ್ತು ವನಿತಾ ಕಾರ್ಯಕ್ರಮ ನಿರೂಪಿಸಿದರು.
ಕಿನ್ನಿಗೋಳಿಯಿಂದ ಪದ್ಮನೂರಿನ ವರೆಗೆ ಬಾಲ ಯೇಸು ಕ್ರಿಸ್ತರ ಸ್ಥಬ್ದ ಮೆರವಣಿಗೆ ನಡೆಯಿತು.

Knnigolii-28121506

Comments

comments

Comments are closed.

Read previous post:
Mulki-28121505
ಸಿಂಡಿಕೇಟ್ ಬ್ಯಾಂಕ್ ಶಾಖೆ ಉದ್ಘಾಟನೆ

ಮೂಲ್ಕಿ : ದೇಶಕ್ಕೆ ಹೆಚ್ಚಿನ ಬ್ಯಾಂಕ್ ಗಳನ್ನು ಅವಿಭಜಿ ದ.ಜಿಲ್ಲೆ ನೀಡಿದ್ದು ಸಿಂಡಿಕೇಟ್ ಬ್ಯಾಂಕ್ ಶಿಕ್ಷಣದ ಪ್ರಗತಿಗೆ ಹಾಗೂ ಕೃಷಿಕರಿಗೆ ಉತ್ತೇಜನ ನೀಡುವ ಮೂಲಕ ಲೀಡ್ ಬ್ಯಾಂಕ್ ಆಗಿದ್ದು...

Close