ಕ್ರಿಸ್ಮಸ್ ಸಂಭ್ರಮಾಚರಣೆ

ಮೂಲ್ಕಿ: ಜಗತ್ತಿನೆಲ್ಲೆಡೆ ಭಯೋತ್ಪಾದನೆ ಅಶಾಂತಿ ವೈರತ್ವಗಳು ತಾಂಡವವಾಡುತ್ತಿರುವ ಈ ದಿನಗಳಲ್ಲಿ ಏಸುಕ್ರಿಸ್ತರ ಶಾಂತಿ ಸಂದೇಶಗಳು ಮಾನವ ಕುಲದ ಅಭ್ಯುದಯಕ್ಕೆ ಪೂರಕ ಎಂದು ಮೂಲ್ಕಿ ಅಮಲೋದ್ಭವ ಮಾತಾ ಚರ್ಚಿನ ಧರ್ಮಗುರುಗಳಾದ ಫಾ.ಪ್ರಾನ್ಸೀಸ್ ಝೇವಿಯರ್ ಗೋಮ್ಸ್ ಹೇಳಿದರು.
ಮೂಲ್ಕಿ ರೋಟರಿ ಕ್ಲಬ್ ಆಶ್ರಯದಲ್ಲಿ ಶುಕ್ರವಾರ ನಡೆದ ಕ್ರಿಸ್ಮಸ್ ಸಂಭ್ರಮಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಕ್ರಿಸ್ಮಸ್ ಸಂದೇಶ ನೀಡಿದರು.
ಕಡು ಬಡವರಾಗಿ ಹುಟ್ಟಿ ಜೀವನದ ಕಷ್ಟ ಕಾರ್ಪಣ್ಯಗಳ ಅರಿವಿದ್ದ ಏಸುಕ್ರಿಸ್ತರು ಕ್ಷಮೆ ಹಾಗೂ ಸೇವೆಯ ಮೂಲಕ ಶಾಂತಿ ಸಂದೇಶ ನೀಡಿದರು ಅವರ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದ ಅವರುಪ್ರಪಂಚದ ವಿವಿದ ದೇಶಗಳಲ್ಲಿ ಕ್ರಿಸ್ನಸ್ ಆಚರಣೆ, ಕ್ರೀಸ್ಮಸ್ ಗೀತೆಗಳು, ಕ್ರಿಸ್ಮಸ್ ಮರ ಹಾಗೂ ಬಿಷಪ್ ಸಂತ ನಿಕೋಲಾಸ್ ಸಂತಕ್ಲಾಸ್ ಆದ ಬಗ್ಗೆ ವಿವರಣೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ರವಿಚಂದ್ರ ವಹಿಸಿದ್ದರು.
ಉದ್ಯಮಿ ರೋಲ್ಫಿ ಡಿಕೋಸ್ಟಾ ನಿರೂಪಿಸಿದರು. ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ವಂದಿಸಿದರು.

Bhagyavan Sanil

Mulki-28121503

Comments

comments

Comments are closed.

Read previous post:
Mulki-28121502
ಸಂಶೋಧನಾತ್ಮಕ ಮನೋಭಾವ ಬೆಳೆಸಿಕೊಳ್ಳುವ

ಮೂಲ್ಕಿ: ವಿದ್ಯಾರ್ಥಿಗಳು ಅದ್ಯಯನಶೀಲರಾಗುವ ಜೊತೆಗೆ ಸಂಶೋಧನಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳುವ ಮೂಲಕ ಭವಿಷ್ಯದ ವಿಜ್ಞಾನಿಗಳಾಗಿ ದೇಶದ ಹೆಸರನ್ನು ಉತ್ತುಂಗಕ್ಕೇರಿಸಲು ಸಾಧ್ಯವಿದೆ ಎಂದು ಬೆಥನಿ ಶಾಲೆಯ ಮುಖ್ಯಸ್ಥೆ ಸಿ.ವಿಲ್ಮಾ ಬಿಎಸ್...

Close