ಹಳೆಯಂಗಡಿ ಗ್ರಾ.ಪಂ.ಗೆ ದಲಿತರಿಂದ ಮುತ್ತಿಗೆ

ಹಳೆಯಂಗಡಿ: ದಲಿತರ ತಾಳ್ಮೆಯನ್ನು ಪರೀಕ್ಷಿಸಬೇಡಿ, ಅಧಿಕಾರ ಇದೆ ಎಂದು ದಬ್ಬಾಳಿಕೆಯನ್ನು ನಡೆಸದೇ ಅಧಿಕಾರ ನಿಮಗೆ ಶಾಶ್ವತವಲ್ಲ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ದಲಿತರನ್ನು ನಿಂದಿಸಿದಲ್ಲಿ ಮುಂದಿನ ದಿನದಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಶ್ರಿಧರ್ ದಡ್ಡಲ್‌ಕಾಡ್ ಎಚ್ಚರಿಸಿದರು.
ಅವರು ಹಳೆಯಂಗಡಿ ಇಂದಿರಾನಗರದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನವನ್ನು ಅಂಬೇಡ್ಕರ್ ಭವನಕ್ಕಾಗಿ ಹಸ್ತಾಂತರಿಸಬೇಕು ಎಂದು ಇಂದಿರಾನಗರದ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಬುಧವಾರ ನಡೆದ ಹಳೆಯಂಗಡಿ ಗ್ರಾಮ ಪಂಚಾಯಿತಿ ಮುತ್ತಿಗೆಯ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ತಮ್ಮ ಮನವಿಗೆ ಕೂಡಲೆ ಸ್ಪಂದಿಸಬೇಕು, ಪಂಚಾಯಿತಿಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ಅನುದಾನವು ದುರ್ಬಳಕೆ ಆಗಬಾರದು, ಇಂದಿರಾನಗರದ ಸಮುದಾಯ ಭವನವು ಅಂಬೇಡ್ಕರ್ ಭವನ ಎಂದು ಕೂಡಲೆ ನಾಮಕರಣ ಮಾಡದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಒಕ್ಕೂಟದ ಅಧ್ಯಕ್ಷ ಚಂದ್ರಕಾಂತ್, ಆನಂದ ಇಂದಿರಾನಗರ, ಸದಾಶಿವ ಇಂದಿರಾನಗರ, ಸೂರ್ಯಕಾಂತ್, ಪಡುಪಣಂಬೂರು ಗ್ರಾ.ಪಂ. ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು ಮಾತನಾಡಿದರು. ಜಿಲ್ಲಾ ಸಮಿತಿಯ ಸದಾಶಿವ ಉರ್ವಸ್ಟೋರ್, ಕೆರೆಕಾಡು ಸಂಚಾಲಕ ಜಯ ಕೆರೆಕಾಡು ಇನ್ನಿತರರು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.
ಪ್ರತಿಭಟನಾಕಾರರ ಮನವಿಯನ್ನು ಪಂಚಾಯತ್ ಅಭಿವೃದ್ಧಿ ಅಽಕಾರಿ ಆಬೂಬಕರ್ ಸ್ವೀಕರಿಸಿ, ಮನವಿಯನ್ನು ಆಡಳಿತ ಮಂಡಳಿಯ ಸಭೆಯಲ್ಲಿ ಇಟ್ಟು, ಕಾನೂನು ಬದ್ಧವಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮೂಲ್ಕಿ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತನ್ನು ನೀಡಲಾಗಿತ್ತು.

Narendra Kerekadu

Mulki-28121501

Comments

comments

Comments are closed.

Read previous post:
Kinnigoli-26121504
ಕಿನ್ನಿಗೋಳಿ ಪರಿಸರದ ಗೋದಲಿ

ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಇಗರ್ಜಿ ಗೋದಲಿ ದಾಮಸ್ಕಟ್ಟೆ (ಕಿರೆಂ) ರೆಮದಿ ಅಮ್ಮನವರ ಇಗರ್ಜಿ ಗೋದಲಿ ಪಕ್ಷಿಕೆರೆ ಸಂತ ಜೂಡರ ಚರ್ಚ್ ಧರ್ಮಗುರು ಫಾ.ಆಂಡ್ರು ಲಿಯೋ ಡಿಸೋಜ ಯೇಸು...

Close