ಎರಡನೇ ವರ್ಷದ ವಧು ವರ ಅನ್ವೇಷಣಾ ಕಾರ್ಯಕ್ರಮ

ಮೂಲ್ಕಿ: ಗೇರುಕಟ್ಟೆ ಒಂಬತ್ತು ಮಾಗಣೆಯ ಮುಂಡಾಲ ಶಿವ ಸಮಾಜದ ಪ್ರಥಮ ವರ್ಷದ ವಧು ವರರ ಅನ್ವೇಷಣಾ ಕಾರ್ಯಕ್ರಮ ಯಶ್ವಸಾಗಿದ್ದು, ಒಟ್ಟು 190 ವದುವರರು ತಮ್ಮ ಹೆಸರು ನೊಂದಾಯಿಸಿದ್ದು, ಅದರಲ್ಲಿ 45 ಜೋಡಿಗಳ ವಿವಾಹ ನೆರವೇರಿದೆ ಎಂದು ಮುಲ್ಕಿ ಮುಂಡಾಲ ಸಮಾಜದ ಅದ್ಯಕ್ಷ ಮಾದವ ಬಂಗೇರ ಹೇಳಿದರು.
ಅವರು ಮುಲ್ಕಿ ಮುಂಡಾಲ ಸಮಾಜದ ಸಭಾ ಭವನದಲ್ಲಿ ನಡೆದ ಎರಡನೇ ವರ್ಷದ ವಧು ವರರ ಅನ್ವೇಷಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವರ್ಷವೂ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಸಮಾಜ ಬಾಂಧವರಿಂದ ಮೆಚ್ಚುಗೆಗೆ ಪಾತ್ರವಾಗಿದೆ ಮಾತ್ರವಲ್ಲದೆ, ಈ ಬಾರಿ 5 ಜೋಡಿಗಿಂತ ಹೆಚ್ಚು ನಿಶ್ಚಿಯವಾದಲ್ಲಿ ಉಚಿತ ಸಾಮೂಹಿಕ ವಿವಾಹ ನೆರವೇರಿಸಲಾಗುದು ಎಂದರು, ಕಾರ್ಯಕ್ರಮದ ಉದ್ಘಾಟನೆಯನ್ನು ಗುರಿಕಾರರಾದ ಬಾಸ್ಕರ್ ಅವರು ನೆರವೇರಿಸಿದರು ಈ ಸಂದರ್ಭ ಕಳೆದ ಬಾರಿ ಕಾರ್ಯಕ್ರಮದಲ್ಲಿ ನೊಂದಣಿಗೊಂಡು ವಿವಾಹವಾದ ಜೋಡಿಗಳನ್ನು ಗೌರವಿಸಲಾಯಿತು.
ಸಂಘದ ಗೌರವಾಧ್ಯಕ್ಷ ಸುಧಾಕರ್ ಪಾತ್ರಿ, ಪ್ರಧಾನ ಕಾರ್ಯದರ್ಶಿ ಬಾಸ್ಕರ್ ಮೊಬೆನ್, ಗೌ. ಸಲಹೆಗಾರ ಭಾಸ್ಕರ ಬಿ., ಮಾಜಿ ಅಧ್ಯಕ್ಷ ಗೋಪಾಲ, ಕೆ. ಮಾಧವ ಗೇರುಕಟ್ಟೆ, ಯಶವಂತ ಐಕಳ, ಕೋಶಾಧಿಕಾರಿ ರಮೇಶ್ ಬಿ., ಕಾರ್ಯದರ್ಶಿ ಪ್ರಕಾಶ್ ಕೊಡ್ಮನ್, ಲೆಕ್ಕ ಪರೊಶೋಧಕ ಪ್ರೇಮನಾಥ ಸುವರ್ಣ, ಯುವತಿ ಮಂಡಲದ ಅಧ್ಯಕ್ಷೆ ಬಬಿತ, ಯುವಕ ಮಂಡಲದ ಅಧ್ಯಕ್ಷ ತಿಲ ಮತ್ತಿತರರು ಉಪಸ್ಥಿತರಿದ್ದರು.

Mulki-28121507

Comments

comments

Comments are closed.

Read previous post:
Knnigolii-28121506
ಪ್ರೀತಿ, ಸುಖಶಾಂತಿಯ ಸಂದೇಶ ಸಾರುವ ಕ್ರಿಸ್‌ಮಸ್ ಹಬ್ಬ

ಕಿನ್ನಿಗೋಳಿ : ಶಾಂತಿ, ಪ್ರೀತಿ, ಸೌಹಾರ್ದತೆಯ ಸಮಾಜದ ನಿರ್ಮಾಣ ಸುಸಂಸ್ಕ್ರತ ದೇಶದ ಅನಾವರಣ ಯೇಸು ಕ್ರಿಸ್ತರ ಜೀವನ ಸಂದೇಶಗಳು ನಮಗೆ ಮಾರ್ಗ ದರ್ಶನವಾಗಲಿ ಎಂದು ಜೆಪ್ಪು ಸಂತ ಅಂತೋನಿ...

Close