ಸಿಂಡಿಕೇಟ್ ಬ್ಯಾಂಕ್ ಶಾಖೆ ಉದ್ಘಾಟನೆ

ಮೂಲ್ಕಿ : ದೇಶಕ್ಕೆ ಹೆಚ್ಚಿನ ಬ್ಯಾಂಕ್ ಗಳನ್ನು ಅವಿಭಜಿ ದ.ಜಿಲ್ಲೆ ನೀಡಿದ್ದು ಸಿಂಡಿಕೇಟ್ ಬ್ಯಾಂಕ್ ಶಿಕ್ಷಣದ ಪ್ರಗತಿಗೆ ಹಾಗೂ ಕೃಷಿಕರಿಗೆ ಉತ್ತೇಜನ ನೀಡುವ ಮೂಲಕ ಲೀಡ್ ಬ್ಯಾಂಕ್ ಆಗಿದ್ದು ಸ್ಳಳಾಂತರಗೊಂಡ ಶಾಖೆಯಿಂದ ಗ್ರಾಹಕರಿಗೆ ಹೆಚ್ಚಿನ ಸವಲತ್ತು ದೊರೆಯಲೆಂದು ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ ಅಭಯಚಂದ್ರ ಜೈನ್ ಹೇಳಿದರು.
ಮೂಲ್ಕಿಯ ಕಾರ್ನಾಡಿನ ಪೂಂಜಾ ಕಟ್ಟಡದ ನೆಲ ಹಂತಸ್ತಿಗೆ ಸ್ಥಳಾಂತರಗೊಂಡ ಹವಾ ನಿಯಂತ್ರಿತ ಮೂಲ್ಕಿಯ ಸಿಂಡಿಕೇಟ್ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಂಡಿಕೇಟ್ ಬ್ಯಾಂಕಿನ ಕ್ಷೇತ್ರಿಯ ಮಹಾ ಪ್ರಬಂಧಕ ಕೆ ಟಿ ರೈ ವಹಿಸಿದ್ದು ಬ್ಯಾಂಕಿನ ಮಹಾ ಪ್ರಬಂಧಕ ವಿ ಗಣೇಶನ್,ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ,ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಮೊಕ್ತೇಸರ ಎನ್ ಎಸ್ ಮನೋಹರ್ ಶೆಟ್ಟಿ,ಮೂಲ್ಕಿ ಕಾರ್ನಾಡಿನ ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ ಎಚ್ ಅರವಿಂದ ಪೂಂಜ,ಮೂಲ್ಕಿಯ ಶ್ರೀ ವೆಂಕಟರಮಣ ದೇವಳದ ಟ್ರಸ್ಟಿ ಕುಲ್ಯಾಡಿ ನರಸಿಂಹ ಪೈ,ಮೂಲ್ಕಿ ಕಾರ್ನಾಡಿನ ಶಾಫಿ ಜುಮ್ಮಾ ಮಸೀದಿಯ ಖತೀಬರಾದ ಎಂ ಎಸ್ ಹೈದರ್ ಆಲಿ,ಕಾರ್ನಾಡಿನ ಮಾತಾ ಅಮಲೋದ್ಭವ ಚರ್ಚಿನ ಧರ್ಮಗುರು ವಂದನೀಯ ಫ್ರಾನ್ಸಿಸ್ ಝೇವಿಯರ್ ಗೋಮ್ಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬ್ಯಾಂಕಿನ ಉಪ ಮಹಾ ಪ್ರಬಂಧಕ ನಾರಾಯಣ ನಾಯ್ಡು ಮತ್ತಿತರರು ಉಪಸ್ತಿತರಿದ್ದರು.
ಬ್ಯಾಂಕಿನ ಉಪ ಮಹಾ ಪ್ರಬಂಧಕ ಕೆ ನರೇಂದ್ರನಾಥ ಕಾಮತ್ ಸ್ವಾಗತಿಸಿದರು,ಶಾಖಾ ಹಿರಿಯ ಪ್ರಬಂಧಕ ಮಂಜುನಾಥ್ ಕೆ ವಿ ವಂದಿಸಿದರು,ಮುರಳೀಧರ್ ಕಲ್ಕೂರ ನಿರೂಪಿಸಿದರು.

Prakash Suvarna 

Mulki-28121505

Comments

comments

Comments are closed.

Read previous post:
Mulki-28121504
ದತ್ತ ಜಯಂತಿ ಉತ್ಸವ

 ಮೂಲ್ಕಿ: ದತ್ತ ಜಯಂತಿ ಉತ್ಸವದ ಪ್ರಯುಕ್ತ ಮೂಲ್ಕಿ ಹೋಬಳಿ ಮಟ್ಟದ ಹಿಂದೂ ಜಾಗರಣಾ ವೇದಿಕೆ ಮತ್ತು ದತ್ತ ಮಾಲಾ ಅಭಿಯಾನ ಸಮಿತಿಯ ಆಶ್ರ್ರಯದಲ್ಲಿಂದು ಮೂಲ್ಕಿಯ ಕೆ ಎಸ್ ರಾವ್...

Close