ಕಟೀಲು ಪದವಿ ಕಾಲೇಜು ವಾರ್ಷಿಕೋತ್ಸವ

ಕಿನ್ನಿಗೋಳಿ: ಮಕ್ಕಳಿಗೆ ಸಂಸ್ಕಾರಭರಿತ ವಿದ್ಯಾಭ್ಯಾಸದ ಜೊತೆಗೆ ಕೃಷಿಯ ಬಗ್ಗೆ ಕೂಡಾ ಅರಿವು ಹಿರಿಯರು ಮೂಡಿಸಬೇಕು ಎಂದು ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ತುಕಾರಾಮ ಪೂಜಾರಿ ಹೇಳಿದರು.
ಮಂಗಳವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀ ಪೂರ್ವ ಕಾಲೇಜು ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಕಟೀಲು ದೇವಳದ ಆಡಳಿತಾಧಿಕಾರಿ ಗೋಕುಲ್‌ದಾಸ್ ನಾಯಕ್, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ್ ಕೋಟ್ಯಾನ್, ಕಟೀಲು ಗಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಕರ್ನಾಟಕ ಬ್ಯಾಂಕ್ ಚೀಫ್ ಮ್ಯಾನೇಜರ್ ಶ್ರೀನಿವಾಸ ದೇಶಪಾಂಡೆ, ಉದ್ಯಮಿ ರವಿರಾಜ ಆಚಾರ್ಯ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಉದಯಪ್ರಕಾಶ್ ನಾಯಕ್, ವಿದ್ಯಾರ್ಥಿ ನಾಯಕ ಶ್ರೀಕರ ಆಸ್ರಣ್ಣ ಮತ್ತಿತರರು ಉಪಸ್ಥಿತರಿದ್ದರು.
ದೇವಳ ಪದವಿ ಪೂರ್ವ ಕಾಲೇಜು ಪ್ರಿನ್ಸ್‌ಪಾಲ್ ಜಯರಾಮ ಪೂಂಜ ಸ್ವಾಗತಿಸಿದರು. ವನಿತಾ ಜೋಷಿ ವಂದಿಸಿದರು. ಗೋಪಿನಾಥ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Kinnigoli-30121505

Comments

comments

Comments are closed.

Read previous post:
Mulki-30121504
ರಾಷ್ಟ್ರೀಯ ಸೇವಾ ಯೋಜನೆ ಮುಖ್ಯ

ಮೂಲ್ಕಿ: ಪರಿಸರದ ಅಧ್ಯಯನ,ಉತ್ತಮ ಸಂಸ್ಕಾರ,ಸಮಾಜ ಜೀವನದ ತಿಳುವಳಿಕೆಯೊಂದಿಗೆ ಸ್ವಾವಲಂಭಿ ಜೀವನ ಕಲಿಕೆಗೆ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಭಿರಗಳ ಪೂರಕವಾಗಿವೆ ಎಂದು ಹಿರಿಯ ಪ್ರಗತಿಪರ ಕೃಷಿಕ ಪುತ್ತೂರು...

Close