ಎ.ಡಿ.ಜಿ ಆಯ್ಕೆ ಡಾ.ಪ್ರವೀಣ್ ವಿ.ಪುತ್ರನ್

ಮೂಲ್ಕಿ: ಮೂಲತಃ ಮೂಲ್ಕಿ ಒಡೇರುಬೆಟ್ಟು ನಿವಾಸಿ ಡಾ.ಪ್ರವೀನ್ ವಿ.ಪುತ್ರನ್‌ ಅವರು ನವದೆಹಲಿ ಇಂಡಿಯನ್ ಕೌನ್ಸಿಲ್ ಆಫ್ ಎಗ್ರಿಕಲ್ಚರಲ್ ರೀಸರ್ಚ್(ಐಸಿಎಆರ್)ನ ಎಡಿಜಿ(ಅಸಿಸ್ಟೆಂಟ್ ಡೈಕ್ಟರ್ ಜನರಲ್) ಆಗಿ ಆಯ್ಕೆಯಾಗಿದ್ದಾರೆ.
ಕೇಂದ್ರ ಸರಕಾರದ ಸಿಐಎಫ್‌ಎನ್‌ಇಟಿನ ನಿವೃತ್ತ ನಿರ್ದೇಶಕ ಕ್ಯಾ.ವಾಸು ಎ.ಪುತ್ರನ್ ಹಾಗೂ ವಾರಿಜ ಪುತ್ರನ್ ದಂಪತಿಯ ಪುತ್ರರಾಗಿರುವ ಡಾ.ಪ್ರವೀಣ್ ಪುತ್ರನ್‌ರವರು ಎಗ್ರಿಕಲ್ಚರಲ್ ರೀಸರ್ಚ್ ಸರ್ವಿಸ್(ಎಆರ್‌ಎಸ್) ಮೂಲಕ ಆಯ್ಕೆಯಾಗಿ ಕೊಚ್ಚಿನ್‌ನ ಸೆಂಟ್ರಲ್‌  ಇನ್ಸ್‌ಟಿಟ್ಯೂಟ್ ಆಫ್ ಫಿಶರೀಸ್ ನಾಟಿಕಲ್ ಎಂಡ್ ಇಂಜಿನಿಯರಿಂಗ್ ಟ್ರೈನಿಂಗ್ ಮತ್ತು ಸೆಂಟ್ರಲ್ ಇನ್ಸಿಟಿಟ್ಯೂಟ್ ಆಫ್ ಫಿಶರೀಸ್ ಟೆಕ್ನಾಲಜಿಯಲ್ಲಿ ಪ್ರಧಾನ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಸಾಧನೆಯನ್ನು ಪರಿಗಣಿಸಿ ದೇಶದ ಪ್ರತಿಷ್ಠಿತ ಹುದ್ದೆಗೆ ಆಯ್ಕೆ ಮಾಡಲಾಗಿದೆ.
30 ವರ್ಷಗಳ ಮೀನುಗಾರಿಕೆಗೆ ಸಂಬಂಧ ಪಟ್ಟ ವಿವಿಧ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ಟ್ರಾಲ್ ಪರ್ಸೀನ್ ಹಾಗೂ ಜವಾಬ್ದಾರಿಯುತ ಮೀನುಗಾರಿಕಾ ಆಚರಣೆಗಳ ಸಂಶೋಧನೆಗಳಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.
ಥೈಲೆಂಡ್, ಇರಾನ್, ಪೋಲೆಂಡ್ ಇಸ್ಲಾಮಿಕ್ ರಿಪಬ್ಲಿಕ್, ಮಾಲ್ದೀವ್ಸ್, ಅಂಟಾರ್ಕಟಿಕಾಗಳಲ್ಲಿ ವಿಶೇಷ ಸಂಶೋಧನೆ ನಡೆಸಿದ ಹಿರಿಮೆ ಅವರದ್ದಾಗಿದೆ.
100ಕ್ಕೂ ಅಧಿಕ ಮೀನುಗಾರಿಕಾ ಸಂಶೋಧನಾ ಗ್ರಂಥಗಳನ್ನು ರಚಿಸಿರುವ ಅವರು ಪರಿಣಿತ ಉಪನ್ಯಾಸಕರು ಆಗಿದ್ದರು. ಉತ್ತಮ ಕ್ರೀಡಾಪಟು ಪೈಟಿಂಗ್ ಮತ್ತು ಕಾರ್ಟೂನ್‌ಗಳು ಹಲವಡೆ ಪ್ರದರ್ಶನ ಕಂಡಿವೆ.

Mulki-30121501

Comments

comments

Comments are closed.

Read previous post:
Kinnigoli-291215010
ಪಂಜ ಕೊಯಿಕುಡೆ ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ, ಪಂಜ, ಕೊಯಿಕುಡೆ ಶಾಲಾ ವಾರ್ಷಿಕೋತ್ಸವ ಶನಿವಾರ ನಡೆಯಿತು. ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಂ....

Close