ಮೂಲ್ಕಿಯ ವಿಶೇಷ ತಹಶಿಲ್ದಾರ್ ನಿಧನ

ಮೂಲ್ಕಿ: ಮೂಲ್ಕಿಯ ನಾಡ ಕಚೇರಿಯಲ್ಲಿ ವಿಶೇಷ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮೂಲ್ಕಿ ಹೋಬಳಿಯ ವಿಶೇಷ ತಹಶಿಲ್ದಾರ್ ಎ.ಗಣಪತಿ ಖೇಣಿ (59) ಹೃದಯಾಘಾತದಿಂದ ನಿದನ ಹೊಂದಿದ್ದಾರೆ.
ಕರ್ತವ್ಯದಲ್ಲಿದ್ದ ವಿಶೇಷ ತಹಶೀಲ್ದಾರ್ ಎ ಜಿ ಖೇಣಿಯವರು ಮದ್ಯಾಹ್ನದ ಅವಧಿಯಲ್ಲಿ ಹೋಟೇಲ್ ಗೆ ಊಟ ಮಾಡಲೆಂದು ಹೋದಾಗ ಕುಸಿದು ಬಿದ್ದಿದ್ದರು.ಕೋಡಲೇ ಸಿಬಂದಿಗಳು ಹಾಗೂ ಸ್ಥಳೀಯರು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಿಗ್ಗೆ ಮೃತ ಪಟ್ಟಿದ್ದಾರೆಸಾವನ್ನಪ್ಪಿದ್ದಾರೆ.ಕೆಲವು ವರ್ಷಗಳಿಂದ ಮೂಲ್ಕಿ ತಾಲೂಕು ರಚನೆಗೆ ಸ್ಥಳೀಯರಿಂದ ಹೋರಾಟ ವ್ಯಕ್ತವಾದಾಗ ಕ್ಷೇತ್ರದ ಶಾಸಕ ಕೆ ಅಭಯಚಂದ್ರ ಜೈನ್ ಮುತುವರ್ಜಿಯಲ್ಲಿ ಸಿದ್ದರಾಮಯ್ಯ ನೇತ್ರತ್ವದ ಸರ್ಕಾರವು ಆಡಳಿತ ವಹಿಸಿಕೊಂಡ ಆರಂಭದಲ್ಲಿ ಮೂಲ್ಕಿಗೆ ಎ ಜಿ ಖೇಣಿಯವರನ್ನು ವಿಶೇಷ ತಹಶೀಲ್ದಾರಿಗೆ ನೇಮಿಸಿದ್ದರು. ಮೂಲ್ಕಿ ಹೋಬಳಿಗೆ ಸ್ಥಾನಮಾನ ದೊರೆತು ವಿಶೇಷ ತಹಶಿಲ್ದಾರ್ ನೆಲೆಯಲ್ಲಿ ಅಧಿಕಾರ ವಹಿಸಿಕೊಂಡಿದ್ದರು.ಉತ್ತರಕನ್ನಡದ ಅಂಕೋಲದವರಾಗಿದ್ದ ಖೇಣಿಯವರು ಯಲ್ಲಾಪುರ,ಕುಮುಟಾದಲ್ಲಿ ಸೇವೆ ಸಲ್ಲಿಸಿ ಕಳೆದ ಮೂರು ವರ್ಷಗಳಿಂದ ಮೂಲ್ಕಿಯಲ್ಲಿ ಎ ಗ್ರೇಡ್ ಅಧಿಕಾರಿಯಾಗಿ ವಿಶೇಷ ತಹಶೀಲ್ದಾರ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.ತೀರ ಮೃದು ಸ್ವಭಾವದವಾರಾಗಿದ್ದು ಮೂಲ್ಕಿಯ ಕಾರ್ನಾಡಿನಲ್ಲಿ ನಾಡ ಕಚೇರಿಗೆ ನೂತನ ಕಟ್ಟಡದ ನಿರ್ಮಾಣಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿ ಯಶಸ್ವಯಾಗಿದ್ದರು.ಇದೀಗ ನೂತನ ಕಟ್ಟಡವು ಪೂರ್ಣಗೊಳ್ಳುವ ಹಂತದಲ್ಲಿದ್ದು ಆದರೆ ಅವರಿಗೆ ಕಟ್ಡಡದಲ್ಲಿ ಕುಳಿತುಕೊಳ್ಳುವ ಭಾಗ್ಯ ಸಿಕ್ಲಿಲ್ಲ. ಮೃತರು ಪತ್ನಿ, ಒರ್ವ, ಪುತ್ರ ಹಾಗೂ ಇರ್ವರು ಪುತ್ರಿಯರನ್ನು ಅಗಲಿದ್ದಾರೆ.

Mulki-30121502 Mulki-30121503

Comments

comments

Comments are closed.

Read previous post:
Mulki-30121501
ಎ.ಡಿ.ಜಿ ಆಯ್ಕೆ ಡಾ.ಪ್ರವೀಣ್ ವಿ.ಪುತ್ರನ್

ಮೂಲ್ಕಿ: ಮೂಲತಃ ಮೂಲ್ಕಿ ಒಡೇರುಬೆಟ್ಟು ನಿವಾಸಿ ಡಾ.ಪ್ರವೀನ್ ವಿ.ಪುತ್ರನ್‌ ಅವರು ನವದೆಹಲಿ ಇಂಡಿಯನ್ ಕೌನ್ಸಿಲ್ ಆಫ್ ಎಗ್ರಿಕಲ್ಚರಲ್ ರೀಸರ್ಚ್(ಐಸಿಎಆರ್)ನ ಎಡಿಜಿ(ಅಸಿಸ್ಟೆಂಟ್ ಡೈಕ್ಟರ್ ಜನರಲ್) ಆಗಿ ಆಯ್ಕೆಯಾಗಿದ್ದಾರೆ. ಕೇಂದ್ರ ಸರಕಾರದ...

Close