ರಾಷ್ಟ್ರೀಯ ಸೇವಾ ಯೋಜನೆ ಮುಖ್ಯ

ಮೂಲ್ಕಿ: ಪರಿಸರದ ಅಧ್ಯಯನ,ಉತ್ತಮ ಸಂಸ್ಕಾರ,ಸಮಾಜ ಜೀವನದ ತಿಳುವಳಿಕೆಯೊಂದಿಗೆ ಸ್ವಾವಲಂಭಿ ಜೀವನ ಕಲಿಕೆಗೆ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಭಿರಗಳ ಪೂರಕವಾಗಿವೆ ಎಂದು ಹಿರಿಯ ಪ್ರಗತಿಪರ ಕೃಷಿಕ ಪುತ್ತೂರು ಬಾಳಿಕೆ ಮನೆ ರಾಮದಾಸ ಶೆಟ್ಟಿ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಂದ ಅತಿಕಾರಿ ಬೆಟ್ಟು ಗ್ರಾಮದ ಮೊಲೊಟ್ಟು ನಡೆಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಸಭಾಂಗಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮನೆ ಹಿರಿಯರಲ್ಲಿ ದೇವರನ್ನು ಕಾಣುವ ಹಾಗೂ ಮೇಲು ಕೀಳು ಎನ್ನುವ ಭಾವನೆ ದೂರವಿಟ್ಟು ಸರ್ವರಲ್ಲಿಯೂ ಸಮಾನ ಮನೋಭಾವನೆಯನ್ನು ಯುವ ಸಮಾಜ ಮೂಡಿಸಿಕೊಂಡಲ್ಲಿ ಎಲ್ಲಾ ಕಡೆಯಲ್ಲಿಯೂ ಶಾಂತಿ ಸಮಾಧಾನ ಮೂಡುತ್ತದೆ ಇಂತಹ ಮೌಲ್ಯಾಧಾರಿತ ಶಿಕ್ಷಣ ಕಲಿಕೆಗೆ ರಾಷ್ಟ್ರೀಯ ಸೇವಾ ಯೋಜನೆ ಮುಖ್ಯ ಭೂಮಿಕೆಯಾಗಿದೆ ಎಂದರು.
ವಿಜಯಾ ಕಾಲೇಜು ವಿಶ್ವಸ್ಥ ಮಂಡಳಿಯ ಸದಸ್ಯೆ ಶಮೀನಾ ಆಳ್ವಾರವರು ಮಾತನಾಡಿ, ವಿದ್ಯಾರ್ಥಿಗಳು ನೀಡುವ ಸೇವೆಯು ಸಮಾಜ ಸೇವೆಯ ಪ್ರಥಮ ಮೆಟ್ಟಿಲಾಗಿದ್ದು ತಮ್ಮ ಕಾರ್ಯ ಚಟುವಟಿಕೆಗಳು ಗ್ರಾಮೀಣ ಜನರನ್ನು ಇನ್ನೂ ಹತ್ತಿರಕ್ಕೆ ತರುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್ ವಹಿಸಿದ್ದರು. ಅತಿಕಾರಿಬೆಟ್ಟು ಪಂಚಾಯತಿ ಅಧ್ಯಕ್ಷೆ ಶಾರದಾ ವಸಂತ್ ಶಿಭಿರ ಉದ್ಘಾಟಿಸಿದರು.
ಕಾಲೇಜು ವಿಶ್ವಸ್ಥ ಮಂಡಳಿ ಸದಸ್ಯ ಡಾ.ಎಂ.ಎ.ಆರ್.ಕುಡ್ವಾ, ಅತಿಕಾರಿಬೆಟ್ಟು ಪಂಚಾಯತಿ ಉಪಾಧ್ಯಕ್ಷ ಕಿಶೋರ್ ಶೆಟ್ಟಿ ದೆಪ್ಪುಣಿ ಗುತ್ತು,ಅಭಿವೃದ್ಧಿ ಅಧಿಕಾರಿ ಯೋಗೀಶ್ ನಾನಿಲ್, ಕಿನ್ನಿಗೋಳಿ ಪಂಚಾಯತಿ ಸದಸ್ಯ ದೇವಪ್ರಸಾದ್ ಪುನರೂರು,ಹಳೆ ವಿದ್ಯಾರ್ಥಿ ಸಂಘ ಅತಿಕಾರಿಬೆಟ್ಟು ಇದರ ಗೌರವಾಧ್ಯಕ್ಷ ವಿಜಯ ಕುಮಾರ್ ಶೆಟ್ಟಿ,ಕಾರ್ಯಾಧ್ಯಕ್ಷ ಉತ್ತಮ್ ಕುಮಾರ್, ಕಾಲೇಜು ವಿದ್ಯಾರ್ಥಿ ನಾಯಕ ಶೋಧನ್ ಶೆಟ್ಟಿ ,ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸಂಪತ್ ಕುಮಾರ್ ಬಿಇ,ಕಾರ್ಯದರ್ಶಿಗಳಾದ ಎಚ್.ಸುಹಾಸ್ ಕಾಮತ್,ಕಾವ್ಯಾ ದೇವಾಡಿಗಾ,ವಸುಂಧರಾ ಮಲ್ಯ,ದುರ್ಗಾಪ್ರಸಾದ್ ದಿವಾಣ ಅತಿಥಿಗಳಾಗಿದ್ದರು.
ಸಂಪತ್ ಕುಮಾರ್ ಸ್ವಾಗತಿಸಿದರು,ಮುರಳಿ ನಿರೂಪಿಸಿದರು.ಸ್ವಾತೀಲಕ್ಷ್ಮೀ ವಂದಿಸಿದರು.

Mulki-30121504

Comments

comments

Comments are closed.