ತಹಾಶಿಲ್ದಾರ್‌ ನೂತನ ಕಚೇರಿ ಉದ್ಘಾಟನೆ

ಮುಲ್ಕಿ: ಮುಂಖ್ಯ ಮಂತ್ರಿಯವರ ಎಚ್‌ಎಫ್‌ಸಿ ಅನುದಾನದಿಂದ ಮುಲ್ಕಿ ಬಸ್ ನಿಲ್ದಾಣಕ್ಕೆ ಸುಮಾರು 1.5 ಕೋಟಿ ರೂ. ನೀಡುವ ಬಗ್ಗೆ ಸರಕಾರ ಭರವಸೆ ನೀಡಿದೆ ಎಂದು ರಾಜ್ಯ ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ತಿಳಿಸಿದರು.
ಮುಲ್ಕಿಯ ಕಾರ್ನಾಡಿನ ಗಾಂಧೀ ಮೈದಾನದ ಬಳಿ ನಿರ್ಮಾಣಗೊಂಡ ವಿಶೇಷ ತಹಾಶಿಲ್ದಾರ್‌ರ ನೂತನ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿಯೇ ಮೊಟ್ಟ ಮೊದಲ ವಿಶೇಷ ತಹಶಿಲ್ದಾರ್ ನೇಮಕವಾಗಿದೆ ಇದು ಮುಲ್ಕಿ ನಜತೆಯ ಭಾಗ್ಯ ಎಂದ ಅವರು, ಜನತೆಯ ನಿರೀಕ್ಷೆಯಂತೆ ಬಪ್ಪನಾಡು ದೇವಸ್ಥಾನಕ್ಕೆ ಅಡ್ಡಿಯಾಗದಂತೆ ರಾ.ಹೆ. ಕಾಮಗಾರಿ ನಡಸಲಾಗುತ್ತಿದೆ. ಶೀಘ್ರ ನೂತನ ಸುಸಜ್ಜಿತ ಮುಲ್ಕಿ ಬಸ್ ನಿಲ್ದಾಣ ಸೇರಿದಂತೆ ಸುಂದರ ನಗರವಾಗಿ ಮಾರ್ಪಡಲಿದೆ ಎಂದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಮುಲ್ಕಿ ತಾಲೂಕು ಮಾಡಬೇಕೆನ್ನುವ ಕೂಗು ಹಲವು ಸಮಯಗಳಿಂದ ಕೇಳಿ ಬರುತ್ತಿವೆ. ಬೇರೆ ಜಿಲ್ಲೆಗಳನ್ನೂ ಗಮನದಲ್ಲಿಟ್ಟುಕೊಂಡು ತಲೂಕು ಘೋಷಣೆಗೆ ಸಾಧಯವಾಗುತ್ತಿಲ್ಲ. ರಾಜ್ಯಾಧ್ಯಂತ ತಾಲೂಕುಗಳ ವಿಂಗಡಣೆಯಾಗುವ ವೇಳೆ ಮುಲ್ಕಿಯನ್ನು ತಾಲೂಕಾಗಿ ಘೋಷಿಸಲಗುವುದು ಎಂದು ಭರವಸೆ ನೀಡಿದ ಜಿಲ್ಲಾಧಿಕಾರಿಗಳು ತಕ್ಷಣದಿಂದಲೇ ವಿಶೇಷ ತಹಶೀಲ್ದಾರ್ ಕಚೇರಿ ಕಾರ್ಯಾರಂಭಿಸಲಿದೆ ಎಂದರು.
ಸಮಾರಂಭದಲ್ಲಿ ಮುಲ್ಕಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರಾ, ತಾಲೂಕು ಪಂಚಾಯತ್ ಸದಸ್ಯೆ ಆಶಾ ತಮ್ಮಪ್ಪಗೌಡ, ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಡಾ. ಖ.ಆರ್. ಅಶೋಕ್, ಮುಲ್ಲಿ ವಿಶೇಷ ತಹಶೀಲ್ದಾರ್ ( ಪ್ರಭಾರ) ಮುಹಮ್ಮದ್ ಇಸಾಕ್ ಮೊದಲಾದವರು ಉಪಸ್ಥಿತರಿದ್ದರು.

Mulki-01011608

Mulki-01011607

Comments

comments

Comments are closed.

Read previous post:
Mulki-01011606
ಮೂಲ್ಕಿ: ಮಾಸಿಕ ವೇತನ ವಿತರಣೆ

ಮೂಲ್ಕಿ: ಮೂಲ್ಕಿಗೆ ಸುಸಜ್ಜಿತ ವಿಶೇಷ ತಹಶೀಲ್ದಾರ್ ಕಚೇರಿ ಲೋಕಾರ್ಪಣೆಗೊಂಡಿದ್ದು ಮೂಲ್ಕಿಯಲ್ಲಿ ಸುಸಜ್ಜಿತ ಬಸ್ಸು ನಿಲ್ದಾಣದ ಜಾಗ ಖರೀದಿಗೆ ಮುಖ್ಯ ಮಂತ್ರಿಯವರು ಎಸ್ ಎಫ್ ಸಿ ಅನುದಾನದಲ್ಲಿ 1.5 ಕೋಟಿ...

Close