ಮೂಲ್ಕಿ: ಮಾಸಿಕ ವೇತನ ವಿತರಣೆ

ಮೂಲ್ಕಿ: ಮೂಲ್ಕಿಗೆ ಸುಸಜ್ಜಿತ ವಿಶೇಷ ತಹಶೀಲ್ದಾರ್ ಕಚೇರಿ ಲೋಕಾರ್ಪಣೆಗೊಂಡಿದ್ದು ಮೂಲ್ಕಿಯಲ್ಲಿ ಸುಸಜ್ಜಿತ ಬಸ್ಸು ನಿಲ್ದಾಣದ ಜಾಗ ಖರೀದಿಗೆ ಮುಖ್ಯ ಮಂತ್ರಿಯವರು ಎಸ್ ಎಫ್ ಸಿ ಅನುದಾನದಲ್ಲಿ 1.5 ಕೋಟಿ ಅನುದಾನ ಮಂಜೂರು ಮಾಡಿದ್ದು ಮುಂದಿನ ದಿನಗಳಲ್ಲಿ ಮೂಲ್ಕಿ ತಾಲೂಕು ರಚನೆಗೆ ಹೆಚ್ಚಿನ ಪ್ರಯತ್ನ ನಡೆಸುವುದಾಗಿ ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ ಅಭಯಚಂದ್ರ ಜೈನ್ ಹೇಳಿದರು.
ದ.ಕ.ಜಿಲ್ಲೆ ಕಂದಾಯ ಇಲಾಖೆಯ ಆಶ್ರಯದಲ್ಲಿ 24 ಲಕ್ಷ ವೆಚ್ಚದಲ್ಲಿ ಮೂಲ್ಕಿಯ ಕಾರ್ನಾಡಿನ ಗಾಂಧಿ ಮೈದಾನದ ಬಳಿಯ ಹಳೇ ನಾಡ ಕಚೇರಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಿಶೇಷ ತಹಶೀಲ್ದಾರ್ ಕಚೇರಿ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಮೂಲ್ಕಿಯ ಸಮಗ್ರ ಅಭಿವೃದ್ದಿಯ ಬಗ್ಗೆ ಚಿಂತನೆ ನಡೆಸುತ್ತಿದ್ದು ಜಿಲ್ಲಾಧಿಕಾರಿಗಳ ಸಹಕಾರದಿಂದ ತಾಲೂಕು ರಚನೆಗೆ ಪೂರಕವಾಗಿ ಹೆಚ್ಚಿನ ಅಭಿವೃದ್ದಿ ಕಾರ್ಯ ಮಾಡುವುದಾಗಿ ತಿಳಿಸಿದರು. ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂರವರು ಮೂಲ್ಕಿಯ ವಿಶೇಷ ತಹಶೀಲ್ದಾರ್ ಕಚೇರಿಯ ಮೇಲಂತಸ್ತಿನಲ್ಲಿ ಮುಂದಿನ 2 ವರ್ಷದೊಳಗೆ 24 ಲಕ್ಷ ವೆಚ್ಚದಲ್ಲಿ ತಾಲೂಕು ಕಚೇರಿಗೆ ಪೂರಕವಾಗಿ ಕಟ್ಟಡ ನಿರ್ಮಿಸಲಾಗುವುದೆಂದು ತಿಳಿಸಿದರು.ಸಭೆಯಲ್ಲಿ ಇತ್ತೀಚೆಗ ನಿಧನರಾದ ವಿಶೆಷ ತಹಶೀಲ್ದಾರ್ ಎ ಜಿ ಖೇಣಿಯವರಿಗೆ ಶೃದ್ದಾಂಜಲಿ ಅರ್ಪಿಸಲಾಯಿತು.ಈ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಸಂಧ್ಯಾ ಸುರಕ್ಷಾ ಮಾಸಿಕ ವೇತನ ವಿತರಿಸಲಾಯಿತು..
ಅಧ್ಯಕ್ಷತೆಯನ್ನು ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ ವಹಿಸಿದ್ದು ಉಪಾಧ್ಯಕ್ಷ ವಸಂತಿ ಭಂಡಾರಿ,ಸದಸ್ಯರಾದ ವಿಮಲ ಪೂಜಾರಿ,ಪುತ್ತು ಬಾವು.ಮೂಲ್ಕಿಯ ಬಪ್ಪನಾಡು ದೇವಳದ ಅನುವಂಶಿಕ ಮೊಕ್ತೇಸರ ಎನ್ ಎಸ್ ಮನೋಹರ್ ಶೆಟ್ಟಿ,ಜಿಲ್ಲಾ ಪಂಚಾಯತ್ ಸದಸ್ಯೆ ಆಶಾ ಸುವರ್ಣ,ಮಂಗಳೂರಿನ ತಹಶೀಲ್ದಾರ್ ಶಿವಶಂಕರ್ ರೈ ಮತ್ತಿತರರು ಉಪಸ್ತಿತರಿದ್ದರು.
ಮಂಗಳೂರಿನ ಸಹಾಯಕ ಆಯುಕ್ತ ಡಿ ಆರ್ ಅಶೋಕ್ ಸ್ವಾಗತಿಸಿದರು,ಪ್ರಭಾರ ವಿಶೇಷ ತಹಶೀಲ್ದಾರ್ ಮೊಹಮ್ಮದ್ ಇಸಾಕ್ ಪ್ರಸ್ತಾವನೆಗೈದರು. ಮೂಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ವಾಣಿ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Mulki-01011605 Mulki-01011606

Comments

comments

Comments are closed.