ವಾರ್ಷಿಕ ಹಸ್ತಪ್ರತಿ ಲಲಿತ್ ಬಿಡುಗಡೆ

ಮೂಲ್ಕಿ: ಮೂಲ್ಕಿಯ ಶ್ರೀ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವವು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರ ದೇವಸ್ಥಾನದ ಅನುವಂಶೀಕ ಮೊಕ್ತೇಸ್ತರರಾದ ಶ್ರೀ ದುಗ್ಗಣ ಸಾವಂತರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಸ್ಥೆಯ ವಾರ್ಷಿಕ ಹಸ್ತಪ್ರತಿ ಲಲಿತ್ ಅನ್ನು ಬಿಡುಗಡೆಗೊಳಿಸಿದ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ಉಪನ್ಯಾಸಕ ರಾದ ಡಾ೧ ಗಣೇಶ್ ಅಮೀನ್ ಸಂಕಮಾರ್ ಅವರು ಮೂಲ್ಕಿಯಂತಹ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಆಸಕ್ತಿ, ಅಭಿರುಚಿ , ಶ್ರಮ ವಹಿಸಿ ತಮ್ಮ ಸಾಧನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದು ಭವಿಷ್ಯದಲ್ಲಿ ಈ ಸಂಸ್ಥೆಯಿಂದ ಉತ್ತಮ ವ್ಯಕ್ತಿಗಳು ಮೂಡಿಬರಲೆಂದು ಹಾರೈಸಿದರು.ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಹರಿಶ್ಚಂದ್ರ ಪಿ ಸಾಲ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ಸಂಸ್ಥೆಯ ಸಂಚಾಲಕರಾದ ಶ್ರೀ ಎಚ್.ವಿ ಕೋಟ್ಯಾನ್ ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ ಕಾರ್ಯದರ್ಶಿ ಬಾಲಚಂದ್ರ ಸನಿಲ್ ಪ್ರಾಂಶುಪಾಲೆ ಮಂಜುಳಾ ಕೆ ವಿ , ಮುಖ್ಯ ಶಿಕ್ಷಕಿ ಯಶೋದ ಎಲ್ ಸಾಲ್ಯಾನ್ ಆಡಳಿತ ಮಂಡಳಿಯ ಸದಸ್ಯರಾದ ಯೋಗೀಶ್ ಕೋಟ್ಯಾನ್ , ರಾಘು ಸುವರ್ಣ ಮತ್ತಿತರರು ನಉಪಸ್ತಿತರಿದ್ದರು.
ಬಾಲಚಂದ್ರ ಸನಿಲ್ ಸ್ವಾಗತಿಸಿದರು. ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ ವಂದಸಿದರು. ಉಪನ್ಯಾಸಕಿ ವನಜಾ ವಾಸು ಹಾಗೂ ಸಹ ಶಿಕ್ಷಕಿ ಹೆಲೆನ್ ಸಿಕ್ವೆರಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.Kinnigoli-02011608

Comments

comments

Comments are closed.

Read previous post:
Kinnigoli-02011607
ಶ್ರೀ ನಾರಾಯಣ ಗುರು ವಾರ್ಷಿಕೋತ್ಸವ

ಮೂಲ್ಕಿ: ಮೂಲ್ಕಿಯ ಶ್ರೀ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಂಸ್ಥೆಯ ಹಳೆ ವಿದ್ಯಾರ್ಥಿನಿಯಾದ ಡಾ. ಪ್ರಕ್ರತಿ ಶ್ರೀನಾಥ್ ಅವರನ್ನು ಶಾಲಾ ಆಡಳಿತ ಮಂಡಳಿಯ ಪರವಾಗಿ...

Close