ಐಕಳ ಕಂಬಳೋತ್ಸವ

ಕಿನ್ನಿಗೋಳಿ : ತುಳುನಾಡಿನ ಜಾನಪದ ಸಂಸ್ಕೃತಿ ಸಂಸ್ಕಾರ ಪರಂಪರೆಯ ಪ್ರತಿಬಿಂಬಿಸುವ ಕಂಬಳ ಹಾಗೂ ಇತರ ಸಂಸ್ಕೃತಿಗಳನ್ನು ಉಳಿಸಿ ಬೆಳಸುವಲ್ಲಿ ಕಾರ್ಯತತ್ಪರರಾಗಬೇಕು ಎಂದು ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷ ಇರ್ವತ್ತೂರು ಭಾಸ್ಕರ ಕೋಟ್ಯಾನ್ ಹೇಳಿದರು.
ಭಾನುವಾರ ನಡೆದ ೪೦ನೇ ವರ್ಷದ ಹೊನಲು ಬೆಳಕಿನ ಐಕಳಬಾವ ಕಾಂತಾಬಾರೆ-ಬೂದಾಬಾರೆ ಜೋಡುಕರೆ ಕಂಬಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುಳುನಾಡಿನ ಇತಿಹಾಸ ಪ್ರಸಿದ್ಧ ಐಕಳಬಾವಾ ಕಾಂತಾಬಾರೆ-ಬೂದಬಾರೆ ಜೋಡುಕೆರೆ ಕಂಬಳವನ್ನು ಐಕಳಬಾವ ಮನೆತನದ ಯಜಮಾನರು ಹಾಗೂ ಐಕಳ ಕಂಬಳ ಸಮಿತಿ ಗೌರವಾಧ್ಯಕ್ಷ ಐಕಳಬಾವ ದೋಗಣ್ಣ ಶೆಟ್ಟಿ ಸಂಪ್ರದಾಯಬದ್ದವಾಗಿ ಸ್ಥಳದ ದೈವ ದೇವರುಗಳಿಗೆ, ಜೋಡುಕೆರೆಗೆ ಪೂಜೆ ಸಲ್ಲಿsಸಿ ದೀಪ ಬೆಳಗಿಸುವ ಮೂಲಕ ಕಂಬಳಕ್ಕೆ ಚಾಲನೆ ನೀಡಿದರು.
ಈ ಸಂಧರ್ಭ ಪಜೀರು ಗೋವನಿತಾಶ್ರಯ ಮತ್ತು ಕುತ್ತಾರು ಬಾಲ ಸಂರಕ್ಷಣಾ ಕೇಂದ್ರದ ಸಂಚಾಲಕ ಡಾ.ಪಿ. ಅನಂತ ಕೃಷ್ಣಭಟ್ ಅವರನ್ನು ಸನ್ಮಾನಿಸಲಾಯಿತು.. ಮುಲ್ಕಿ ವಿಶೇಷ ತಹಾಶಿಲ್ದಾರ್ ಮುಹಮ್ಮದ್ ಇಸ್ಹಾಕ್, ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್, ಜಿಲ್ಲಾ ಕಂಬಳ ಸಮಿತಿಯ ಗುಣಪಾಲ ಕಡಂಬ, ಮುಂಬೈ ಕಂಬಳ ಸಮಿತಿಯ ಅಧ್ಯಕ್ಷ ಕುಶಾಲ್ ಭಂಡಾರಿ ಐಕಳಬಾವ, ಪ್ರಧಾನ ಕಾರ್ಯದರ್ಶೀ ಗಣನಾಥ ಜೆ.ಶೆಟ್ಟಿ, ಕೋಶಾಧಿಕಾರಿ ಪುರಂದರ ವಿ. ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾರ್ಯಧ್ಯಕ್ಷ ಚಿತ್ತರಂಜನ್ ಭಂಡಾರಿ, ಕೋಶಾಧಿಕಾರಿ ಪ್ರಕಾಶ್ ಪಡುಹಿತ್ಲು, ಕಾರ್ಯದರ್ಶಿ ಕೃಷ್ಣಮಾರ್ಲ ಹಿರಿಮನೆ ಐಕಳ, ಸಂಚಾಲಕ ಮುರಳೀಧರ ಶೆಟ್ಟಿ ಐಕಳ, ಭಾಸ್ಕರ ಕೋಟ್ಯಾನ್, ಗುಣಪಾಲ ಕಡಂಬ, ಇರ್ವತ್ತೂರು ಭಾಸ್ಕರ್ ಶೆಟ್ಟಿ, ಬೆಳ್ಳಿಪಾಡಿ ಹರಿಪ್ರಸಾದ್ ರೈ, ಡಾ.ಎಡ್ವಿನ್ ಲೂಯಿಸ್, ಕರ್ನಾಟಕ ಬ್ಯಾಂಕ್‌ನ ಮ್ಯಾನೇಜರ್ ರಘುನಾಥ ಕಾರಂತ, ಕೆ. ಭುವನಾಭಿರಾಮ ಉಡುಪ, ವೈ. ಯೋಗೀಶ್ ರಾವ್, ಸಂಜೀವ ಶೆಟ್ಟಿ ಐಕಳ, ಸಾಯಿನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-03011601 Kinnigoli-03011602 Kinnigoli-03011603 Kinnigoli-03011604 Kinnigoli-03011605 Kinnigoli-03011606

Comments

comments

Comments are closed.

Read previous post:
Kinnigoli-020116010
ರಾಜೀವ ಗಾಂದಿ ಸೇವಾ ಕೇಂದ್ರ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ: ಸರಕಾರ ಜನರಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಯೋಜನೆ ಸದ್ವಿನಿಯೋಗ ಪಡಿಸಿಕೊಳ್ಳಬೇಕು. ಗ್ರಾಮ ಪಂಚಾಯಿತಿಗಳು ಜನರ ಸೇವಾ ಕೇಂದ್ರಗಳಾಗಬೇಕು ಎಂದು ಯುವಜನಾ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್...

Close