ಕಾಂತಾಬಾರೆ- ಬೂದಾಬಾರೆ ಜೋಡುಕರೆ ಕಂಬಳ

ಕಿನ್ನಿಗೋಳಿ: ಧಾರ್ಮಿಕ ಹಾಗೂ ಐತಿಹಾಸಿಕ ಹಿನ್ನಲೆಯ ಐಕಳ ಕಂಬಳ ಜಾತ್ರೆಯ ರೀತಿಯಲ್ಲಿ ನಡೆಯುತ್ತಿದೆ ಇಂತಹ ಕ್ರೀಡೆ ಕೃಷಿಗೆ ಪೂರಕವಾಗಿ ಗ್ರಾಮೀಣ ಜನರ ಜೀವನಾಡಿಯಂತಿದೆ ಎಂದು ಕರ್ನಾಟಕ ವಿಧಾನಪರಿಷತ್ ಸಭಾಪತಿ ಡಿ ಎಚ್. ಶಂಕರಮೂರ್ತಿ ಹೇಳಿದರು
ಭಾನುವಾರ ಐಕಳ ಬಾವ ಕಾಂತಾಬಾರೆ – ಬೂದಾಬಾರೆ ಜೋಡುಕರೆ ಕಂಬಳದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಡಿ.ಎಚ್. ಶಂಕರ ಮೂರ್ತಿ ಹಾಗೂ ಶ್ರೀಮತಿ ಶಂಕರಮೂರ್ತಿ ಅವರನ್ನು ಕಂಬಳ ಸಮಿತಿ ವತಿಯಿಂದ ಗೌರವಿಸಲಾಯಿತು.
ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೂರಕೆ, ಐಕಳ ಕಂಬಳ ಸಮಿತಿ ಅಧ್ಯಕ್ಷ ಐಕಳ ಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾರ್ಯಾಧ್ಯಕ್ಷ ಚಿತ್ತರಂಜನ ಭಂಡಾರಿ ಐಕಳಬಾವ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು , ಮುಂಬಯಿ ಸಮಿತಿ ಅಧ್ಯಕ್ಷ ಕುಶಾಲ್ ಭಂಡಾರಿ ಐಕಳ ಬಾವ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಶಾಂತರಾಮ ಶೆಟ್ಟಿ ಬಾರ್ಕೂರು, ದಾಮಸ್‌ಕಟ್ಟೆ ಕಿರೆಂ ಚರ್ಚ್ ಧರ್ಮಗುರು ಫಾ. ವಿಕ್ಟರ್ ಡಿಮೆಲ್ಲೂ , ರಾಜಗೋಪಾಲ್ ರೈ, ಮುಂಬಯಿ ಮಾತೃಭೂಮಿ ಬ್ಯಾಂಕ್ ಅಧ್ಯಕ್ಷ ರತ್ನಾಕರ ಶೆಟ್ಟಿ , ಹಿಂದ್ ಮಾಜ್ದೂರ್ ಸಂಘದ ರಾಜಾಧ್ಯಕ್ಷ ಸುರೇಶ್‌ಚಂದ್ರ ಶೆಟ್ಟಿ, ವಿವೇಕಾನಂದ ಟ್ರಸ್ಟ್ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ , ಕರ್ನಿರೆ ಸೈಯ್ಯದ್ ಹಾಜಿ, ಕಾಪು ಬಂಟರ ಸಂಘದ ಅಧ್ಯಕ್ಷ ವಾಸುದೇವ ಶೆಟ್ಟಿ, ಕರ್ನಾಟಕ ಬ್ಯಾಂಕ್ ಪ್ರಬಂಧಕ ರಘುರಾಮ ಕಾರಂತ, ವಕ್ ಬೋರ್ಡ್ ಉಪಾಧ್ಯಕ್ಷ ಹಾಜಿ ಗುಲಾಂ ಮೊಹಮ್ಮದ್, ರೋಹಿತ್ ಹೆಗ್ಡೆ, ಬಿ. ಆರ್. ಶೆಟ್ಟಿ , ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ, ಐಕಳ ಗ್ರಾ. ಪಂ. ಅಧ್ಯಕ್ಷ ದಿವಾಕರ ಚೌಟ, ಭಾಸ್ಕರ ಕೋಟ್ಯಾನ್, ಕೊಲ್ನಾಡು ರಾಮಚಂದ್ರ ನಾಯ್ಕ್, ಕಿನ್ನಿಗೋಳಿ ಕೆ. ವಿ. ಎಸ್. ಎಸ್ ಬ್ಯಾಂಕ್ ಅಧ್ಯಕ್ಷ ಲವ ಶೆಟ್ಟಿ, ಕೃಷ್ಣ ಮಾರ್ಲ ಹಿರಿಮನೆ, ಮತ್ತಿತರರು ಉಪಸ್ಥಿತರಿದ್ದರು. ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಐಕಳ ಕಂಬಳ ಫಲಿತಾಂಶ
ಐಕಳ ಕಂಬಳದಲ್ಲಿ 101 ಜೊತೆ ಕೋಣಗಳು ಭಾಗವಹಿಸಿದ್ದವು.

ಕನಹಲಗೆ – 2 ಜೋಡಿ
ವಾಮಂಜೂರು ತಿರುವೈಲುಗುತ್ತು ನವೀನ್‌ಚಂದ್ರ ಆಳ್ವ
(ಓಡಿಸಿದವರು ಮಂದಾರ್ತಿ ಶಿರೂರು ನಾರಾಯಣ ನಾಯ್ಕ) (7 ಕೋಲು ನಿಶಾನೆಗೆ ನೀರು ಹಾಯಿಸಿದೆ. )

ಹಗ್ಗ ಹಿರಿಯ 11 ಜೊತೆ
ಪ್ರಥಮ – ಕೊಳೆಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ (ಓಡಿಸಿದವರು -ಇರ್ವತ್ತೂರು ಆನಂದ)
ದ್ವಿತೀಯ – ಕೊಳಚ್ಚೂರು ಕೊಂಡೊಟ್ಟು ಸುಕುಮಾರ ಶೆಟ್ಟಿ ಬಿ (ಓಡಿಸಿದವರು ಹೊಕ್ಕಾಡಿಗೋಳಿ ಸುರೇಶ್ ಶೆಟ್ಟಿ)

ಹಗ್ಗ ಕಿರಿಯ 16 ಜೊತೆ
ಪ್ರಥಮ ಕಾಂತಾವರ ಅಂಬೋಡಿಮಾರ್ ರಘುನಾಥ ದೇವಾಡಿಗ (ಓಡಿಸಿದವರು ಪಣಪೀಲು ಪ್ರವೀಣ್ ಕೋಟ್ಯಾನ್)
ದ್ವಿತೀಯ ಮೂಡಬಿದ್ರೆ ಹೊಸಬೆಟ್ಟು ಏರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್ ಎ (ಓಡಿಸಿದವರು – ಕೊರಿಂಜೆ ಹೊಸಮನೆ ರೋಹಿತ್‌ಕುಮಾರ್)

ನೇಗಿಲು ಹಿರಿಯ 21 ಜೊತೆ
ಪ್ರಥಮ ಬೋಳದಗುತ್ತು ಸತೀಶ್ ಶೆಟ್ಟಿ (ಓಡಿಸಿದವರು – ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ
ದ್ವಿತೀಯ ಕಾಂತಾವರ ಸೃಷ್ಟಿ ಉದಯ ಅಚ್ಚಣ್ಣ ಶೆಟ್ಟಿ (ಓಡಿಸಿದವರು ಅಳದಂಗಡಿ ರವಿ ಕುಮಾರ್)

ನೇಗಿಲು ಕಿರಿಯ 47 ಜೊತೆ
ಪ್ರಥಮ ಬೋಳದಗುತ್ತು ಸತೀಶ್ ಶೆಟ್ಟಿ ಎ (ಓಡಿಸಿದವರು ಮರೋಡಿ ಶ್ರೀಧರ)
ದ್ವಿತೀಯ ಐಕಳ ಪಟ್ಟೆ ಸಿನೋರ ರೋಶನ್ ಡಿಸೋಜ ಬಿ. (ಓಡಿಸಿದವರು ಕನ್ನಡಿಕಟ್ಟೆ ಮಹಮ್ಮದ್ )

ಅಡ್ಡ ಹಲಗೆ 4 ಜೊತೆ
ಪ್ರಥಮ ಬೋಳಾರ ತ್ರ್ರಿಶಾಲ್ ಕೆ. ಪೂಜಾರಿ (ಓಡಿಸಿದವರು – ಬಂಗಾಡಿ ಕುದ್ಮಾನ್ ಲೋಕಯ್ಯ ಗೌಡ)
ದ್ವಿತೀಯ ಸುರತ್ಕಲ್ ಸರ್ವೋತ್ತಮ ಮಾಧವ ಪ್ರಭು (ಓಡಿಸಿದವರು ಪಣಪೀಲು ರಾಜವರ್ಮ ಮುದ್ದ್ಯ)

Kinnigoli-04011601 Kinnigoli-04011602 Kinnigoli-04011603 Kinnigoli-04011604 Kinnigoli-04011605 Kinnigoli-04011606 Kinnigoli-04011607 Kinnigoli-04011608 Kinnigoli-04011609 Kinnigoli-040116010

Comments

comments

Comments are closed.