ವಿಜಯ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವದ

ಮೂಲ್ಕಿ: ವಿದ್ಯಾರ್ಥಿಗಳ ವಿದ್ಯಾಭ್ಯಾಸ ಕೇವಲ ಪಠ್ಯ ಪುಸ್ತಕಕ್ಕೆ ಮಾತ್ರ ಸೀಮಿತವಾಗದೆ ಇತರ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯು ಉತ್ತಮವಾಗಿ ಜೀವನದ ಉನ್ನತಿ ಗಳಿಸಲು ಸಾಧ್ಯವಾಗುತ್ತದೆ. ಎಂದು ಹಿರಿಯ ಲೆಕ್ಕಪರಿಶೋಧಕರತಾದ ಎಸ್.ಎಸ್. ನಾಯಕ್ ಹೇಳಿದರು.

ವಿಜಯ ಪದವಿ ಪೂರ್ವ ಕಾಲೇಜಿನ 53 ನೇಯ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಾಲಚಂದ್ರ ರಾವ್ ಅವರು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನದ ಕುರಿತು ಮಾಗದರ್ಶಿ ಸಲಹೆಗಳನ್ನು ನೀಡಿ, ವಿದ್ಯಾರ್ಥಿಗಳು ಸ್ವಾವಲಂಭಿಗಳಾಗಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಧನಾತ್ಮಕವಾಗಿ ಭಾಗವಹಿಸಿದಲ್ಲಿ ನಾಯಕತ್ವದ ಗುಣಗಳ ಸಹಿತ ವ್ಯಕ್ತಿತ್ವವನ್ನು ವಿಕಸನಗೊಳಿಸಲು ಸಾಧ್ಯವಿದೆ ಎಂದರು.

ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಕೆ.ಆರ್. ಶಂಕರ್, ಕಾಲೇಜು ವಿಶ್ವಸ್ಥ ಮಂಡಳಿಯ ಡಾ.ಕೆ.ಪಿ ಮಧ್ಯಸ್ಥ,ಡಾ.ಎಂಎ.ಆರ್ ಕುಡ್ವಾ, ವಿ.ಶಿವರಾಂ ಕಾಮತ್, ಶಮಿನಾ ಆಳ್ವಾ, ವಿದ್ಯಾರ್ಥಿನಾಯಕ ಶೋಧನ್ ಶೆಟ್ಟಿ ಉಪಸ್ಥಿತರಿದ್ದರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಮೀದ ಬೇಗಂ ಅವರು ಕಾಲೇಜಿನ ಶೈಕ್ಷಣಿಕ ಸಾಧನೆಯ ಬಗ್ಗೆ ವರದಿವಾಚನ ಮಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಶಿಕ್ಷಕ ವೃಂದಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಆಂಗ್ಲ ಉಪನ್ಯಾಸಕಿ ರೇಷ್ಮಾ ಅವರು ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಅಮಿತಾ ಮ್ಯಾಬೆನ್‌ರವರು ವಂದನಾರ್ಪಣೆಯನ್ನು ಮಾಡಿದರು. ಕಂಪ್ಯೂಟರ್ ವಿಭಾಗದ ಉಪನ್ಯಾಸಕಿ ಕುಮಾರಿ ನಿಮಿತಾರವರು ಕಾರ್ಯಕ್ರಮವನ್ನು ನಿರೂಪಿಸಿದರು.Mulki-05011601

Comments

comments

Comments are closed.

Read previous post:
Kinnigoli-040116011
ಬಾವಿಗೆ ಬಿದ್ದು ಸಾವು

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಮಾರಡ್ಕ ಕಂಬ್ಳ ಎಂಬಲ್ಲಿ ವ್ಯಕ್ತಿಯೋರ್ವರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಅಲ್ಪ್ರೇಡ್ ಡೇಸಾ ಎಂಬುವವರ ಬಾವಿಗೆ ಆಕಸ್ಮಿಕವಾಗಿ ವಲೇರಿಯನ್ ಡಿ’ಸೋಜ ಬಿದ್ದು...

Close