ಸಂವತ – 2016 : ಚಿತ್ರ, ಸಂಗೀತ ಸ್ಪರ್ಧೆ

ಕಿನ್ನಿಗೋಳಿ: ಬಜಪೆ ಥಂಡರ್ ಗೈಸ್ ಫೌಂಡೇಶನ್‌ನ 21ನೇ ವಾರ್ಷಿಕೋತ್ಸವ ’ಸಂವತ 2016’ ಇದರ ಪ್ರಯುಕ್ತ ಜಿಲ್ಲಾ ಮಟ್ಟದ ಚಿತ್ರ ಹಾಗೂ ಸಂಗೀತ ಸ್ಪರ್ಧೆ ಕಿನ್ನಿಗೋಳಿಯ ಉಡುಪ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು. ಮೆನ್ನಬೆಟ್ಟು ಪಂಚಾಯಿತಿ ಉಪಾಧ್ಯಕ್ಷ ಮಾರ್ಗನ್ ವಿಲಿಯಮ್ಸ್, ಉದ್ಯಮಿ ದಿವಾಕರ ಕರ್ಕೇರ, ಡಾ. ಕೆ. ರತೀಶ್ ಉಡುಪ, ಖ್ಯಾತ ಸಂಗೀತಗಾರ್ತಿ ಅರುಣಾ ರಾವ್, ಪ್ರಕಾಶ್ ಆಚಾರ್ಯ, ಥಂಡರ್ ಗೈಸ್‌ನ ಸೂರಜ್ ಶೆಟ್ಟಿ ಮತ್ತಿತರರಿದ್ದರು.
ಚಿತ್ರಕಲೆಯಲ್ಲಿ ಸಬ್ ಜೂನಿಯರ್ ವಿಭಾಗದಲ್ಲಿ ಸಿಂಚನಾ ಅಲೋಶಿಯಸ್ ಉರ್ವ (ಪ್ರಥಮ), ದರ್ಶನ್, ಸಾಗರ್ ಪಡುಬಿದ್ರೆ(ದ್ವಿತೀಯ), ಯಶಲ್ ಕೆ.ಎಸ್. ರೋಟರಿ ಶಾಲೆ ಕಿನ್ನಿಗೋಳಿ(ತೃತೀಯ), ಅಕ್ಷತಾ ಕಾಮತ್, ವ್ಯಾಸಮಹರ್ಷಿ ಮೂಲ್ಕಿ(ಪ್ರೋತ್ಸಾಹಕರ) ಬಹುಮಾನ ಗಳಿಸಿದರೆ ಜೂನಿಯರ್ ವಿಭಾಗದಲ್ಲಿ ಗೌರವ್‌ದೇವ್ ಅಲೋಸಿಯಸ್ ಕೊಡಿಯಾಲ್‌ಬೈಲ್(ಪ್ರಥಮ), ಸ್ನೇಹ ವಿದ್ಯಾದಾಯಿನಿ ಸುರತ್ಕಲ್ (ದ್ವಿತೀಯ), ಮನೀಷ್ ಆರ್. ಹೋಲಿ ಫ್ಯಾಮಿಲಿ ಸುರತ್ಕಲ್ (ತೃತೀಯ), ಎಂ.ಸಿ. ಸುಭಾಶ್ ಅಲೋಶಿಯಸ್ ಉರ್ವ(ಸಮಾಧಾನಕರ) ವಿಜೇತರಾದರು.
ಸಂಗೀತ ಸ್ಪರ್ಧೆಯಲ್ಲಿ ಸಬ್ ಜೂನಿಯರ್‌ನಲ್ಲಿ ಭಾರ್ಗವಿ ವ್ಯಾಸಮಹರ್ಷಿ ಮೂಲ್ಕಿ(ಪ್ರಥಮ), ವೈಷ್ಣವಿ ಭಟ್, ಮಾರ್ನಿಂಗ್ ಸ್ಟಾರ್ ಬಜ್ಪೆ(ದ್ವಿತೀಯ), ಕೌಶಿಕ್ ಎಂಆರ್‌ಎಸ್‌ಎಂ ತೋಕೂರು (ತೃತೀಯ), ಫಾತಿಮಾ ಸಲ್ವಾ, ಅನ್ಸಾರ್ ಬಜಪೆ (ಪ್ರೋತ್ಸಾಹಕರ) ಬಹುಮಾನ ಗಳಿಸಿದರೆ, ಜೂನಿಯರ್ ವಿಭಾಗದಲ್ಲಿ ದರ್ಶನ್ ಎಚ್. ದೇವಾಡಿಗ ವ್ಯಾಸಮಹರ್ಷಿ ಮೂಲ್ಕಿ(ಪ್ರಥಮ), ಕೆ. ಆಶ್ವೀಜಾ ಉಡುಪ ಮೇರಿವೆಲ್ ಕಿನ್ನಿಗೋಳಿ (ದ್ವಿತೀಯ), ಕೆ.ವೈಷ್ಣವಿ ನಾಯಕ್ ಮೇರಿವೆಲ್ ಕಿನ್ನಿಗೋಳಿ (ತೃತೀಯ), ಐಶ್ವರ್ಯ, ವಿದ್ಯಾದಾಯಿನಿ ಸುರತ್ಕಲ್(ಪ್ರೋತ್ಸಾಹಕರ) ಬಹುಮಾನ ಗಳಿಸಿದರು.

Kinnigoli-06011603

Comments

comments

Comments are closed.

Read previous post:
Kinnigoli-06011602
ಯೋಜನೆಗಳನ್ನು ಸದುಪಯೋಗ ಪಡಿಸಿ

ಕಿನ್ನಿಗೋಳಿ: ವಿದ್ಯಾರ್ಥಿಗಳ ಕಲಿಕೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿ ಭವಿಷ್ಯದಲ್ಲಿ...

Close