ಕಟೀಲು ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ಶಿಕ್ಷಣದ ಜೊತೆಗೆ ಕ್ರೀಡೆ, ಯಕ್ಷಗಾನದಂತಹ ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ಕಟೀಲಿನ ವಿದ್ಯಾಲಯಗಳಲ್ಲಿ ಸರ್ವಾಂಗ ಸುಂದರಗೊಳಿಸುವ ಪ್ರಯತ್ನ ಅಭಿನಂದನೀಯ ಎಂದು ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್‌ನ ರಿಜಿಸ್ಟ್ರಾರ್ ರಾಜೇಂದ್ರ ಪ್ರಸಾದ್ ಹೇಳಿದರು.
ಶತಮಾನೋತ್ಸವದ ಸಂಭ್ರಮದಲ್ಲಿರುವ ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕಟೀಲು ದೇವಳದ ಅರ್ಚಕ ಕುಮಾರ ಆಸ್ರಣ್ಣ ಆಶಿರ್ವಚನಗೈದರು.
ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಸುವರ್ಣ, ಕೊಡೆತ್ತೂರು ದೇವಿಪ್ರಸಾದ್ ಶೆಟ್ಟಿ, ನೀಲಯ್ಯ ಕೋಟ್ಯಾನ್, ತಿಮ್ಮಪ್ಪ ಕೋಟ್ಯಾನ್, ಶಾಲಾಭಿವೃದ್ಧಿ ಸಮಿತಿಯ ವೆಂಕಟರಮಣ ಹಗಡೆ, ಕಟೀಲು ರಾಮಚಂದ್ರ ಭಟ್, ಜಗದೀಶ ನಾವಡ, ಶಾಲಾ ಮುಖ್ಯ ಶಿಕ್ಷಕ ವೈ. ಗೋಪಾಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-06011606

Comments

comments

Comments are closed.

Read previous post:
Kinnigoli-06011605
ಕಿನ್ನಿಗೋಳಿ : ಈದ್ ಮಿಲಾದ್

ಕಿನ್ನಿಗೋಳಿ: ಪ್ರವಾದಿ ಮುಹಮ್ಮದ್ ಅವರ ಜೀವನ ಸಂದೇಶ ಸರ್ವಕಾಲಕ್ಕೂ ಮಾದರಿ ಯೋಗ್ಯ. ಎಂದು ಗುತ್ತಕಾಡು ಖಿಲ್ರಿಯಾ ಜುಮ್ಮಾ ಮಸ್ಜಿದ್ ಖತೀಬರಾದ ಪಿ.ಜೆ.ಅಹ್ಮದ್ ಮದನಿ ಅಭಿಪ್ರಾಯಪಟ್ಟರು. ಕಿನ್ನಿಗೋಳಿ ಮುಹ್ಯುದ್ದೀನ್ ಜುಮ್ಮಾ...

Close