ಕಿನ್ನಿಗೋಳಿ : ಈದ್ ಮಿಲಾದ್

ಕಿನ್ನಿಗೋಳಿ: ಪ್ರವಾದಿ ಮುಹಮ್ಮದ್ ಅವರ ಜೀವನ ಸಂದೇಶ ಸರ್ವಕಾಲಕ್ಕೂ ಮಾದರಿ ಯೋಗ್ಯ. ಎಂದು ಗುತ್ತಕಾಡು ಖಿಲ್ರಿಯಾ ಜುಮ್ಮಾ ಮಸ್ಜಿದ್ ಖತೀಬರಾದ ಪಿ.ಜೆ.ಅಹ್ಮದ್ ಮದನಿ ಅಭಿಪ್ರಾಯಪಟ್ಟರು.
ಕಿನ್ನಿಗೋಳಿ ಮುಹ್ಯುದ್ದೀನ್ ಜುಮ್ಮಾ ಮಸೀದಿ ಟ್ರಸ್ಟ್ ಕಮಿಟಿ ಹಾಗೂ ನೂರುಲ್ ಇಸ್ಲಾಂ ಯೂತ್ ಕಮಿಟಿ ವತಿಯಿಂದ ನಡೆದ ಧಾರ್ಮಿಕ ಮತ ಪ್ರವಚನ ಹಾಗೂ ಮಕ್ಕಳ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷ ಕೆ.ಎ.ಅಬ್ದುಲ್ಲ ವಹಿಸಿದ್ದರು.
ಗುತ್ತಕಾಡು ಖಿಲ್ರಿಯಾ ಜುಮ್ಮಾ ಮಸ್ಜಿದ್ ಅಧ್ಯಕ್ಷ ಟಿ.ಎಚ್.ಮಯ್ಯದ್ದಿ, ಮುಹ್ಯುದ್ದೀನ್ ಜುಮ್ಮಾ ಮಸೀದಿ ಗೌರವಾಧ್ಯಕ್ಷ ಕೆ.ಎ.ರಝಾಕ್, ನೂರುಲ್ ಇಸ್ಲಾಂ ಯೂತ್ ಕಮಿಟಿ ಅಧ್ಯಕ್ಷ ರಹೀಂ, ಅಶ್ರಫ್ ಸಖಾಫಿ, ಸಜ್ಜಾದ್ ಆಲಂ ಉಪಸ್ಥಿತರಿದ್ದರು.
ಕೆ.ಎ. ಅಬ್ದುಲ್ಲ ಸ್ವಾಗತಿಸಿದರು. ಮುಹಮ್ಮದ್ ರಫೀಕ್ ವಂದಿಸಿದರು. ಅಬ್ದುಲ್ ರಹಿಮಾನ್ ಮಾಸ್ತರ್ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು ಮೌಲೂದ್ ಪಾರಾಯಣ ಹಾಗೂ ಮಕ್ಕಳ ಶೈಕ್ಷಣಿಕ ಕಾರ್ಯಕ್ರಮ ನಡೆಯಿತು.

Kinnigoli-06011605

Comments

comments

Comments are closed.

Read previous post:
Kinnigoli-06011604
ನಿಡ್ಡೋಡಿ ಗ್ರಾಮೋತ್ಸವ -7 

ಕಿನ್ನಿಗೋಳಿ: ಗಾಂಧೀಜಿಯ ಗ್ರಾಮ ರಾಜ್ಯ ರಾಮ ರಾಜ್ಯದ ಕನಸು ಗ್ರಾಮೋತ್ಸವ ಕಾರ್ಯಕ್ರಮದಿಂದ ಸಾಧ್ಯ ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿ,ಸೋಜ ಹೇಳಿದರು. ಶನಿವಾರ ಜ್ಞಾನರತ್ನ ಎಜ್ಯುಕೇಷನ್...

Close