ಶಾಂತಿ ಸೇವಾ ಸೌಹಾರ್ದಯುಕ್ತ ಜೀವನ ಪಾವನ

ಕಿನ್ನಿಗೋಳಿ: ಯೇಸು ದೇವರ ಶಾಂತಿ ಸೇವಾ ಸ್ನೇಹ ಸೌಹಾರ್ದಯುಕ್ತ ಸಂದೇಶಗಳನ್ನು ಪಾಲಿಸಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ಹಾಗೂ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದಾಗ ಜೀವನ ಪಾವನವಾಗುವುದು ಎಂದು ತಾಳಿಪಾಡಿ ಪೊಂಪೈ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಫಾ. ಜೋರೊಮ್ ಡಿಸೋಜ ಹೇಳಿದರು.

ಕಿನ್ನಿಗೋಳಿ ರೋಟರಿ ರಜತ ಭವನದಲ್ಲಿ ಸೋಮವಾರ ನಡೆದ ಕಿನ್ನಿಗೋಳಿ ರೋಟರಿ, ಇನ್ನರ್‌ವೀಲ್ ಹಾಗೂ ರೋಟರ‍್ಯಾಕ್ಟ್ ಕ್ಲಬ್ ಆಯೋಜಿಸಿದ ಕ್ರಿಸ್ ಮಸ್ ಹಾಗೂ ಹೊಸವರ್ಷದ ಸ್ನೇಹ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ಎಂ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು, ನಿಕಟಪೂರ್ವ ಅಧ್ಯಕ್ಷ ವಿಲಿಯಂ ಸಿಕ್ವೇರಾ, ಕಾರ್ಯದರ್ಶಿ ಜೆರಾಲ್ಡ್ ಮಿನೇಜಸ್, ರೋಟರಿ 3180 ವಲಯ 3 ರ ಅಸಿಸ್ಟೆಂಟ್ ಗವರ್ನರ್ ಸತ್ಯೇಂದ್ರ ಪೈ, ವಲಯ ಸೇನಾನಿ ರಾಬರ್ಟ್ ಪ್ರಾಂಕ್ಲಿನ್ ರೇಗೋ, ಇನ್ನರ್ ವೀಲ್ ಅಧ್ಯಕ್ಷೆ ಪ್ರೀತಿ ಶೆಟ್ಟಿ, ರೋಟರ‍್ಯಾಕ್ಟ್ ಅಧ್ಯಕ್ಷ ಜಾಕ್ಸನ್ ಪಕ್ಷಿಕೆರೆ, ಮೈಕಲ್ ಪಿಂಟೊ ಉಪಸ್ಥಿತರಿದ್ದರು. ಹೆರಿಕ್ ಪಾಯಸ್ ಕಾರ್ಯಕ್ರಮ ನಿರೂಪಿಸಿದರು.

Kinnigoli-06011607

Comments

comments

Comments are closed.

Read previous post:
Kinnigoli-06011606
ಕಟೀಲು ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ಶಿಕ್ಷಣದ ಜೊತೆಗೆ ಕ್ರೀಡೆ, ಯಕ್ಷಗಾನದಂತಹ ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ಕಟೀಲಿನ ವಿದ್ಯಾಲಯಗಳಲ್ಲಿ ಸರ್ವಾಂಗ ಸುಂದರಗೊಳಿಸುವ ಪ್ರಯತ್ನ ಅಭಿನಂದನೀಯ ಎಂದು ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್‌ನ ರಿಜಿಸ್ಟ್ರಾರ್ ರಾಜೇಂದ್ರ ಪ್ರಸಾದ್...

Close