ಯೋಜನೆಗಳನ್ನು ಸದುಪಯೋಗ ಪಡಿಸಿ

ಕಿನ್ನಿಗೋಳಿ: ವಿದ್ಯಾರ್ಥಿಗಳ ಕಲಿಕೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿ ಭವಿಷ್ಯದಲ್ಲಿ ತಾಂತ್ರಿಕತೆಗೆ ಒತ್ತುಕೊಡಬೇಕು. ಎಂದು ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್ ಹೇಳಿದರು.

ತೋಕೂರು ತಪೋವನದ ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ, ಕರ್ನಾಟಕ ಸರಕಾರ 2015ನೇ ಸಾಲಿನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಕೊಡಮಾಡಿದ ವಿವಿಧ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದರು.

ಉಡುಪಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಿನ್ಸಿಪಾಲ್ ಜಗದೀಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಡುಪಣಂಬೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿನೋದ್ ಎಸ್. ಸಾಲ್ಯಾನ್, ಸದಸ್ಯೆ ಲೀಲಾ ಬಂಜನ್ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಿನ್ಸಿಪಾಲ್ ವೈ. ಎನ್. ಸಾಲ್ಯಾನ್ ಸ್ವಾಗತಿಸಿದರು. ತರಬೇತಿ ಆಧಿಕಾರಿ ರಘುರಾಮ್ ರಾವ್ ವಂದಿಸಿದರು. ಕಛೇರಿ ಅಧೀಕ್ಷಕ ಸಂಜೀವ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Kinnigoli-06011602

Comments

comments

Comments are closed.

Read previous post:
Kinnigoli 06011601
ಫೇವರ್ ಫಿನಿಶ್ ರಸ್ತೆ ಕಾಮಗಾರಿ ಶಿಲಾನ್ಯಾಸ

ಕಿನ್ನಿಗೋಳಿ: ಕಟೀಲು ಪಂಚಾಯಿತ ವ್ಯಾಪ್ತಿಯ ವ್ಯಾಪ್ತಿಯ ಗಿಡಿಗೆರೆ ಪೂಪಾಡಿಕಟ್ಟೆ ರಸ್ತೆಗೆ ರೂ. 60 ಲಕ್ಷದಲ್ಲಿ ಫೇವರ್ ಫಿನಿಶ್ ಡಾಮಾರು ರಸ್ತೆ ಕಾಮಗಾರಿಗೆ ಸಚಿವ ಅಭಯಚಂದ್ರ ಜೈನ್ ಶಿಲಾನ್ಯಾಸಗೈದರು. ಇದೇ...

Close