ನಿಡ್ಡೋಡಿ ಗ್ರಾಮೋತ್ಸವ -7 

ಕಿನ್ನಿಗೋಳಿ: ಗಾಂಧೀಜಿಯ ಗ್ರಾಮ ರಾಜ್ಯ ರಾಮ ರಾಜ್ಯದ ಕನಸು ಗ್ರಾಮೋತ್ಸವ ಕಾರ್ಯಕ್ರಮದಿಂದ ಸಾಧ್ಯ ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿ,ಸೋಜ ಹೇಳಿದರು.
ಶನಿವಾರ ಜ್ಞಾನರತ್ನ ಎಜ್ಯುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ) ರತ್ನಗಿರಿ, ನಿಡ್ಡೋಡಿಯಲ್ಲಿ ನಡೆದ ಗ್ರಾಮೋತ್ಸವ -7 ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೋತ್ಸವದ ಪರಿಕಲ್ಪನೆ ಬಗ್ಗೆ ಪತ್ರಕರ್ತ ಹಾಗೂ ಮಾಧ್ಯಮ ತಜ್ಞ ಬೆಂಗಳೂರು ಡಾ. ಮಹೇಶ್ ವಾಳ್ವೇಕರ್ ಮಾತನಾಡಿದರು.
ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಜ್ಞಾನರತ್ನ ಎಜ್ಯುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ) ಉಪಾಧ್ಯಕ್ಷ ಪುರುಷೋತ್ತಮ ಗೌಡ, ಉದ್ಯಮಿ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ, ಸಂಸ್ಥೆಯ ಆಡಳಿತಾಧಿಕಾರಿ ರವಿ ಹಾವೇರಿ, ಪ್ರಿನ್ಸಿಪಾಲ್ ಅನುರಾಧ ಸಾಲಿಯನ್, ಪರಿಮಳ ಆರ್. ಆಚಾರ್ಯ ಮತ್ತು ಕುಮಾರಿ ಜಯಲಕ್ಷ್ಮಿ ಉಪಸ್ಥಿತರಿದ್ದರು.
ಜ್ಞಾನರತ್ನ ಎಜ್ಯುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ) ಅಧ್ಯಕ್ಷ ಭಾಸ್ಕರ ದೇವಸ್ಯ ಸ್ವಾಗತಿಸಿದರು. ಸಂಧ್ಯಾ ಮತ್ತು ಜಯಂತ್ ಆಜೇರು ಕಾರ್ಯಕ್ರಮ ನಿರೂಪಿಸಿದರು.

Kinnigoli-06011604

Comments

comments

Comments are closed.

Read previous post:
Kinnigoli-06011603
ಸಂವತ – 2016 : ಚಿತ್ರ, ಸಂಗೀತ ಸ್ಪರ್ಧೆ

ಕಿನ್ನಿಗೋಳಿ: ಬಜಪೆ ಥಂಡರ್ ಗೈಸ್ ಫೌಂಡೇಶನ್‌ನ 21ನೇ ವಾರ್ಷಿಕೋತ್ಸವ ’ಸಂವತ 2016’ ಇದರ ಪ್ರಯುಕ್ತ ಜಿಲ್ಲಾ ಮಟ್ಟದ ಚಿತ್ರ ಹಾಗೂ ಸಂಗೀತ ಸ್ಪರ್ಧೆ ಕಿನ್ನಿಗೋಳಿಯ ಉಡುಪ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು....

Close