ಕನ್ನಡ ಸಾಹಿತ್ಯದ ಒಲವು ಕನ್ನಡಿಗರಲ್ಲಿರಬೇಕು

ಕಿನ್ನಿಗೋಳಿ: ಕನ್ನಡ ಸಾಹಿತ್ಯದ ಒಲವು ಕನ್ನಡಿಗರಲ್ಲಿರಬೇಕು. ಕವಿಗಳು ಅನೇಕ ಅರ್ಥ ವಿಸ್ತಾರಗಳನ್ನು ನೀಡಿದಾಗ ಕ್ರಿಯಾಶೀಲತೆಗೆ ಇನ್ನಷ್ಟು ನೆರವು ಸಿಗುತ್ತದೆ ಎಂದು ಹಿರಿಯ ಸಾಹಿತಿ ಡಾ| ನಾ. ಮೊಗಸಾಲೆ ಮಾತನಾಡಿದರು.
ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ 514ನೇ ಕೃತಿ ಶಾಂತಾ ಎಚ್.ಎನ್. ರಚಿತ ” ‘ಝೇಂಕಾರ’ ಕವನ ಸಂಕಲನವನ್ನು ಗುರುವಾರ ಯುಗಪುರುಷ ಸಭಾಭವನದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.

ಈ ಸಂದರ್ಭ ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಯುಗಪುರುಷ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಸುಮ ಸೌರಭ ಸಂಪಾದಕ ಎಂ.ಜೆ.ರಾವ್, ಸಾಹಿತಿಗಳಾದ ಹರಿಶ್ಚಂದ್ರ ಸಾಲ್ಯಾನ್, ಉದಯಕುಮಾರ್ ಹಬ್ಬು, ಲೇಖಕಿ, ಕವಿ ಶಾಂತಾ ಎಚ್.ಎನ್., ಬಾಲಕೃಷ್ಣ ಆಚಾರ್ಯ, ದೇವಪ್ರಸಾದ್ ಪುನರೂರು, ಪತ್ರಕರ್ತ ಶರತ್ ಶೆಟ್ಟಿ ಉಪಸ್ಥಿತರಿದ್ದರು.

Kinnigoli-07011601

Comments

comments

Comments are closed.