ಧರ್ಮದಲ್ಲಿ ದಾನವತೆ ಬೆಳೆಸುತ್ತದೆ

ಮಂಗಳೂರು: ಧರ್ಮದ ರಕ್ಷಣೆಯನ್ನು ಮಾಡುವ ಮೂಲಕ ಧರ್ಮದಲ್ಲಿ ದಾನವತೆಯು ಬೆಳೆಯುತ್ತದೆ, ಧರ್ಮದ ಆಳ ಅಧ್ಯಯನ ನಡೆಸುವ ಪೌರೋಹಿತ್ಯವು ಶ್ರದ್ಧೆ-ಸಂಸ್ಕಾರದಿಂದ ಕೂಡಿರಬೇಕು, ಜನಮನದೊಳಗೆ ಹುದುಗಿರುವ ಅಜ್ಞಾನವನ್ನು ಕಳೆದು ಸುಜ್ಞಾನದ ಶಾಂತಿ ಮಂತ್ರವನ್ನು ಪಠಿಸುವ ಪ್ರೇರಣೆಗೆ ಧಾರ್ಮಿಕತೆಯ ನೈಜತೆಯೇ ಸಾರ ಎಂದು ಅಂತಾರಾಷ್ಟ್ರೀಯ ವಾಸ್ತು ತಜ್ಞ, ವೈಜ್ಞಾನಿಕ ಜ್ಯೋತಿಷಿ, ಆಧ್ಯಾತ್ಮಿಕ ವಿಶ್ವಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಅವರು ಬೆಂಗಳೂರಿನ ವಿದ್ಯಾಪೀಠದಲ್ಲಿ ನಡೆದ ಸರಳ ಕಾರ್ಯಕ್ರಮವೊಂದರಲ್ಲಿ ಪೌರೋಹಿತ್ಯದಲ್ಲಿ ಹಾಗೂ ಧಾರ್ಮಿಕತೆಯ ವಿಶೇಷ ಉಪಾಸನೆಗೈಯುತ್ತಿರುವ ವೇದಬ್ರಹ್ಮ ವೇ.ಮೂ.ಕೆ.ಎಸ್.ರಾಘವೇಂದ್ರ ಭಟ್‌ರವರನ್ನು ವಿಶೇಷವಾಗಿ ಆಶ್ರಮದ ವತಿಯಿಂದ ಸಮ್ಮಾನಿಸಿ ಆಶೀರ್ವಚನ ನೀಡಿದರು.
ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಕೆ.ಎಸ್.ರಾಘವೇಂದ್ರ ಭಟ್ ಮಾತನಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಅನಾವರಣಗೊಳಿಸಿ, ಇಲ್ಲಿನ ವಾಸ್ತು ಶೈಲಿಯ ಇತಿಹಾಸವನ್ನು ಜಗತ್ತಿಗೆ ತಿಳಿಹೇಳುತ್ತಿರುವ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಸಾಧನೆ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ್, ವೇ.ಮೂ.ಹರೀಶ್ ಭಟ್, ಹಿರಿಯ ನಿವೃತ್ತ ಐಪಿಎಸ್ ಅಧಿಕಾರಿ ಡಾ.ವೆಂಕಟೇಶ್ವರ ರಾವ್, ಪೊಲೀಸ್ ಅಧಿಕಾರಿ ಹರಿಶೇಖರನ್, ಕಾನೂನು ಸಲಹೆಗಾರರಾದ ಸುಪ್ರೀಂ ಕೋರ್ಟ್‌ನ ನ್ಯಾಯವಾದಿ ಎಂ.ಎಸ್.ಶ್ಯಾಮ ಸುಂದರ್ ಇನ್ನಿತರರು ಉಪಸ್ಥಿತರಿದ್ದರು.
Mulki-1101601

Comments

comments

Comments are closed.

Read previous post:
Mulki-0901502
ಎಸ್.ಕೆ.ಎಸ್.ಎಸ್.ಎಫ್ ಪೋಸ್ಟರ್‌ ಬಿಡುಗಡೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್ ನೇತೃತ್ವದಲ್ಲಿ ಜ. 17 ರಂದು ಮಂಗಳೂರು ಪುರಭವನದಲ್ಲಿ ನಡೆಯಲಿರುವ ಪ್ರವಾದಿ (ಸ.ಅ) ಸಹಿಷ್ಣುತೆ ಸ್ನೇಹ ದೂತ ಕಾರ್ಯಕ್ರಮದ ಪೋಸ್ಟರ್‌ಗಳನ್ನು ಎಸ್.ಕೆ.ಎಸ್.ಎಸ್.ಎಫ್...

Close