ಸಿನಿಮಾ ಜೀವನ ರಾಕ್‌ಲೈನ್ ವೆಂಕಟೇಶ್

ಮಂಗಳೂರು: ನನ್ನೆಲ್ಲಾ ಸಿನಿಮಾ ಜೀವನದ ಸಾಧನೆಗೆ ಮೂಲ ಪ್ರೇರಣೆಯಾಗಿ ಗುರುಶಕ್ತಿಯನ್ನು ಭಕ್ತಿಯ ಆರಾಧನೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದ ವಿಶ್ವಗುರುವಿನ ಸ್ಥಾನಮಾನ ಹೊಂದಿರುವ ಪರಮಪೂಜ್ಯ ಶ್ರೀ ಚಂದ್ರಶೇಖರ ಸ್ವಾಮೀಜಿಯವರೇ ಪರೋಕ್ಷ ಕಾರಣವಾಗಿದ್ದಾರೆ. ಪ್ರತೀ ಚಿತ್ರದ ಪ್ರಾರಂಭಕ್ಕೆ ಅವರೇ ಆರಂಭಿಕ ಪ್ರೋತ್ಸಾಹಕರು, ಭವಿಷ್ಯದಲ್ಲೂ ಇನ್ನಷ್ಟು ಚಿತ್ರಗಳನ್ನು ನೀಡುವ ಚೈತನ್ಯವನ್ನು ನೀಡಿದ್ದಾರೆ ಎಂದು ಕನ್ನಡ ಚಿತ್ರರಂಗದ ನಟ ನಿರ್ಮಾಪಕ, ವಿತರಕರಾಗಿ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಧೀರ ರಾಕ್‌ಲೈನ್ ವೆಂಕಟೇಶ್ ಹೇಳಿದರು.
ಅವರು ಮೂಲ್ಕಿಯ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಆಶ್ರಮದಲ್ಲಿ ನಡೆದ ಪೂಜ್ಯ ಸ್ವಾಮೀಜಿಯವರ ಸಹೋದರಿಯ ಪುತ್ರಿ ಅನುಶ್ರೀಯವರ ಮದುವೆಯ ನಿಶ್ಚಿತಾರ್ಥದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಆಶ್ರಮದ ವತಿಯಿಂದ ವಿಶೇಷವಾದ ಸಮ್ಮಾನವನ್ನು ಸ್ವೀಕರಿಸಿ ಸ್ವಾಮೀಜಿಯವರ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು.
ಶುಭ ಕಾರ್ಯಕ್ರಮಕ್ಕೆ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಶುಭಾಶೀರ್ವಾದವನ್ನು ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಸಹಿತ ರಾಜಕೀಯ ವಲಯದ ಪ್ರಮುಖರು, ಸಿನಿಮಾ ರಂಗದ ದಿಗ್ಗಜರು, ಉದ್ಯಮಿಗಳ ಸಹಿತ ಸ್ವಾಮೀಜಿಯವರ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ್, ಹಿರಿಯ ಸಾರಿಗೆ ಅಧಿಕಾರಿ ಜಿ.ಪಿ.ಕೃಷ್ಣಾನಂದ, ಮಂಗಳೂರಿನ ಉದ್ಯಮಿ ರಾಜೇಶ್ ಆಚಾರ್ಯ, ಸಾದಿಕ್ ಅಹ್ಮದ್ ಉಡುಪಿ, ಆಶ್ರಮದ ಸಂಚಾಲಕರಾದ ಗಿರೀಶ್ ಕಾಮತ್  ಮೂಲ್ಕಿ, ಸ್ವಾಮೀಜಿಯವರ ಕುಟುಂಬಿಕರು ಭಾಗವಹಿಸಿದ್ದರು.
ಶ್ರದ್ಧೆ-ಶ್ರಮದ ಸಾಂಘಿಕತೆಯಿಂದ ಪ್ರತಿಯೋರ್ವ ವ್ಯಕ್ತಿ ಯಶಸ್ಸಾಗಲು ಸಾಧ್ಯ, ಸಿನಿಮಾ ಜಗತ್ತು ಸಮಾಜ ಸುಧಾರಣೆಯ ಪ್ರತೀಕವಾಗಿದೆ. ಪಂಡಿತ-ಪಾಮರ, ಬಡವ-ಶ್ರೀಮಂತ ಎಂಬ ಭೇಧವಿಲ್ಲದ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವೇ ನಿಜವಾದ ಸಮಾಜಸೇವೆ, ರಕ್ತ ಮತ್ತು ಹಣ ಎಂದಿಗೂ ಶಾಶ್ವತವಲ್ಲ, ಆದರೆ ಇವೆರಡರಲ್ಲೂ ಗುಣವಿಶೇಷತೆ ಇದ್ದರೆ ಮಾತ್ರ ಆತ ಬೆಳಗಿ-ಅರಳಲು, ಬಾಳಿ-ಬದುಕಲು ಸಾಧ್ಯವಿದೆ.
Narendrea Kerekadu
Mulkli-12011606

Comments

comments

Comments are closed.