ಮೂಲ್ಕಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದ ಭೇಟಿ

ಮೂಲ್ಕಿ: ಧಾರ್ಮಿಕ ಸಾಮರಸ್ಯದೊಂದಿಗೆ ಹಿಂದೂ ಸಮಾಜದ ಉದಾರಕ್ಕಾಗಿ ದೇಗುಲಗಳು ಹಾಗೂ ಮಠ ಮಂದಿರಗಳು ಶ್ರಮಿಸಬೇಕು ಎಂದು ಪೇಜಾವರ ಶ್ರೀ ಅಧೋಕ್ಷಜ ಮಠಾದೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದರು.
ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿನೀಡಿ ಶ್ರೀ ದೇವಿಗೆ ಆರತಿ ಎತ್ತಿ ಬಳಿಕ ಆಶೀರ್ವಚನ ನೀಡಿದರು.
ಹಿಂದೂ ಧರ್ಮೀಯರು ಯಾವುದೇ ಧರ್ಮ ಭೇದ ಇಲ್ಲದೆ ಸಂಘಟಿತರಾದಲ್ಲಿ ಮಾತ್ರ ಸಾಮಾಜಿಕ ಉನ್ನತಿ ಸಾಧ್ಯವಾಗಲಿದ್ದು ಈಬಾರಿಯ ಪರ್ಯಾಯ ಕಾಲದಲ್ಲಿ ಸಮಾಜದ ಉನ್ನತಿಗಾಗಿ ಬಹಳಷ್ಟು ಯೋಜನೆಗಳನ್ನು ಪ್ರಕಟಿಸಲಿದ್ದೇವೆ. ತಮ್ಮ ಪರ್ಯಾಯದ ಅವಧಿಯಲ್ಲಿ ಎಲ್ಲರೂ ಸದಾ ಭೇಟಿ ನೀಡುವುದರೊಂದಿಗೆ ಸಮಾಜ ಉದ್ದಾರ ಕಾರ್ಯಗಳಲ್ಲಿ ಸಹಕರಿಸಬೇಕು ಎಂದರು.
ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಮತ್ತು ಕ್ಷೇತ್ರದ ಆಡಳಿತ ಮೊಕ್ತೇಸರರಾದ ಮನೋಹರ ಶೆಟ್ಟಿಯವರು ಶ್ರೀಗಳನ್ನು ಸ್ವಾಗತಿಸಿದರು, ಕ್ಷೇತ್ರದ ಅರ್ಚಕರಾದ ಶ್ರೀಪತಿ ಉಪಾದ್ಯಾಯ ಮತ್ತು ನರಸಿಂಹ ಭಟ್ ಪೂಜಾ ಪುನಸ್ಕಾರಾದಿಗಳನ್ನು ನೆರವೇರಿಸಿದರು.ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪಾದೆಮನೆ ಜಯಂತ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಜಯಮ್ಮ.ಮೂಲ್ಕಿ ಪಟ್ಟಣ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಸುನಿಲ್ ಆಳ್ವಾ, ಮೂಲ್ಕಿ ಸೀಮೆ ಕಂಬಳ ಸಮಿತಿಯ ಅಧ್ಯಕ್ಷ ರಾಮಚಂದ್ರ ನಾಯ್ಕ್,ಅರವಿಂದ ಪೂಂಜಾ,ಮುರಳೀಧರ ಭಂಡಾರಿ,ಎನ್.ಪಿ.ಶೆಟ್ಟಿ,ನಾಗೇಶ್ ಶೇರಿಗಾರ್, ವೈ.ಎನ್.ಸಾಲ್ಯಾನ್,ಹರಿಶ್ಚಂದ್ರ ಪಿ.ಸಾಲ್ಯಾನ್, ಎಚ್.ವಿ.ಕೋಟ್ಯಾನ್, ವಾಮನ ನಡಿಕುದ್ರು, ದೇವಳದ ಪ್ರಭಂದಕ ಶಿವಶಂಕರ ಬಿ ಮತ್ತಿತರರಿದ್ದರು.

Mulkli-12011607

Comments

comments

Comments are closed.

Read previous post:
Mulkli-12011606
ಸಿನಿಮಾ ಜೀವನ ರಾಕ್‌ಲೈನ್ ವೆಂಕಟೇಶ್

ಮಂಗಳೂರು: ನನ್ನೆಲ್ಲಾ ಸಿನಿಮಾ ಜೀವನದ ಸಾಧನೆಗೆ ಮೂಲ ಪ್ರೇರಣೆಯಾಗಿ ಗುರುಶಕ್ತಿಯನ್ನು ಭಕ್ತಿಯ ಆರಾಧನೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದ ವಿಶ್ವಗುರುವಿನ ಸ್ಥಾನಮಾನ ಹೊಂದಿರುವ ಪರಮಪೂಜ್ಯ ಶ್ರೀ ಚಂದ್ರಶೇಖರ ಸ್ವಾಮೀಜಿಯವರೇ ಪರೋಕ್ಷ...

Close