ಮನೆಯಲ್ಲಿ ವಿದ್ಯುತ್ ಶಾಟ್ ಸರ್ಕಿಟ್ ನಷ್ಟ

ಹಳೆಯಂಗಡಿ: ಪಂಚಾಯತ್ ವ್ಯಾಪ್ತಿಯ ಇಂದಿರಾನಗರದ ಶಾಲೆಯ ಬಳಿಯ ಮನೆಯೊಂದರಲ್ಲಿ ಇಂದು ಬೆಳಿಗ್ಗೆ ಮನೆಯ ವಯರಿಂಗ್ ನಲ್ಲಿ ವಿದ್ಯುತ್ ಶಾರ್ಟ್ ಸಂಭವಿಸಿ ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳು,ಮರದ ಮಂಚ,ಕಪಾಟುಗಳು ಸೇರಿದಂತೆ ಸಂಪೂರ್ಣ ಬೆಂಕಿ ಗಾಹುತಿಯಾಗಿದ್ದು ಮನೆಯ ಮಾಡು ಸಂಪೂರ್ಣ ಬೆಂಕಿಯಲ್ಲಿ ಹೊತ್ತಿ ಹೋಗಿದೆ.
ಇಂದಿರಾ ನಗರದ ನಿವಾಸಿ ದಾವುದ್ ರ ಮನೆಯಲ್ಲಿ ಘಟನೆ ಸಂಭವಿಸಿದ್ದು ಆ ಸಂದರ್ಭದಲ್ಲಿ ಮನೆಯಲ್ಲಿ ದಾವುದ್ ಇದ್ದು ಪ್ರಾಣಾಪಯದಿಂದ ಪಾರಾಗಿದ್ದಾರೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಮನೆಯ ಸ್ವಿಚ್ ಬೋಡ್ ನಲ್ಲಿ ಶಾಟ್ ಸರ್ಕಿಟ್ ಆಗಿ ಬೆಂಕಿ ಹೊತ್ತಿ ಮನೆಯ ಮಾಡಿಗೆ ತಗಲಿ ಮನೆಯ ಹಂಚಿನ ಮಾಡಿನ ಮರದ ಫಕ್ಕಾಸು,ರೀಪುಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ,ಮನೆಯಲ್ಲಿದ್ದ ರೆಫ್ರಿಜರೇಟರ್,ಟಿ,ವಿ,ವಿದ್ಯುತ ಉಪಕರಣಗಳು,ಕಪಾಟು,ಮರದ ಮಂಚ ಹಾಗೂ ಹಲವಾರು ದಾಖಲೆ ಪತ್ರಗಳು ಬೆಂಕಿಗಾಹುತಿಯಾಗಿದೆ,ಕೂಡಲೇ ಸ್ತಳೀಯರು ಧಾವಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ.ಬಳಿಕ ಸ್ಥಳೀಯರು ನೀರಿನ ಟ್ಯಾಂಕರ್ ತಂದು ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ. ಸುಮಾರು 3 ಲಕ್ಷಕ್ಕೂ ಮಿಕ್ಕಿ ನಷ್ಟವಾಗಿದೆಯೆಂದು ಅಂದಾಜಿಸಲಾಗಿದೆ.
ಬೆಂಕಿ ತಗಲಿದ ಕೂಡಲೇ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದು ಮಂಗಳೂರಿನಿಂದ ಆಗ್ನಿ ಶಾಮಕ ದಳದವರು ಬಂದಿದ್ದು ಬಳಿಕ ಹಳೆಯಂಗಡಿಯಲ್ಲಿ ರೈಲ್ವೆ ಗೇಟು ಹಾಕಿದ್ದರಿಂದ ಸುಮಾರು 15 ನಿಮಿಷ ಕಾಯ ಬೇಕಾಯಿತು. ಅಗ್ನಿ ಶಾಮಕ ದಳದವರು ಬರುವ ಮೊದಲು ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದಾರೆ.ಮೂಲ್ಕಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಹಳೆಯಂಗಡಿ ಪಂಚಾಯತ್ ಅಧ್ಯಕ್ಷೆ ಜಲಜ,ಮಾಜಿ ಅಧ್ಯಕ್ಷ ವಸಂತ ಬೆರ್ನಾಡ್, ಅಬ್ದುಲ್ ಖಾದರ್, ಕಂದಾಯ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ದಾವುದ್ ಮನೆಯಲ್ಲಿ ಒಬ್ಬನೆ ವಾಸಿಸುತ್ತಿದ್ದು ಇದರಿಂದಾಗಿ ಯಾವುದೇ ಪ್ರಾಣಾಪಾಯವಾಗಿಲ್ಲ.ಮೂಲ್ಕಿ ಪರಿಸರದಲ್ಲಿ ಅಗ್ನಿ ಶಾಮಕ ಠಾಣೆಯಿಲ್ಲದಿರುವುದರಿಂದ ಮೂಲ್ಕಿ ಹೋಬಳಿಯಲ್ಲಿ ಅಗ್ನಿ ಅವಘಡ ಸಂಭವಿಸಿದರೆ ದೂರದ ಮಂಗಳೂರು ಅಥವಾ ಮೂಡಬಿದ್ರಿಯಿಂದ ಬರಬೇಕಾಗಿದ್ದು ಕೂಡಲೇ ಮೂಲ್ಕಿಯಲ್ಲಿ ಅಗ್ನಿ ಶಾಮಕ ಠಾಣೆ ರಚಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.,

Prakash Suvarna

Mulkli-12011602 Mulkli-12011603 Mulkli-12011604 Mulkli-12011605

Comments

comments

Comments are closed.

Read previous post:
Kinnigoli-12011601
ಯಶೋದಾ ಚಂದ್ರಶೇಖರ್ -ಸನ್ಮಾನ

ಕಿನ್ನಿಗೋಳಿ: ಕಮ್ಮಜೆ ನೇಕಾರ ಕಾಲನಿಯ ಉತ್ಸಾಹಿ ಮಕ್ಕಳ ಬಳಗದ ವತಿಯಿಂದ ಸಮಾಜ ಸೇವಕಿ ಯಶೋದಾ ಚಂದ್ರಶೇಖರ್ ಅವರನ್ನು ಹೊಸ ವರ್ಷಾಚರಣೆಯ ಸಂದರ್ಭ ಸನ್ಮಾನಿಸಲಾಯಿತು. ಜಿ.ಪಂ. ಸದಸ್ಯ ಈಶ್ವರ...

Close