ಏಕ ಮನಸ್ಕರಾಗಿ ಶ್ರಮಿಸುವುದು ಬಹಳ ಅಗತ್ಯ

ಮೂಲ್ಕಿ: ಹಿಂದೂ ಧರ್ಮದ ಅಭಿವೃದ್ಧಿಗಾಗಿ ಎಲ್ಲಾ ದೇವಳಗಳು ಹಾಗೂ ಮಠ ಮಂದಿರಗಳು ಏಕ ಮನಸ್ಕರಾಗಿ ಶ್ರಮಿಸುವುದು ಬಹಳ ಅಗತ್ಯ ಎಂದು ಪೇಜಾವರ ಶ್ರೀ ಅಧೋಕ್ಷಜ ಮಠಾದೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದರು ಉಡುಪಿ ಶ್ರೀ ಕೃಷ್ಣ ಮಟದಲ್ಲಿ ಪಂಚಮ ಪರ್ಯಾಯ ಪೀಠಾರೋಹಣದ ಪೂರ್ವಭಾವಿಯಾಗಿ ಮೂಲ್ಕಿ ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿ ಆಶೀರ್ವಚನ ನೀಡಿದರು.
ಹಿಂದಿನ ಪರ್ಯಾಯದ ಸಮಯದಲ್ಲಿಯೂ ಧರ್ಮೋದ್ದಾರದೊಂದಿಗೆ ರಾಷ್ಟ್ರೋನ್ನತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈಬಾರಿ ಪೀಠಾರೋಹಣ ಗೈದ ಬಳಿಕ ಸಮಾಜೋದ್ದಾರಕ ಕಾರ್ಯಕ್ರಮಗಳನ್ನು ಪ್ರಕಟಿಸಲಿದ್ದೇನೆ ಎಂದ ಶ್ರೀಗಳು ಜಾತಿ ಮತ ಪಂಥ ಬೇಧವಿಲ್ಲದೆ ಹಿಂದೂ ಧರ್ಮಿಯರು ಒಂದಾಗಬೇಕು ಹಾಗೂ ಪರ್ಯಾಯ ಸಮಯದಲ್ಲಿ ಮಠಕ್ಕೆ ಭೇಟಿನೀಡಿ ಸಮಾಜೋದ್ದಾರ ಕಾರ್ಯಕ್ಕೆ ಸಹಕರಿಸಬೇಕು ಎಂದರು.ಪೇಜಾವರ ಕಿರಿಯ ಯತಿವರ್ಯರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ,ಹಿರಿಯ ಯತಿವಂiiರ ಆಶಯದಂತೆ ಎಲ್ಲರನ್ನೂ ಪರ್ಯಾಯ ಕಾರ್ಯಕ್ರಮಕ್ಕೆ ಅಹ್ವಾನಿಸಿದರು.
ಈಸಂದರ್ಭ ಕ್ಷೇತ್ರದ ಆಡಳಿತ ಮಂಡಳಿಯ ಪರವಾಗಿ ಕುಲ್ಯಾಡಿ ನರಸಿಂಹ ಪೈ ಉಭಯ ಶ್ರೀಗಳನ್ನು ಫಲಪುಷ್ಪ ಮಂಗಳಾರತಿ ಸಹಿತ ಗೌರವಿಸಿದರು. ಈ ಸಂದರ್ಭ ಕ್ಷೇತ್ರದ ವತಿಯಿಂದ ಅಕ್ಕಿ ಎಣ್ಣೆ ತರಕಾರಿ ಸೇರಿದಂತೆ ಹಸಿರುವಾಣಿ ಹೊರೆ ಕಾಣಿಕೆಯನ್ನು ಕ್ಷೇತ್ರದ ವತಿಯಿಂದ ಸಮರ್ಪಿಸಲಾಯಿತು.ಕ್ಷೇತ್ರದ ದೇವದರ್ಶನ ಪಾತ್ರಿ ವಸಂತನಾಯಕ್ ಫಲಿಮಾರ್ಕರ್,ಅರ್ಚಕ ವೃಂದ,ಆಡಳಿತ ಮಂಡಳಿ ಹಾಗೂ ಭಜಕವೃಂದದವರು ಉಪಸ್ಥಿತರಿದ್ದರು.

Mulkli-12011608

Comments

comments

Comments are closed.

Read previous post:
Mulkli-12011607
ಮೂಲ್ಕಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದ ಭೇಟಿ

ಮೂಲ್ಕಿ: ಧಾರ್ಮಿಕ ಸಾಮರಸ್ಯದೊಂದಿಗೆ ಹಿಂದೂ ಸಮಾಜದ ಉದಾರಕ್ಕಾಗಿ ದೇಗುಲಗಳು ಹಾಗೂ ಮಠ ಮಂದಿರಗಳು ಶ್ರಮಿಸಬೇಕು ಎಂದು ಪೇಜಾವರ ಶ್ರೀ ಅಧೋಕ್ಷಜ ಮಠಾದೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು...

Close