ಯುವಕರು ಭವಿಷ್ಯದ ಅಭಿವೃದ್ದಿ ದೇಶವನ್ನಾಗಿಸಬೇಕು

ಕಿನ್ನಿಗೋಳಿ: ಕಟ್ಟಡ ಕಾರ್ಮಿಕರು ಕಾನೂನು ತಿಳುವಳಿಕೆ ಪಡೆದು ದೌರ್ಜನ್ಯಗಳಿಂದ ಮುಕ್ತರಾಗುವ ಜೊತೆಗೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಕೂಡ ಕಾನೂನು ರೀತಿಯಲ್ಲಿ ಪಡೆಯಲು ಸಹಕಾರಿಯಾಗುತ್ತದೆ. ಯುವಕರು ಚಿಂತನಾ ಶೀಲತೆ ಮತ್ತು ಕಾರ್ಯತತ್ಪರತೆಯಿಂದ ಭವಿಷ್ಯದಲ್ಲಿ ಅಭಿವೃದ್ದಿಪರ ದೇಶವನ್ನಾಗಿಸಲು ಈಗಲೇ ಪಣತೊಡಬೇಕು ಎಂದು ಕಿನ್ನಿಗೋಳಿ ಚರ್ಚ್ ಪಾಲನ ಮಂಡಳಿ ಸದಸ್ಯ ವಿಲಿಯಂ ಡಿಸೋಜ ಹೇಳಿದರು.
ಕಿನ್ನಿಗೋಳಿಯ ಸಂಜೀವಿನಿ ಸಮಗ್ರ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಕನ್ಸೆಟ್ಟಾ ಆಸ್ಪತ್ರೆಯ ಜಂಟೀ ಸಹಯೋಗದಲ್ಲಿ ನಡೆದ ಕಟ್ಟಡ ಕಾರ್ಮಿಕರು ಮತ್ತು ಚಾಲಕರಿಗೆ ಗುರುತು ಚೀಟಿ ವಿತರಣೆ ಹಾಗೂ ಯುವಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೌಲ್ಯಾದಾರಿತ ಸದೃಡ ಸಮಾಜದ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರದ ಬಗ್ಗೆ ಮಂಗಳೂರು ಹಿರಿಯ ಕಾರ್ಮಿಕರ ಇಲಾಖಾ ನಿರೀಕ್ಷಕ ಗಣಪತಿ ಹೆಗ್ಡೆ ಮತ್ತು ಸಾಲಿಗ್ರಾಮ ಡಿವೈನ್ ಪಾರ್ಕ್ ಟ್ರಸ್ಟ್‌ನ ಯಶವಂತ ಸುಳ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.
ಈ ಸಂದರ್ಭ ಕನ್ಸೆಟ್ಟಾ ಆಸ್ಪತ್ರೆಯ ಸಹಾಯಕ ನಿರ್ದೇಶಕಿ ಭಗಿನಿ ಪ್ಲೋಸ್ಸಿ ಮಿನೇಜಸ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು. ಸಂಜೀವಿನಿ ಸಂಸ್ಥೆಯ ಸಂಚಾಲಕಿ ಭಗಿನಿ ಹೋಪ್ ಸ್ವಾಗತಿಸಿದರು. ಸಂಜೀವಿನಿ ಸಂಸ್ಥೆಯ ಅಧಿಕಾರಿ ಲಲಿತಾ ಭಾಸ್ಕರ್ ವಂದಿಸಿ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli-13011604

Comments

comments

Comments are closed.