ದ್ವಿಚಕ್ರ ಸವಾರರು ಶಿರಸ್ಟ್ರಾಣ ಕಡ್ಡಾಯ

ಮೂಲ್ಕಿ: ದೇಶದಲ್ಲಿ ರಸ್ತೆ ಅಪಘಾತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೃತಪಡುತ್ತಿದ್ದು ವಾಹನ ಸವಾರರು ಸಂಚಾರ ಸಂದರ್ಭದಲ್ಲಿ ವೇಗದ ಚಾಲನೆ ನಿಯಂತ್ರಣ, ದ್ವಿಚಕ್ರ ಸವಾರರು ಶಿರಸ್ಟ್ರಾಣ ಕಡ್ಡಾಯ ಧರಿಸುವ ಮೂಲಕ ಸುರಕ್ಷತೆಯನ್ನು ಕಾಪಾಡಿ ಪ್ರಾಣವನ್ನು ಉಳಿಸಬೇಕೆಂದು ಮೂಲ್ಕಿ ಪೋಲಿಸ್ ಠಾಣಾ ನಿರೀಕ್ಷಕ ರಾಮಚಂದ್ರ ನಾಯಕ್ ಹೇಳಿದರು.
ರಾಷ್ತ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಮೂಲ್ಕಿಯ ಜಂಕ್ಷನ್ ಬಳಿ ಜರಗಿದ 27ನೇ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿಬಂಗೇರ, ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ್ ಆಳ್ವ, ಮೂಲ್ಕಿಯ ರಿಕ್ಷಾ ಚಾಳಕ-ಮಾಲಕರ ಸಂಘದ ಅಧ್ಯಕ್ಷ ಅಶೋಕ್ ಚಿತ್ರಾಪು, ಕಾರ್ಯದರ್ಶಿ ಕೃಷ್ಣಪ್ಪ ಸನಿಲ್ ಉಪಸ್ಥಿತರಿದ್ದರು.

Mulki-13011601

Comments

comments

Comments are closed.

Read previous post:
Mulkli-12011608
ಏಕ ಮನಸ್ಕರಾಗಿ ಶ್ರಮಿಸುವುದು ಬಹಳ ಅಗತ್ಯ

ಮೂಲ್ಕಿ: ಹಿಂದೂ ಧರ್ಮದ ಅಭಿವೃದ್ಧಿಗಾಗಿ ಎಲ್ಲಾ ದೇವಳಗಳು ಹಾಗೂ ಮಠ ಮಂದಿರಗಳು ಏಕ ಮನಸ್ಕರಾಗಿ ಶ್ರಮಿಸುವುದು ಬಹಳ ಅಗತ್ಯ ಎಂದು ಪೇಜಾವರ ಶ್ರೀ ಅಧೋಕ್ಷಜ ಮಠಾದೀಶ ಶ್ರೀ...

Close