ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ

ನಿಡ್ಡೋಡಿ: ವಿದ್ಯಾರ್ಥಿಗಳು ಅವರ ಭವಿಷ್ಯವನ್ನು ಅವರೇ ರೂಪಿಸಿಕೊಳ್ಳಬೇಕು ಮತ್ತು ಉತ್ತಮವಾದ ಸಂಸ್ಕಾರದಿಂದ ಮುನ್ನಡೆಯ ಬೇಕು. ಭಾರತರಾಷ್ಟ್ರವು ವಿಶ್ವಕ್ಕೆ ಗುರುವಾಗಬೇಕಾದರೆ ವಿದ್ಯಾರ್ಥಿಗಳ ಪಾತ್ರ ತುಂಬಾ ಮಹತ್ವದ್ದು ಎಂದು ಸಂಸ್ಥೆಯ ಆಡಳಿತಾಧಿಕಾರಿ ರವಿ ಹಾವೇರಿ ಹೇಳಿದರು.
ಜ್ಞಾನರತ್ನ ಎಜ್ಯುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ)ಇದರ ಅಂಗ ಸಂಸ್ಥೆ. ಶ್ರೀ ದುರ್ಗಾದೇವಿ ವಿದ್ಯಾಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದ 153ನೇ ಜಯಂತ್ಯೋತ್ಸವ ಸಂದರ್ಭ ಮಾತನಾಡಿದರು.
ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳು ಕಲ್ಲಮುಂಡ್ಕೂರು, ನಿಡ್ಡೋಡಿ, ಮುಚ್ಚೂರು, ನೆಲ್ಲಿತೀರ್ಥ, ಗ್ರಾಮಗಳಿಗೆ ಹೋಗಿ ಗ್ರಾಮ ಸ್ವಚ್ಚತೆ ಮಾಡುವುದರ ಮೂಲಕ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭ ಪ್ರಾಂಶುಪಾಲ ಅನುರಾಧ ಸಾಲಿಯನ್, ಜಯಲಕ್ಷ್ಮಿ, ಮುಖ್ಯೋಪಾಧ್ಯಾಯಿನಿ ಲೇಖಾ ಮತ್ತು ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Kateel-15011601 Kateel-15011602

Comments

comments

Comments are closed.

Read previous post:
Kinnigoli-13011605
ವಿವೇಕಾನಂದರ ಚಿಂತನೆಗಳನ್ನು ನನಸುಗೊಳಿಸಬೇಕು

ಕಿನ್ನಿಗೋಳಿ: ವಿವೇಕಾನಂದರ ಚಿಂತನೆಗಳನ್ನು ನನಸುಗೊಳಿಸಿ ಸದೃಢ ಭಾರತ ನಿರ್ಮಾಣಕ್ಕಾಗಿ ಸ್ವಾರ್ಥ, ಆಂಧ ಶ್ರದ್ಧೆಗಳನ್ನು ದೂರವಿಟ್ಟು ಶ್ರೇಷ್ಠ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಅಳವಡಿಕೊಳ್ಳಬೇಕು ಎಂದು ಬಿಜೆಪಿ ಮೂಲ್ಕಿ ಮೂಡಬಿದ್ರೆ ಕ್ಷೇತ್ರದ...

Close