ಮಕರ ಸಂಕ್ರಾತಿ ತಾಳಮದ್ದಲೆ

ಕಿನ್ನಿಗೋಳಿ: ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ ಧರ್ಮದ ಜಾಗೃತಿ ಮೂಡಿಸುವಲ್ಲಿ ಯಕ್ಷಗಾನ ಹಾಗೂ ತಾಳಮದ್ದಲೆಗಳ ಪಾತ್ರ ಮಹತ್ತರವಾಗಿದೆ ಕರ್ನಾಟಕ ಬ್ಯಾಂಕ್ ಮಹಾ ಪ್ರಬಂಧಕ ರಾಘವೇಂದ್ರ ಭಟ್ ಹೇಳಿದರು.
ಕಿನ್ನಿಗೋಳಿ ಯಕ್ಷಲಹರಿ (ರಿ) ಯುಗಪುರುಷ ಸಹಯೋಗದೊಂದಿಗೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮಕರ ಸಂಕ್ರಾತಿ ಪ್ರಯುಕ್ತ ನಡೆದ ತಾಳಮದ್ದಲೆ ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಮೂಡಬಿದ್ರೆ ಯಕ್ಷಸಂಗಮ ಸಂಘಟಕ ಶಾಂತಾರಾಮ ಕುಡ್ವ ಅವರನ್ನು ಸನ್ಮಾನಿಸಲಾಯಿತು.
ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಕೆನರಾ ಬ್ಯಾಂಕ್ ಪ್ರಬಂಧಕ ಕೆ. ಎನ್. ಸುಧಾಕರ್, ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕ ಜೈ ಕೃಷ್ಣ , ಕಾರ್ಪೋರೆಶನ್ ಬ್ಯಾಂಕ್ ಪ್ರಬಂಧಕ ಪ್ರವೀಣ್ ಉಳ್ಳಾಲ್, ಕರ್ನಾಟಕ ಬ್ಯಾಂಕ್ ಐಕಳ ಶಾಖಾ ಪ್ರಬಂಧಕ ರಘುರಾಮ್ ಕಾರಂತ್, ಕಿನ್ನಿಗೋಳಿ ಉದ್ಯಮಿ ಪುರುಷೋತ್ತಮ ಶೆಟ್ಟಿ, ಬಲ್ಲಿರೇನಯ್ಯ ಪತ್ರಿಕಾ ಸಂಪಾದಕ ತಾರಾನಾಥ ವರ್ಕಾಡಿ, ಉದ್ಯಮಿ ರತ್ನಾ ಎಸ್. ಕೋಟ್ಯಾನ್ ದಾಮಸಕಟ್ಟೆ, ಯುಗಪುರುಷದ ಭುವನಾಭಿರಾಮ ಉಡುಪ, ಯಕ್ಷಲಹರಿ ಉಪಾಧ್ಯಕ್ಷ ಪಶುಪತಿ ಶಾಸ್ತ್ರೀ, ಕಾರ್ಯದರ್ಶಿ ವಸಂತ ದೇವಾಡಿಗ, ಕೋಶಾಧಿಕಾರಿ ಜಗದೀಶ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.

Kinnigoli-16011602

Comments

comments

Comments are closed.

Read previous post:
Kinnigoli-16011601
ಉಳೆಪಾಡಿ ಕ್ಷೇತ್ರ- ಮಕರ ಸಂಕ್ರಮಣ

ಕಿನ್ನಿಗೋಳಿ: ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಮಕರ ಸಂಕ್ರಮಣ ವಿಶೇಷ ಆರಾಧನೆ ಸಂದರ್ಭ ಸಮಾಜಕ ಸೇವಕಿ ಮಮತಾ ಪೂಂಜಾ ಬಳ್ಕುಂಜೆ, ಹಾಗೂ ಧ.ಗ್ರಾ.ಯೋಜನೆಯ ಕಿನ್ನಿಗೋಳಿ ವಲಯ ಮೇಲ್ವಿಚಾರಕ...

Close