ಯುವಜನ ಮೇಳ ಯುವ ವೈಭವ_2016

ಹಳೆಯಂಗಡಿ: ರಾಜ್ಯದಲ್ಲಿ 150 ಕೋಟಿ ರೂ ಯುವಜನ ಕ್ರೀಡೆಗಾಗಿ ಮೀಸಲು ಇರಿಸಿದ ಕಾರಣ ಸಿಂತೆಟಿಕ್ ಟ್ರ್ಯಾಕ್ ಸುಸಜ್ಜಿತ ಈಜುಕೊಳಗಳು ಹಾಗೂ ವಿವಿಧ ಕ್ರೀಡಾ ಸವಲತ್ತುಗಳನ್ನು ಹೆಚ್ಚಿಸಲು ಸಾಧ್ಯವಾಯಿತು ಎಂದು ಯುವಜನ ಸೇವೆ ಹಾಗೂ ಮೀನುಗಾರಿಕಾ ಸಚಿವರಾದ ಅಭಯಚಂದ್ರ ಜೈನ್ ಹೇಳಿದರು
ರಾಜ್ಯ ಪ್ರಶಸ್ತಿ ವಿಜೇತ ಸಸಿಹಿತ್ಲು ಯುವಕ ಮಂಡಲ ಮತ್ತು ಯುವತಿ ಮಂಡಲ, ಹಳೆವಿದ್ಯಾರ್ಥಿ ಸಂಘ, ಸಸಿಹಿತ್ಲು ಮತ್ತು ಮುಂಬೈ, ನವೋದಯ ಮಹಿಳಾ ಮಂಡಲ ಸಸಿಹಿತ್ಲು ಇವರ ಜಂಟಿ ಆತಿಥ್ಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನ ಮೇಳ ಯುವ ವೈಭವ_2016 ಉದ್ಘಾಟಿಸಿ ಮಾತನಾಡಿದರು.
ಯುವ ಸಬಲೀಕರಣ ಇಲಾಖೆಯಡಿ ಯುವಜನ ಉತ್ತೇಜನಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಆರ್ಥಿಕ ಹಿನ್ನಡೆಯಾಗಬಾರದು ಎನ್ನುವ ಮನವಿಯನ್ನು ಪುರಸ್ಕರಿಸಿ ಈ ಬಾರಿ ನಗದು ಬಹುಮಾನ ಇರಿಸಲಾಗಿದೆ ಮುಂದಿನ ದಿನಗಳಲ್ಲಿ ಈ ಬಗ್ಗೆ ವಿಧಾನ ಸಭೆಯಲ್ಲಿ ಪ್ರಸ್ತಾವಿಸಿ ತಾಲೂಕು ಮಟ್ಟದಲ್ಲಿಯೂ ಅರ್ಥಿಕ ಸಹಕಾರಕ್ಕೆ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ,ಸರ್ಕಾರ ಬಹಳಷ್ಟು ಅನುದಾನಗಳನ್ನು ಬಿಡುಗಡೆ ಮಾಡಿದರೂ ಯುವಜನ ಮೇಳಗಳಿಂದ ಯುವ ಸಮಾಜ ವಿಮುಖ ರಾಗುವುದು ಕಂಡುಬಂದಿದ್ದು ಈಬಗ್ಗೆ ಕೂಲಂಕುಷ ಅಧ್ಯಯನ ಬಹಳ ಅಗತ್ಯವಾಗಿದೆ. ಯುವ ಸಮಾಜದಲ್ಲಿ ಆರ್ಥಿಕ ಹಿನ್ನಡೆ ವಿಷಯವಾದರೆ ಹೆಚ್ಚಿನವರು ಟಿವಿ ಮೊಬೈಲ್ ಗೀಳಿಗೆ ಬಿದ್ದು ತಮ್ಮ ಶೃಜನಶೀಲತೆಯನ್ನು ಕಳೆದುಕೊಂಡಿದ್ದಾರೆಯೇ ಎಂದು ತಿಳಿದು ಯುವ ಸಮಾಜವನ್ನು ಎಚ್ಚರಿಸುವ ಕಾರ್ಯ ನಡೆಸಬೇಕಾಗಿದೆ ಎಂದರು.ಈ ಸಂದರ್ಭ ಸಂಘಟಕರಿಂದ ಸಚಿವರಿಗೆ ಹೆಚ್ಚುವರಿ ಅನುದಾನಗಳಿಗಾಗಿ ಮನವಿ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪಂಚಾಯತಿ ಅಧ್ಯಕ್ಷೆ ರಜನಿ ವಹಿಸಿದ್ದರು.ಹಳೆಯಂಗಡಿ ಗ್ರಾಮ ಪಂ.ಅಧ್ಯಕ್ಷೆ ಜಲಜಾ,ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ,ಮಾಜಿ ಅಧ್ಯಕ್ಷ ವಸಂತ ಬೆರ್ನಾಡ್,ಜಿ.ಪಂ ಸದಸ್ಯೆ ಆಶಾ ಸುವರ್ಣ, ತಾ.ಪಂ.ಸದಸ್ಯೆ ಸಾವಿತ್ರಿ,ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ ಕರ್ಕೇರಾ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಉದ್ಯಮಿ ದೇವಿ ಪ್ರಸಾದ್ ಶೆಟ್ಟಿ,ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಯಶವಂತ ಶ್ರೀಯಾನ್, ದ.ಕ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ರಾಜೀವ ಸಾಲ್ಯಾನ್, ಯುವಸಬಲೀಕರಣ, ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಪಾಂಡುರಂಗ ಗೌಡ, ಸಸಿಹಿತ್ಲು ಯುವಕ ಮಂಡಲದ ಅಧ್ಯಕ್ಷ ಪ್ರವೀಣ್ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗೇಶ್ ಡಿ ಬಂಗೇರಾ, ಯುವತಿ ಮಂಡಲದ ಅಧ್ಯಕ್ಷೆ ಕವಿತಾ, ನವೋದಯ ಮಹಿಳಾ ಮಂಡಲದ ಅಧ್ಯಕ್ಷೆ ಮಾಲತಿ ಡಿ ಕೋಟ್ಯಾನ್ ಉಪಸ್ಥಿತರಿದ್ದರು.

ಪಾಂಡುರಂಗ ಗೌಡ ಸ್ವಾಗತಿಸಿದರು. ನರೇಶ್ ಸಸಿಹಿತ್ಲು ಪ್ರಸ್ತಾವಿಸಿದರು . ಪ್ರಭಾತ್ ಎಸ್‌ಆರ್, ಅಮಿತಾ ಕುಂದರ್, ಶರ್ಮಿಳಾ ಪ್ರವೀಣ್ ನಿರೂಪಿಸಿದರು. ನಾಗೇಶ್ ಡಿ.ಬಂಗೇರಾ ವಂದಿಸಿದರು.Haleyangadi-20011601

Comments

comments

Comments are closed.

Read previous post:
Kinnigoli-18011604
ಮಹಮ್ಮಾಯಿ ದೇವಳದಲ್ಲಿ ಕಳ್ಳತನ

ಕಿನ್ನಿಗೋಳಿ : ಕಿನ್ನಿಗೋಳಿ ಮೂಡಬಿದ್ರೆ ರಾಜ್ಯ ಹೆದ್ದಾರಿ ಮೂರುಕಾವೇರಿ ಬಳಿಯ ಶ್ರೀ ಮಹಮ್ಮಾಯಿ ದೇವಳದ ಗರ್ಭಗುಡಿ ಹೊಕ್ಕ ಕಳ್ಳರು ದೇವರ ರಜತ ಪ್ರಭಾವಳಿ ಹಾಗೂ ಚಿನ್ನದ ಕಿವಿಯೋಲೆಯನ್ನು ಹಾಗೂ...

Close