ಮೂಲ್ಕಿ:ವಿವಿಧ ಕಾಮಗಾರಿ ಶಂಕುಸ್ಥಾಪನೆ

ಮೂಲ್ಕಿ: ಕರ್ನಾಟಕ ಸರ್ಕಾರ ಸಿದ್ದರಾಮಯ್ಯರವರ ನೇತ್ರತ್ವದಲ್ಲಿ ಗ್ರಾಮ ಮಟ್ಟದಲ್ಲಿ ಅಭಿವೃದ್ಧಿಯೋಜನೆಗಳನ್ನು ಹಮ್ಮಿಕೊಂಡಿರುವ ಕಾರಣ ಮುಂದಿನ ದಿನಗಳಲ್ಲಿ ಅತಿಕಾರಿ ಬೆಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 2ಕೋಟಿ ಅನುದಾನ ಮಂಜೂರು ಆಗಲಿದೆ ಎಂದು ಯುವಜನ ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಅತಿಕಾರಿ ಬೆಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಕ್ವ ಮಟ್ಟು ಹಾಗೂ ಶಿಮಂತೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಣ್ಣನೀರಾವರಿ ಇಲಾಖೆ ಮತ್ತು ಜಿಲ್ಲಾ ಪಂಚಾಯತಿ ನಿಧಿಯಲ್ಲಿ 75ಲಕ್ಷರೂ ವೆಚ್ಚದ ವಿವಿಧ ಕಾಮಗಾರಿ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನಡೆಸಿ ಅವರು ಮಾಹಿತಿ ನೀಡಿದರು. ಗ್ರಾಮೀಣ ಅಭಿವೃದ್ಧಿಗಾಗಿ ಕುಡಿಯುವ ನೀರು ಹಾಗೂ ಅಂತರ್ಜಲ ರಕ್ಷಣೆಗಾಗಿ ಕಿಂಡಿ ಆಣೆಕಟ್ಟೆಗಳು ಕಾಂಕ್ರೀಟ್ ತಡೆಗೋಡೆ, ರಸ್ತೆ ನಿರ್ಮಾಣ ಹಾಗೂ ಮೂಲಭೂತ ಸೌಖರ್ಯಕ್ಕೆ ಪ್ರಮುಖ ಆದ್ಯತೆ ನೀಡಲಾಗುವುದು ಎಂದ ಅವರು ಮಾನಂಪಾಡಿ ನೆಹರೂ ಬ್ರಿಜ್ ಬಳಿ ಸುಮಾರು ೧ಕೋಟಿ ರೂ ವೆಚ್ಚದ ಉಪ್ಪುನೀರು ತಡೆ ಆಣೆಕಟ್ಟು ಶೀಘ್ರ ನಿರ್ಮಾಣಗೊಳ್ಳಲಿದೆ ಎಂದರು. ಈ ಸಂದರ್ಭ ತಾ.ಪಂ ಸದಸ್ಯೆ ವನಿತಾ ಉದಯ ಅಮೀನ್,ಅತಿಕಾರಿ ಬೆಟ್ಟು ಗ್ರಾಮ ಪಂ ಅಧ್ಯಕ್ಷೆ ಶಾರದಾ ವಸಂತ್,ಉಪಾಧ್ಯಕ್ಷ ದೆಪ್ಪುಣಿಗುತ್ತು ಕಿಶೋರ್ ಶೆಟ್ಟಿ ಸದಸ್ಯರಾದ ಮನೋಹರ ಕೋಟ್ಯಾನ್, ಸುಮತಿ, ಶಾರದಾ, ದಯಾನಂದ ಮಟ್ಟು, ಕಿಲ್ಪಾಡಿ ಪಂಚಾಯತಿ ಸದಸ್ಯ ಧನಂಜಯ ಮಟ್ಟು,ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯವಾಹಕ ಇಂಜಿನಿಯರ್ ಶಣ್ಮುಗಂ, ಕಿರಿಯ ಇಂಜಿನಿಯರ್ ರಾಕೇಶ್. ಜಿಲ್ಲಾ ಪಂಚಾಯತಿ ಕಿರಿಯ ಇಂಜಿನಿಯರ್ ಪ್ರಶಾಂತ್ ಆಳ್ವಾ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Mulki-20011606

Comments

comments

Comments are closed.

Read previous post:
Mulki-20011604
ಭಾರತೀಯ ಶಿಕ್ಷಣ ಪದ್ದತಿ ಸಂಸ್ಕೃತಿಗೆ ಪ್ರೋತ್ಸಾಹ

ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನ ಮೇಳ ಯುವ ವೈಭವ_2016 ಯುವಕರ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಮಂಗಳೂರು ತಾಲೂಕು ಹಾಗೂ ಯುವತಿಯರ ವಿಭಾಗದ ಸಮಗ್ರ ಪ್ರಶಸ್ತಿಯನ್ನು...

Close