ರಂಗಭೂಮಿ ಸಮಾಜದ ಕೈ ಗನ್ನಡಿ

ಮೂಲ್ಕಿ: ಬದುಕಿನ ನಿತ್ಯ ಘಟನೆಗಳೇ ರಂಗಭೂಮಿಯ ನಾಟಕದ ಕಥಾವಸ್ತುಗಳಾಗಿದೆ, ರಂಗಭೂಮಿಯು ಸಮಾಜದ ಕೈಗನ್ನಡಿಯಾಗಿದ್ದು ಕಲಾವಿದರು ತಮ್ಮ ಆಂತರ್ಯದ ನೋವು ನಲಿವುಗಳನ್ನು ಬಿಟ್ಟು ಪಾತ್ರಕ್ಕೆ ಜೀವ ಕೊಡುವ ಮೂಲಕ ನೈಜತೆಯನ್ನು ಪ್ರತಿಬಿಂಬಿಸುತ್ತಾರೆ ಎಂದು ಹಿರಿಯ ರಂಗಕರ್ಮಿ ಮೂಲ್ಕಿ ಚಂದ್ರಶೇಖರ ಸುವರ್ಣ ಹೇಳಿದರು.
ಅವರು ಮೂಲ್ಕಿಯ ಬಪ್ಪನಾಡುವಿನಲ್ಲಿ ವಿಜಯಾ ಕಲಾವಿದರ ಅಭಿಮಾನಿ ಬಳಗದ ನೇತೃತ್ವದಲ್ಲಿ ನಡೆದ ತುಳುನಾಟಕ ಪ್ರದರ್ಶನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್ ಹೆಗ್ಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಕಲಾವಿದರು ಬೆಳೆಯಬೇಕಾದರೆ ಕಲಾ ಪೋಷಣೆ ಅಗತ್ಯ. ಕಲಾವಿದರ ಸಾಧನೆಯನ್ನು ಗುರುತಿಸಿ ಗೌರವಿಸುವಿದಲ್ಲಿ ಕಲೆಯಲ್ಲಿ ಇನ್ನಷ್ಟು ಶ್ರದ್ದೆ ಮೂಡುತ್ತದೆ ಎಂದರು.
ಈ ಸಂದರ್ಭದಲ್ಲಿ ಸಾಧಕರಾದ ನಾಗಸ್ವರ ವಾದಕ ನಾಗೇಶ್ ಬಪ್ಪನಾಡು, ಆರ್ಯಭಟ ಪ್ರಶಸ್ತಿ ಪುರಸ್ಕೃತೆ ಶಮಿನಾ ಆಳ್ವಾ, ಮೂಲ್ಕಿ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಬಬಿತಾ ಯು. ಶೆಟ್ಟಿಯವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಮೂಲ್ಕಿ ವಿಜಯ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಮೂಲ್ಕಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸುನಿಲ್ ಆಳ್ವಾ, ಮೂಲ್ಕಿ ಬಂಟರ ಸಂಘದ ಯುವ ಸಂಘಟನಾ ವಿಭಾಗದ ಅಧ್ಯಕ್ಷ ರಾಜೇಶ್ ಶೆಟ್ಟಿ ಮಾನಂಪಾಡಿ, ಸರಿತಾ ಆರ್. ಶೆಟ್ಟಿ ಉಪಸ್ಥಿತರಿದ್ದರು.
ಕಿನ್ನಿಗೋಳಿ ವಿಜಯ ಕಲಾವಿದರ ಅಧ್ಯಕ್ಷ ಶರತ್ ಶೆಟ್ಟಿ ಕಿನ್ನಿಗೋಳಿ ಸ್ವಾಗತಿಸಿ ಪ್ರಸ್ತಾವನೆಗೈದರು, ಸೀತಾರಾಮ ಶೆಟ್ಟಿ ಎಳತ್ತೂರು ವಂದಿಸಿದರು, ಪತ್ರಕರ್ತ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.
ಜಗದೀಶ್ ಶೆಟ್ಟಿ ಕೆಂಚನಕೆರೆ ನಿರ್ದೇಶನದಲ್ಲಿ ಹರೀಶ್ ಪಡುಬಿದ್ರಿ ರಚನೆಯ “ಲೆಕ್ಕ ತತ್ತಿ ಬೊಕ್ಕ’ ತುಳು ನಾಟಕದ ಪ್ರದರ್ಶನ ನಡೆಯಿತು.

Mulki-20011603

Comments

comments

Comments are closed.

Read previous post:
Mulki-20011602
ದೇಶಿ ಸಂಸ್ಕೃತಿ ಉನ್ನತಿಗಾಗಿ ಸಮಾಜಕ್ಕೆ ಮಾಹಿತಿ

ಮೂಲ್ಕಿ: ಯುವ ಸಮಾಜಕ್ಕೆ ಅಗತ್ಯವಿರುವ ಕಲೆ.ಸಾಹಿತ್ಯ,ಸಂಸ್ಕೃತಿ ಬೆಳೆಸುವ ಮಹೋನ್ನತ ಉದ್ದೇಶದಿಂದ ಸಂಸ್ಕಾರ ಭಾರತಿಯ ಸಂಯೋಜನೆಯಲ್ಲಿ ನನ್ನ ಭೂಮಿ,ನನ್ನ ಭಾಷೆ,ನನ್ನ ಸಂಸ್ಕೃತಿ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಕನ್ಯಾ ಕುಮಾರಿಯಿಂದ...

Close