ದೇಶಿ ಸಂಸ್ಕೃತಿ ಉನ್ನತಿಗಾಗಿ ಸಮಾಜಕ್ಕೆ ಮಾಹಿತಿ

ಮೂಲ್ಕಿ: ಯುವ ಸಮಾಜಕ್ಕೆ ಅಗತ್ಯವಿರುವ ಕಲೆ.ಸಾಹಿತ್ಯ,ಸಂಸ್ಕೃತಿ ಬೆಳೆಸುವ ಮಹೋನ್ನತ ಉದ್ದೇಶದಿಂದ ಸಂಸ್ಕಾರ ಭಾರತಿಯ ಸಂಯೋಜನೆಯಲ್ಲಿ ನನ್ನ ಭೂಮಿ,ನನ್ನ ಭಾಷೆ,ನನ್ನ ಸಂಸ್ಕೃತಿ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಕನ್ಯಾ ಕುಮಾರಿಯಿಂದ ಗೋಕರ್ಣದ ವರೆಗೆ ಸಾಗರ ತೀರ ಯಾತ್ರಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಕಾರ ಭಾರತಿಯ ಅಖಿಲ ಭಾರತ ಸಂಘಟಕರಾದ ಪಾರಾ ಕೃಷ್ಣಮೂರ್ತಿ ಹೇಳಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂಲ್ಕಿ ಲಲಿತ ಮಹಲ್ ಎದುರು ಕೇರಳದ ಸಂಸ್ಕಾರ ಭಾರತಿಯ ತಪಸ್ಯಾ ತಂಡವನ್ನು ಶನಿವಾರ ಸ್ವಾಗತಿಸಿದ ಸಂದರ್ಭ ಅವರು ಮಾಹಿತಿ ನೀಡಿದರು.
ಯುವ ಸಮಾಜ ಅಧುನೀಕತೆ ಹಾಗೂ ಪ್ರಾಪಂಚಿಕ ವಿದ್ಯಮಾನಗಳಿಂದಾಗಿ ಸಂಸ್ಕಾರ ಕಳೆದುಕೊಂಡು ದಾರಿ ತಪ್ಪುತ್ತಿರುವ ಈ ದಿನಗಳಲ್ಲಿ ಮಕ್ಕಳಿಗೆ ಎಳವೆಯಲ್ಲಿಯೇ ಧಾರ್ಮಿಕ ಸಂಸ್ಕಾರ ಮತ್ತು ನೈತಿಕ ತಿಳುವಳಿಕೆ ನೀಡಬೇಕು ಈ ಬಗ್ಗೆ ಹಿರಿಯರು ಗಮನಹರಿಸುವುದು ಬಹಳ ಅಗತ್ಯ ಈ ಬಗ್ಗೆ ಸಂಸ್ಕಾರ ಭಾರತಿ ದೇಶಿ ಸಂಸ್ಕೃತಿಯ ಉನ್ನತಿಗಾಗಿ ಕರಾವಳಿ ಪ್ರದೇಶದಲ್ಲಿ ಸಮಾಜಕ್ಕೆ ಮಾಹಿತಿ ನೀಡುವ ಸಲುವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಮೂಲ್ಕಿ ನಗರ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ಬಂಗೇರಾ ಮತ್ತು ಮೂಲ್ಕಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸತ್ಯೇಂದ್ರ ಶೆಣೈ ತಂಡವನ್ನು ಸ್ವಾಗತಿಸಿದರು.ಸ್ಥಾಯೀ ಸಮಿತಿ ಅಧ್ಯಕ್ಷರಾದ ಸುನಿಲ್ ಆಳ್ವಾ,ಸದಸ್ಯರಾದ ದಿನೇಶ್ ಮಾನಂಪಾಡಿ,ಪುರುಷೋತ್ತಮ ರಾವ್,ಶೈಲೇಶ್ ಕೆ.ಎಸ್.ರಾವ್ ನಗರ,ತಪಸ್ಯಾ ತಂಡದ ಅಧ್ಯಕ್ಷ ಪಿ.ಜಿ.ಹರಿದಾಸ್,ಕಾರ್ಯದರ್ಶಿ ವೇಣುಗೋಪಾಲ್,ಬಾಲಕೃಷ್ಣ ಕೋಳೆವಾಲ್,ಮೂಲ್ಕಿ ಶಕ್ತಿ ಕೇಂದ್ರದ ಪೂರ್ವಾಧ್ಯಕ್ಷ ಸತೀಶ್ ಅಂಚನ್ ಸದಸ್ಯರಾದ ಯಾದವ ಕೋಟ್ಯಾನ್, ರಂಜಿತ್ ಕೊಳಚಿಕಂಬಳ, ಅಶೋಕ್ ಚಿತ್ರಾಪು,ಹಾಗೂ ಮೂಲ್ಕಿ ಬಿಜೆಪಿ ಸದಸ್ಯರು ಕೇರಳ ಸಂಸ್ಕಾರ ಭಾರತಿ ತಪಸ್ಯಾ ತಂಡದ ಸದಸ್ಯರು ಉಪಸ್ಥಿತರಿದ್ದರು ಮಂಗಳೂರು ಸಂಸ್ಕಾರ ಭಾರತಿ ಕಾರ್ಯದರ್ಶಿ ನಾಗರಾಜ ಶೆಟ್ಟಿ ನಿರೂಪಿಸಿದರು.

Mulki-20011602

Comments

comments

Comments are closed.

Read previous post:
Haleyangadi-20011601
ಯುವಜನ ಮೇಳ ಯುವ ವೈಭವ_2016

ಹಳೆಯಂಗಡಿ: ರಾಜ್ಯದಲ್ಲಿ 150 ಕೋಟಿ ರೂ ಯುವಜನ ಕ್ರೀಡೆಗಾಗಿ ಮೀಸಲು ಇರಿಸಿದ ಕಾರಣ ಸಿಂತೆಟಿಕ್ ಟ್ರ್ಯಾಕ್ ಸುಸಜ್ಜಿತ ಈಜುಕೊಳಗಳು ಹಾಗೂ ವಿವಿಧ ಕ್ರೀಡಾ ಸವಲತ್ತುಗಳನ್ನು ಹೆಚ್ಚಿಸಲು ಸಾಧ್ಯವಾಯಿತು ಎಂದು...

Close