ಭಾರತೀಯ ಶಿಕ್ಷಣ ಪದ್ದತಿ ಸಂಸ್ಕೃತಿಗೆ ಪ್ರೋತ್ಸಾಹ

ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನ ಮೇಳ ಯುವ ವೈಭವ_2016 ಯುವಕರ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಮಂಗಳೂರು ತಾಲೂಕು ಹಾಗೂ ಯುವತಿಯರ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಪುತ್ತೂರು ತಾಲೂಕು ಗಳಿಸಿದೆ. ರಾಜ್ಯ ಪ್ರಶಸ್ತಿ ವಿಜೇತ ಸಸಿಹಿತ್ಲು ಯುವಕ ಮಂಡಲ ಮತ್ತು ಯುವತಿ ಮಂಡಲ, ಹಳೆವಿದ್ಯಾರ್ಥಿ ಸಂಘ, ಸಸಿಹಿತ್ಲು ಮತ್ತು ಮುಂಬೈ, ನವೋದಯ ಮಹಿಳಾ ಮಂಡಲ ಸಸಿಹಿತ್ಲು ಇವರ ಜಂಟಿ ಆತಿಥ್ಯದಲ್ಲಿ ನಡೆದ ಈ ಸ್ಪರ್ದೆಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾದ ಮುಂಬೈ ಕಲಾಜಗತ್ತು ಸ್ಥಾಪಕರು ಹಾಗೂ ನಾಟಕ ರಂಗದಲ್ಲಿ ಲಿಮ್ಕಾ ದಾಖಲೆ ಗಳಿಸಿರುವ ಕಲಾವಿದ ತೋನ್ಸೆ ವಿಜಯ ಕುಮಾರ್ ಶೆಟ್ಟಿ ಮಾತನಾಡಿ,ಮಕ್ಕಳನ್ನು ಉತ್ತಮ ಸಂಸ್ಕಾರ ಪೂರಿತ ಮಾನವರನ್ನಾಗಿ ಮಾಡುವ ಮೌಲ್ಯಾಧಾರಿತ ಶಿಕ್ಷಣ ಇಂದಿನ ಆಧುನಿಕ ಯುಗದಲ್ಲಿ ಬಹಳ ಅಗತ್ಯ. ಜಾಗತೀಕರಣ ಯುಗದಲ್ಲಿ ಗ್ರಾಮದಿಂದ ನಗರದ ವರೆಗಿನ ಶಿಕ್ಷಣವು ಕೇವಲ ವೃತ್ತಿಕೌಶಲ್ಯ ನೀಡುತ್ತಿದೆಯೇ ವಿನಹ ಸಂಸ್ಕಾರ, ರಾಷ್ಟ್ರ ಭಕ್ತಿ ಮತ್ತು ಮಾನವತೆಯನ್ನು ಕಲಿಸದಿರುವುದು ವಿಪರ್ಯಾಸವಾಗಿದೆ ಈ ಬಗ್ಗೆ ಯುವ ಸಮಾಜ ಮುಂದೆ ಬಂದು ಭಾರತೀಯ ಶಿಕ್ಷಣ ಪದ್ದತಿಯಲ್ಲಿ ಸಂಸ್ಕಾರ ಸಂಸ್ಕೃತಿ ಕಲೆಗೆ ಪ್ರೋತ್ಸಾಹ ಲಬಿಸುವಂತೆ ಮಾಡಬೇಕು ಎಂದರು.
ದ.ಕ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ರಾಜೀವ್ ಸಾಲ್ಯಾನ್ ಮಾತನಾಡಿ, ಈ ಬಾರಿಯ ಯುವ ವೈಭವವು ಮಾದರಿಯಾಗಿ ಮೂಡಿಬಂದಿದೆ ಆತಿಥ್ಯದಿಂದ ಸ್ಪರ್ದೆಯ ನಿರ್ವಹಣೆಯ ಬಗ್ಗೆ ಮುಂದಿನ ದಿನಗಳಲ್ಲಿ ಮಾರ್ಗದರ್ಶಿಯಾಗಿದೆ ಎಂದ ಅವರು ಸಂಸ್ಥೆಯ ವತಿಯಿಂದ ಅತಿಥೇಯ ಸಂಸ್ಥೆಯ ಪದಾಧಿಕಾರಿಗಳನ್ನು ಸನ್ಮಾನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಸಿಹಿತ್ಲು ಪ್ರಾಥಮಿಕ ಶಾಲೆಯ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗೇಶ್.ಡಿ.ಬಂಗೇರಾ ವಹಿಸಿದ್ದರು. ನರೇಶ್ ಕುಮಾರ್ ಸಸಿಹಿತ್ಲು ಯುವ ವೈಭವ_2016 ಅವಲೋಕನ ನಡೆಸಿದರು.
ಸುರತ್ಕಲ್ ಉದ್ಯಮಿಗಳಾದ ಪುಂಡಲೀಕ ಹೊಸಬೆಟ್ಟು, ಚಂದ್ರಶೇಖರ್ ನಾನಿಲ್, ಕರ್ನಾಟಕ ಜನಪದ ಪರಿಷತ್ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ, ಸಸಿ ಹಿತ್ಲು ಯುವಕ ಮಂಡಲದ ಅಧ್ಯಕ್ಷ ಪ್ರವೀಣ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪಾಂಡುರಂಗ ಗೌಡ, ಯುವತಿ ಮಂಡಲದ ಅಧ್ಯಕ್ಷೆ ಕವಿತಾ, ನವೋದಯ ಮಹಿಳಾ ಮಂಡಲದ ಅಧ್ಯಕ್ಷೆ ಮಾಲತಿ ಡಿ ಕೋಟ್ಯಾನ್ ಉಪಸ್ಥಿತರಿದ್ದರು. ದ.ಕ ಜಿಲ್ಲಾಡಳಿತ ಮಂಗಳೂರು, ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದ.ಕ ಜಿಲ್ಲೆ, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಹಳೆಯಂಗಡಿ, ದ.ಕ ಜಿಲ್ಲಾ ಯುವಜನ ಒಕ್ಕೂಟ ಜಂಟಿಯಾಗಿ ಕಾರ್ಯಕ್ರಮ ಸಂಯೋಜಿಸಿತ್ತು. ನಾಗೇಶ್ ಡಿ ಬಂಗೇರಾ ಸ್ವಾಗತಿಸಿದರು. ನರೇಶ್ ಸಸಿಹಿತ್ಲು ಪ್ರಸ್ತಾವಿಸಿದರು .ಪ್ರಭಾತ್ ಎಸ್‌ಆರ್, ಶರ್ಮಿಳಾ ಪ್ರವೀಣ್ ನಿರೂಪಿಸಿದರು. ಅಮಿತಾ ಕುಂದರ್ ವಂದಿಸಿದರು.
ಫಲಿತಾಂಶ:
ಭಾವಗೀತೆ (ಯುವಕರು) ಪ್ರಥಮ : ಶ್ರೀ ರಾಮ್ ಎಮ್, ಮಿತ್ರ ಬಳಗ ಕಾಯರ್ ತೋಡಿ ಸುಳ್ಯ ತಾಲೂಕು. ದ್ವಿತೀಯ: ಸಮರ್ಥನ್, ಗುರು ಮಿತ್ರ ಸಮೂಹ ಬೆಳ್ತಂಗಡಿ ತಾಲೂಕು. ತೃತೀಯ: ಶಿವಶಂಕರ್, ಗುರುಮಿತ್ರ ಸಮೂಹ ಬೆಳ್ತಂಗಡಿ ತಾಲೂಕು.

ಭಾವಗೀತೆ (ಯುವತಿಯರು) ಪ್ರಥಮ: ಪೂಜಾ, ನವಚೇತನ ಯುವತಿ ಮಂಡಲ ಬಂಟ್ವಾಳ ತಾಲೂಕು, ದ್ವಿತೀಯ: ಸೌರಭ, ಶ್ರೀ ಗುರುಮಿತ್ರ ಸಮೂಹ ಬೆಳ್ತಂಗಡಿ ತಾಲೂಕು, ತೃತೀಯ: ಗುರುಪ್ರಿಯ, ಪ್ರಖ್ಯಾತಿ ಯುವತಿ ಮಂಡಲ ಪುತ್ತೂರು ತಾಲೂಕು.

ಲಾವಣಿ (ಯುವಕರು)ಪ್ರಥಮ: ಪ್ರಕಾಶ್, ಸಸಿಹಿತ್ಲು ಯುವಕ ಮಂಡಲ ಮಂಗಳೂರು ತಾಲೂಕು, ದ್ವಿತೀಯ: ಮುಖೇಶ್, ಪಯಸ್ವಿನಿ ಯುವಕ ಮಂಡಲ ಕೇಪಲ ಸುಳ್ಯ ತಾಲೂಕು, ತೃತೀಯ: ಮುಕುಂದ, ಸಸಿಹಿತ್ಲು ಯುವಕ ಮಂಡಲ ಮಂಗಳೂರು ತಾಲೂಕು.

ಲಾವಣಿ (ಯುವತಿಯರು) ಪ್ರಥಮ: ಗುರುಪ್ರಿಯ, ಪ್ರಖ್ಯಾತಿ ಯುವತಿ ಮಂಡಲ ಪುತ್ತೂರು ತಾಲೂಕು, ದ್ವಿತೀಯ: ಅಕ್ಷತಾ, ತಣ್ಣೀರು ಬಾವಿ ಯುವತಿ ಮಂಡಲ ಮಂಗಳೂರು ತಾಲೂಕು, ತೃತೀಯ: ಸಾತ್ವಿಕ ,ವಿಸ್ಮಯ ಯುವತಿ ಮಂಡಲ ಜಯನಗರ ಸುಳ್ಯ.

ರಂಗಗೀತೆ (ಯುವಕರು) ಪ್ರಥಮ: ಮುಕುಂದ್‌ರಾಜ್, ಸಸಿಹಿತ್ಲು ಯುವಕ ಮಂಡಲ ಮಂಗಳೂರು ತಾಲೂಕು, ದ್ವಿತೀಯ: ಜಯಂತ ವೈ, ಸವಣೂರು ಯುವಕ ಮಂಡಲ ಪುತ್ತೂರು ತಾಲೂಕು, ತೃತೀಯ: ಶಿವಶಂಕರ್,ಗುರುಮಿತ್ರ ಸಮೂಹ(ರಿ) ಬೆಳ್ತಂಗಡಿ ತಾಲೂಕು.

ರಂಗಗೀತೆ (ಯುವತಿಯರು) ಪ್ರಥಮ: ಅಕ್ಷತಾ, ತಣ್ಣೀರು ಬಾವಿ ಯುವತಿ ಮಂಡಲ ಮಂಗಳೂರು ತಾಲೂಕು, ದ್ವಿತೀಯ: ಗುರುಪ್ರಿಯ, ಪ್ರಖ್ಯಾತಿ ಯುವತಿ ಮಂಡಲ ಪುತ್ತೂರು ತಾಲೂಕು, ತೃತೀಯ:ಶ್ವೇತಾ ಎಸ್., ಪ್ರಖ್ಯಾತಿ ಯುವತಿ ಮಂಡಲ ಪುತ್ತೂರು ತಾಲೂಕು.

ಏಕಪಾತ್ರಭಿನಯ (ಯುವಕರು) ಪ್ರಥಮ: ಸ್ಮಿತೇಶ್, ಶ್ರೀ ಗುರುಮಿತ್ರ ಸಮೂಹ ಬೆಳ್ತಂಗಡಿ, ದ್ವಿತೀಯ: ಮುಸ್ತಾಫ, ಯಂಗ್ ಚಾಲೆಂಜರ‍್ಸ್ ಬೆಳ್ತಂಗಡಿ, ತೃತೀಯ: ದೇವಿಪ್ರಸಾದ್, ಮಿತ್ರ ಬಳಗ ಯುವಕ ಮಂಡಲ ಸುಳ್ಯ.

ಏಕಪಾತ್ರಭಿನಯ (ಯುವತಿಯರು) ಪ್ರಥಮ: ಶಿವರಂಜನಿ, ಪ್ರಕೃತಿ ಕಲಾಸ ಕಾಣಿಯೂರು ಪುತ್ತೂರು, ದ್ವಿತೀಯ: ಕಾವ್ಯಶ್ರೀ, ಪದ್ಮಶ್ರೀ ಯುವತಿ ಮಂಡಲ ಸವಣೂರು ಪುತ್ತೂರು, ತೃತೀಯ: ಮಲ್ಲಿಕ, ಪ್ರಮೋದ್, ಯುವತಿ ಮಂಡಲ ಬೈಕಂಪಾಡಿ.

ತುಳು ಭಾವಗೀತೆ (ಯುವಕರು) ಪ್ರಥಮ: ಮುಕುಂದರಾಜ್, ಸಸಿಹಿತ್ಲು ಯುವಕ ಮಂಡಲ ಮಂಗಳೂರು ತಾಲೂಕು, ದ್ವಿತೀಯ: ಶಿವಶಂಕರ್, ಶ್ರೀ ಗುರುಮಿತ್ರ ಸಮೂಹ ಬೆಳ್ತಂಗಡಿ ತಾಲೂಕು, ತೃತೀಯ: ರವಿಕುಮಾರ್ ಯಂಗ್ ಚಾಲೆಂಜರ‍್ಸ್ ಬೆಳ್ತಂಗಡಿ ತಾಲೂಕು.

ತುಳುಭಾವಗೀತೆ (ಯುವತಿಯರು) ಪ್ರಥಮ: ಗುರುಪ್ರಿಯ, ಪ್ರಖ್ಯಾತಿ ಯುವತಿ ಮಂಡಲ ನರಿವೆಗರು ಪುತ್ತೂರು ತಾಲೂಕು, ದ್ವಿತೀಯ: ಪೂರ್ಣಿಮ, ಗುರುಮಿತ್ರ ಸಮೂಹ ಬೆಳ್ತಂಗಡಿ ತಾಲೂಕು, ತೃತೀಯ: ಅಂಜನಿ, ಗುರುಮಿತ್ರ ಸಮೂಹ ಬೆಳ್ತಂಗಡಿ ತಾಲೂಕು.

ಗೀಗೀಪದ(ಯುವಕರು) ಪ್ರಥಮ: ಶ್ರೀ ಗುರುಮಿತ್ರ ಸಮೂಹ ಬೆಳ್ತಂಗಡಿ, ದ್ವಿತೀಯ: ಸಸಿಹಿತ್ಲು ಯುವಕ ಮಂಡಲ ಮಂಗಳೂರು, ತೃತೀಯ: ಸವಣೂರು ಯುವಕ ಮಂಡಲ.

ಗೀಗೀಪದ (ಯುವತಿಯರು) ಪ್ರಥಮ: ತಣ್ಣೀರು ಬಾವಿ ಯುವತಿ ಮಂಡಲ ಮಂಗಳೂರು, ದ್ವಿತೀಯ: ಪ್ರಖ್ಯಾತಿ ಯುವತಿ ಮಂಡಲ ಪುತ್ತೂರು, ತೃತೀಯ: ಶ್ರೀ ಗುರುಮಿತ್ರ ಸಮೂಹ ಬೆಳ್ತಂಗಡಿ.

ಭಜನೆ (ಯುವಕರು) ಪ್ರಥಮ: ಸಸಿಹಿತ್ಲು ಯುವಕ ಮಂಡಲ ಸಸಿಹಿತ್ಲು, ದ್ವಿತೀಯ: ಯಂಗ್ ಚಾಲೆಂಜರ‍್ಸ್ ಯುವಕ ಮಂಡಲ ಬೆಳ್ತಂಗಡಿ, ತೃತೀಯ: ಸವಣೂರು ಯುವಕ ಮಂಡಲ ಪುತ್ತೂರು.

ಭಜನೆ (ಯುವತಿಯರು) ಪ್ರಥಮ: ಯುವತಿ ಮಂಡಲ ಹಳೆಯಂಗಡಿ, ದ್ವಿತೀಯ: ನವಚೇತನ ಯುವತಿ ಮಂಡಲ ಬಂಟ್ವಾಳ, ತೃತೀಯ: ಗುರುಮಿತ್ರ ಸಮೂಹ ಬೆಳ್ತಂಗಡಿ.

ತುಳು ಪಾಡ್ದನ (ಯುವಕರು) ಪ್ರಥಮ: ಮಿತ್ರ ಬಳಗ ಕಾಯರ್ ಕೋಡಿ ಸುಳ್ಯ ತಾಲೂಕು, ದ್ವಿತೀಯ: ಹೊಸಬೆಟ್ಟು ಯುವಕ ಮಂಡಲ ಮಂಗಳೂರು ತಾಲೂಕು, ತೃತೀಯ: ವಿವೇಕಾನಂದ ಯುವಕ ಮಂಡಲ ಕಾಡಿಚ್ಚಾಯ ಪುತ್ತೂರು ತಾಲೂಕು.

ತುಳುಪಾಡ್ದನ (ಯುವತಿಯರು) ಪ್ರಥಮ: ತಣ್ಣೀರು ಬಾವಿ ಯುವತಿ ಮಂಡಲ ಮಂಗಳೂರು ತಾಲೂಕು, ದ್ವಿತೀಯ: ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು ಪುತ್ತೂರು ತಾಲೂಕು, ತೃತೀಯ: ಶುತಿ ಯುವತಿ ಮಂಡಲ ಕರಿಗ್ರಂಪಾಡಿ ಸುಳ್ಯ.

ತುಳು ಜಾನಪದ ಕುಣಿತ (ಯುವಕರು): ಯುವಕ ಮಂಡಲ ಬೈಕಂಪಾಡಿ ಮಂಗಳೂರು, ದ್ವಿತೀಯ: ಗುರುಮಿತ್ರ ಸಮೂಹ ಬೆಳ್ತಂಗಡಿ, ತೃತೀಯ: ಮಿತ್ರಬಳಗ ಯುವಕ ಮಂಡಲ ಸುಳ್ಯ.

ತುಳು ಜಾನಪದ ಕುಣಿತ (ಯುವತಿಯರು) ಪ್ರಥಮ: ಗುರುಮಿತ್ರ ಸಮೂಹ ಬೆಳ್ತಂಗಡಿ, ದ್ವಿತೀಯ: ತಣ್ಣೀರು ಬಾವಿ ಯುವತಿ ಮಂಡಲ ಮಂಗಳೂರು, ತೃತೀಯ: ಪ್ರಖ್ಯಾತಿ ಯುವತಿ ಮಂಡಲ ಪುತ್ತೂರು.

ಸೋಬಾನೆ ಪದ (ಯುವತಿಯರು) ಪ್ರಥಮ: ಶ್ರೀ ಗುರುಮಿತ್ರ ಸಮೂಹ ಬೆಳ್ತಂಗಡಿ, ದ್ವಿತೀಯ: ವಿಸ್ಮಯ ಯುವತಿ ಮಂಡಲ ಸುಳ್ಯ, ತೃತೀಯ: ನವಚೇತನ ಯುವತಿ ಮಂಡಲ ಬಂಟ್ವಾಳ.

ಜೋಳ\ರಾಗಿ ಬೀಸುವ ಪದ (ಯುವತಿಯರು) ಪ್ರಥಮ: ಪ್ರಖ್ಯಾತಿ ಯುವತಿ ಮಂಡಲ ಪುತ್ತೂರು ತಾಲೂಕು, ದ್ವಿತೀಯ: ಗುರುಮಿತ್ರ ಸಮೂಹ ಬೆಳ್ತಂಗಡಿ, ತೃತೀಯ: ತಣ್ಣೀರುಬಾವಿ ಯುವಕ ಮಂಡಲ ಮಂಗಳೂರು ತಾಲೂಕು,

ಚರ್ಮವಾಧ್ಯ (ಯುವಕರು) ಪ್ರಥಮ: ಸಸಿಹಿತ್ಲು ತುವಕ ಮಂಡಲ ಮಂಗಳೂರು, ದ್ವಿತೀಯ: ಮಿತ್ರ ಬಳಗ ಕಾಯರ್ತೋಡಿ ಸುಳ್ಯ, ತೃತೀಯ: ಸವಣೂರು ಯುವಕ ಮಂಡಲ ಪುತ್ತೂರು.

ಸಮಗ್ರ ಪ್ರಶಸ್ತಿ ಯುವಕರವಿಭಾಗ 48 ಅಂಕಗಳೊಂದಿಗೆ ಮಂಗಳೂರು ತಾಲೂಕು.ಯುವತಿಯರ ವಿಭಾಗ 41 ಅಂಕಗಳೊಂದಿಗೆ ಪುತ್ತೂರು ತಾಲೂಕು ಗಳಿಸಿಕೊಂಡಿದೆ.

Mulki-20011604 Mulki-20011605

Comments

comments

Comments are closed.

Read previous post:
Mulki-20011603
ರಂಗಭೂಮಿ ಸಮಾಜದ ಕೈ ಗನ್ನಡಿ

ಮೂಲ್ಕಿ: ಬದುಕಿನ ನಿತ್ಯ ಘಟನೆಗಳೇ ರಂಗಭೂಮಿಯ ನಾಟಕದ ಕಥಾವಸ್ತುಗಳಾಗಿದೆ, ರಂಗಭೂಮಿಯು ಸಮಾಜದ ಕೈಗನ್ನಡಿಯಾಗಿದ್ದು ಕಲಾವಿದರು ತಮ್ಮ ಆಂತರ್ಯದ ನೋವು ನಲಿವುಗಳನ್ನು ಬಿಟ್ಟು ಪಾತ್ರಕ್ಕೆ ಜೀವ ಕೊಡುವ ಮೂಲಕ ನೈಜತೆಯನ್ನು...

Close