ಉಳೆಪಾಡಿ ದೇವಳ ಭೂಮಿ ಪೂಜಾ

ಕಿನ್ನಿಗೋಳಿ: ನಮ್ಮ ನಾಡಿನ ಪರಂಪರೆ ಹಾಗೂ ಸಂಸ್ಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ.
ಸಮಾಜದಲ್ಲಿ ಪರಸ್ಪರ ಸಹಕಾರ, ಅನ್ಯೋನತೆ ಮತ್ತು ಧಾರ್ಮಿಕ ತಿಳುವಳಿಕೆಗಳು ತೀರಾ ಅಗತ್ಯವಾಗಿದ್ದು ಎಲ್ಲರೂ ಒಂದಾಗಿ ಸಹಬಾಳ್ವೆಯಿಂದ ಬದುಕಬೇಕು ಶೀರೂರು ಮಠಾಧೀಶರು ಶ್ರೀ ಲಕ್ಷ್ಮೀವರತೀರ್ಥ ಶ್ರೀ ಪಾದರು ಹೇಳಿದರು.
ಕಿನ್ನಿಗೋಳಿ ಸಮೀಪದ ಉಳೆಪಾಡಿ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಳದ ಜೀರ್ಣೋದ್ದಾರದ ಭೂಮಿ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಯುವಜನಾ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ ದೇವಳಗಳು ತನ್ಮಯತೆ, ಏಕಾಗ್ರತೆ ಬಿಂಬಿಸುವ ಮೂಲಕ ಮನಸ್ಸಿಗೆ ಶಾಂತಿ ನೀಡುತ್ತದೆ ಎಂದರು.
ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಮಾತನಾಡಿ ದೇವಳಗಳು ಶ್ರದ್ಧೆ ಭಕ್ತಿಯ ಪ್ರತೀಕ ತಮ್ಮ ಕೆಲಸಗಳನ್ನು ಶ್ರದ್ದೆ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸಿದರೆ ದೇವರೇ ಫಲ ನೀಡುತ್ತಾರೆ ಎಂದರು.
ಮುಂಬಯಿ ಅಸಿಸ್ಟೆಂಟ್ ಕಸ್ಟಮ್ ಕಮೀಷನರ್ ರೋಹಿತ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಾರ್ಕಳ ಶಾಸಕ ಸುನಿಲ್ ಕುಮಾರ್, ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲು, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಶ್ರೀ ಕ್ಷೇತ್ರ ಮುಂಡ್ಕೂರು ದೇವಳ ಅರ್ಚಕ ವೇದಮೂರ್ತಿ ರಾಮದಾಸ ಆಚಾರ್ಯ, ಅಜೆಕಾರು ವಿಷ್ಣು ಮೂರ್ತಿ ದೇವಳ ಆಡಳಿತ ಮೊಕ್ತೇಸರ ಶಿವರಾಮ ಶೆಟ್ಟಿ ಅಜೆಕಾರು, ಮಣಿಪಾಲ ಪ್ರಸನ್ನ ಗಣಪತಿ ದೇವಳ ಆಡಳಿತ ಮೊಕ್ತೇಸರ ಹರಿಪ್ರಸಾದ್ ರೈ ಬೆಳ್ಳಿಪ್ಪಾಡಿ, ಅಂಗಡಿಗುತ್ತು ಪ್ರಸಾದ್ ಶೆಟ್ಟಿ, ಉಡುಪಿ ಸಾಯಿರಾಧ ಗ್ರೂಪ್ ಮಾಲಕ ಮನೋಹರ್ ಎಸ್. ಶೆಟ್ಟಿ, ಒಶಿಯನ್ ಪರ್ಲ್ ಮಾಲಕ ಜಯರಾಮ ಬನಾನ್, ಉಳೆಪಾಡಿ ಶ್ರೀ ಉಮಾಮಹೇಶ್ವರೀ ಮಹಾಗಣಪತಿ ದೇವಳದ ಆಡಳಿತ ಮೊಕ್ತೇಸರ ಚಿತ್ತರಂಜನ್ ಶೆಟ್ಟಿ, ಗೌರಾವಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ, ಅಧ್ಯಕ್ಷ ರವೀಂದ್ರ ಶೆಟ್ಟಿ ಕಾರ್ಯಾಧಕ್ಷ ಪ್ರಭಾಕರ್ ಶೆಟ್ಟಿ, ರಾಜೇಶ್ ಪೂಜಾರಿ ಕೇಶವ ಶೆಟ್ಟಿ, ಗುತ್ತಿಗೆದಾರ ಪ್ರದೀಪ್ ಶೆಟ್ಟಿ ಎಕ್ಕಾರು ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕ್ರೃಷ್ಣರಾಜ್ ಶೆಟ್ಟಿ ಮುಗೇರ ಬೆಟ್ಟು ಸ್ವಾಗತಿಸಿ, ಮುಂಬಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪ್ರಸ್ತಾವನೆಗೈದರು. ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-21011602 Kinnigoli-21011603 Kinnigoli-21011604

Comments

comments

Comments are closed.

Read previous post:
Mulki-21011601
ಸಿ.ಎ. ಪರೀಕ್ಷೆ ಅಭಿರಾಮ್ ಉತ್ತೀರ್ಣ

ಮೂಲ್ಕಿ: ಹೊಸದಿಲ್ಲಿ ದಿ ಇನ್ಸಿಟ್ಯೂಟ್ ಆಫ್ ಚಾರ್ಟರ‍್ಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯ ವತಿಯಿಂದ ನವಂಬರ್ ನಲ್ಲಿ ನಡೆದ ಸಿ.ಎ.ಅಂತಿಮ ಪರೀಕ್ಷೆಯಲ್ಲಿ ಶ್ರಂಗೇರಿ ಕೆರೆಮನೆ ನಿವಾಸಿ ಹಿರಿಯ...

Close