ಐಸಿಸ್ ಉಗ್ರ ಜೊತೆ ನಂಟು ಶಂಕೆ ಓರ್ವನ ಬಂಧನ

ಕಿನ್ನಿಗೋಳಿ; ಐಸಿಸ್ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ, ಶಂಕಿತ ಉಗ್ರ ಬಜಪೆ ಸಮೀಪದ ಭಟ್ರಕೆರೆ ನಿವಾಸಿ ನಜ್ಮಲ್ ಹುದಾ ಎಂಬಾತನನ್ನು ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ಸ್ಥಳೀಯ ಪೋಲಿಸರ ಸಹಕಾರದೊಂದಿಗೆ ಬಂದಿಸಿದ್ದಾರೆ.
ನಿನ್ನೆ ತಡ ರಾತ್ರಿ 2.45 ರ ಹೊತ್ತಿಗೆ ಬಜಪೆ ಸಮೀಪದ ಭಟ್ರಕೆರೆ ಸಮೀಪದ ಉಸ್ಮಾನಿಯಾ ಮುಹಮ್ಮದಿ ಮಸೀದಿ ಸಮೀಪದ ಈತನ ಮನೆಗೆ ದಾಳಿ ನಡೆಸಿದ್ದಾರೆ. ಶಂಕಿತ ಉಗ್ರನಿಂದ ಒಂದು ಲ್ಯಾಪ್ ಟಾಪ್, 5 ಮೊಬೈಲ್ ಮತ್ತು ಎರಡು ಪೆನ್ ಡ್ರೈ ವಶಪಡಿಸಲಾಗಿದೆ. ವಶಪಡಿಸಿದ ಲ್ಯಾಪ್ ಟಾಪ್ ನಲ್ಲಿ ಪ್ರಧಾನಿ ಮೋದಿಯವರ ವಿವಿಧ ಭಂಗಿಯ ಫೋಟೋ ಇತ್ತು ಎನ್ನಲಾಗಿದೆ. ರಾತ್ರಿ 2.45 ರಿಂದ ಬೆಳಿಗ್ಗೆ 6 ಗಂಟೆವರೆಗೆ ನಡೆದ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ತನಿಖಾ ತಂಡದ 25 ಮಂದಿ ಅಧಿಕಾರಿಗಳು ಮತ್ತು 55 ಮಂದಿ ಸ್ಥಳೀಯ ಪೋಲೀಸರು ಇದ್ದರು. ಮೊದಲು ಉಗ್ರನ ಮನೆಯನ್ನು ಪೋಲಿಸರು ಸುತ್ತುವರಿದು ಹಿಂಬಾಗಿಲಿನ ಚಿಲಕವನ್ನು ಹಾಕಿ ನಂತರ ಮನೆಯ ಒಳ ಹೋಗಿದ್ದಾರೆ, ನಂತರ ನಡೆದ ವಿಚಾರಣೆಯಲ್ಲಿ ಯಾವುದೇ ವಿಷಯವನ್ನು ಹೇಳಿಲ್ಲ ನಂತರ ಆತನಲ್ಲಿನ ಮೋಬೈಲ್, ಲ್ಯಾಪ್ ಟಾಪ್, ಮುಂತಾದವುಗಳನ್ನು ವಶಪಡಿಸಿದ್ದಾರೆ.
ಬಿಹಾರ ಮೂಲದ ಸೈಫುಲ್ ಹುದಾ ಮತ್ತು ಮಹೀರಾ ಖತೂನ್ 12 ವರ್ಷಗಳ ಹಿಂದೆ ಬಜಪೆಯ ಭಟ್ರಕೆರೆಯಲ್ಲಿ ನೆಲೆಸಿದ್ದು. ಇವರ 4 ಜನ ಮಕ್ಕಳಲ್ಲಿ ಈತ ದೊಡ್ದವನಾಗಿದ್ದು ಮೂರು ಮಂದಿ ತಂಗಿಯರು ಇದ್ದಾರೆ. ಬೆಂಗಳೂರಿನ ಆರ್,ವಿ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರ್ ಮಂಗಳೂರಿನ ಕೆ.ಪಿ,ಟಿಯಲ್ಲಿ ಡಿಪ್ಲೊಮೋ ಶಿಕ್ಷಣ ಪಡೆದಿದ್ದ ಕೆಲ ವರ್ಷದ ಹಿಂದೆ ವಿದೇಶಕ್ಕೂ ಹೋಗಿದ್ದ ಎನ್ನಲಾಗಿದೆ
ತಾನಾಯಿತು ತನ್ನ ಕೆಲಸ ಆಯಿತು,ಯಾರೊಂದಿಗೂ, ಯಾವ ಸಂಘಟನೆಯೊಂದಿಗೂ ಬೆರೆಯದ ಆತ ಸಮೀಪದ ಪೆರ್ಮುದೆಯಲ್ಲಿನ ಜೆ,ಎ.ಎಸ್ ಮೊಬೈಲ್ ಅಂಗಡಿಯಲ್ಲಿ ತನ್ನ ಗೆಳೆಯನಿಗೆ ಸಹಕಾರ ನೀಡುತ್ತಿದ್ದ ಎನ್ನಲಾಗಿದೆ. ಎರಡು ದಿನಗಳ ಹಿಂದೆ ತನ್ನ ಗೆಳೆಯ ಬೆಂಗಳೂರಿಗೆ ತೆರಳಿದ್ದು ಈತನೇ ಅಂಗಡಿಯಲ್ಲಿ ಇರುತ್ತಿದ್ದ, ನಿನ್ನೆ ರಾತ್ರಿಯೂ ಸುಮಾರು 10 ಗಂಟೆಯವರೆಗೆ ಅಂಗಡಿಯಲ್ಲಿದ್ದ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಪಾಸ್ ಪೋರ್ಟ್ ವಿಚಾರಣೆಗೆ ಹಾಜರಾಗಿದ್ದ
ನಜ್ಮಲ್ ಹುದಾ, ಪಾಸ್ ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು 3-4 ದಿನಗಳ ಹಿಂದೆ ಬಜಪೆ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದ. ಆಗ ಪೋಲೀಸ್ ಪೇದೆಯೊಬ್ಬರು ಈತನ ದಾಡಿ ನೋಡಿ, ನಿನ್ನನ್ನು ನೋಡಿದರೆ ಪಾಸ್ ಪೋರ್ಟ್ ಸಿಗುವ ಸಾದ್ಯತೆ ಇಲ್ಲ ಆ ರೀತಿ ಗಡ್ಡ ಬೆಳೆಸಿದೀಯ ಎಂದು ತಮಷೆಗಾಗಿ ಹೇಳಿದಾರೆ ಎನ್ನಲಾಗಿದೆ, ಬೇರೆ ಕೆಲಸದ ಒತ್ತಡದಿಂದ ಅಂದು ವಿಚಾರಣೆ ನಡೆಯದೆ ಮುಂದೂಡಲಾಗಿತ್ತು. ಒಂದು ವೇಳೆ ವಿಚಾರಣೆ ನಡೆದು ಪಾಸ್ ಪೋರ್ಟ್ ಆಗಿದ್ದರೆ ಕೆಲವು ದಿನಗಳಲ್ಲಿ ವಿದೇಶಕ್ಕೆ ಹಾರಿ ಹೋಗುವ ಸಾದ್ಯತೆ ಇತ್ತು.
ಟಾಪ್ 20 ರಲ್ಲಿ ಈತನಿಗೆ ಎರಡನೆ ಸ್ಥಾನ
ಮೂಲಗಳ ಪ್ರಕಾರ ಶಂಕಿತ ಉಗ್ರರ ಪೈಕಿ ಟಾಪ್ 20 ಮಂದಿಯಲ್ಲಿ ಈತ ಎರಡನೆಯನು ಎನ್ನಲಾಗಿದೆ, ಸ್ಕೈಪ್ ಸಮಾಜಿಕ ತಾಣದಲ್ಲಿ ವಿವಿಧ ಗ್ರೂಪ್ ಗಳನ್ನು ರಚಿಸಿ ಉಗ್ರ ಸಂಘಟನೆ ಸೇರುವಂತೆ ಪ್ರೇರೇಪಿಸುತ್ತಿದ್ದ ಎನ್ನಲಾಗಿದೆ.

ತನ್ನ ಮಗ ಯಾವುದೇ ಉಗ್ರ ಸಂಘಟನೆಗಳಲ್ಲಿ ಬಾಗಿಯಾಗಿರುವ ಸಾದ್ಯತೆ ಇಲ್ಲ, ನಮಗೂ ಯಾವುದೇ ಮಾಹಿತಿ ಇಲ್ಲ, ಮನೆಯಲ್ಲಿ ಗೋಗಲ್ ನಲ್ಲಿ ಪ್ರಪಂಚದ ನಕ್ಷೆಯನ್ನು ವಿಕ್ಷಿಸುತ್ತಿದ್ದ, ಅದರಲ್ಲೇ ತೊಡಗಿಕೊಳ್ಳುತ್ತಿದ್ದ.
ತಾಯಿ

ನಜ್ಮಲ್ ಹುದಾ ಅಂತಹ ಯಾವುದೇ ಸಂಘಟನೆಯನ್ನು ಸೇರಿರುವ ಸಾದ್ಯತೆ ಇಲ್ಲ, ನಾನು 30 ವರ್ಷದಿಂದ ಇಲ್ಲಿ ನೆಲೆಸಿದ್ದೇನೆ ಸ್ಥಳೀಯರೊಂದಿಗೆ ಮತ್ತು ಮಸೀದಿಯಲ್ಲಿ ಈತನ ನಡತೆ ಉತ್ತಮವಾಗಿತ್ತು.
ಅಬ್ದುಲ್ ಶೇಕ್ ಮಸೀದಿ ಕೆಲಸಗಾರ

Mangalore-22011601 Mangalore-22011602 Mangalore-22011603 Mangalore-22011604

Comments

comments

Comments are closed.

Read previous post:
Kinnigoli-21011602
ಉಳೆಪಾಡಿ ದೇವಳ ಭೂಮಿ ಪೂಜಾ

ಕಿನ್ನಿಗೋಳಿ: ನಮ್ಮ ನಾಡಿನ ಪರಂಪರೆ ಹಾಗೂ ಸಂಸ್ಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ. ಸಮಾಜದಲ್ಲಿ ಪರಸ್ಪರ ಸಹಕಾರ, ಅನ್ಯೋನತೆ ಮತ್ತು ಧಾರ್ಮಿಕ ತಿಳುವಳಿಕೆಗಳು ತೀರಾ ಅಗತ್ಯವಾಗಿದ್ದು ಎಲ್ಲರೂ ಒಂದಾಗಿ ಸಹಬಾಳ್ವೆಯಿಂದ...

Close