ಲಯನ್ಸ್ ಪ್ರಾಂಥ್ಯ ಸಮ್ಮೇಳನ

ಹಳೆಯಂಗಡಿ: ಗ್ರಾಮೀಣ ಪ್ರದೇಶದಲ್ಲಿ ಪ್ರಾಮಾಣಿಕ ಹಾಗೂ ಪರಿಣಾಮಕಾರಿ ಸೇವೆ ಸಲ್ಲಿಸುವ ಮೂಲಕ ಹಳೆಯಂಗಡಿ ಲಯನ್ಸ್ ಕ್ಲಬ್ ಸಾರ್ವಜನಿಕ ವಲಯದಲ್ಲಿ ಉತ್ತಮ ಆದರಾಭಿಮಾನ ಗಳಿಸಿಕೊಂಡಿರುವುದು ಸ್ತುತ್ಯರ್ಹ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಕವಿತಾ ಶಾಸ್ತ್ರಿಯವರು ಹೇಳಿದರು.
ಲಯನ್ಸ್ ಪ್ರಾಂಥ್ಯ ಸಮ್ಮೇಳನದ ಪ್ರಯುಕ್ತ ಹಳೆಯಂಗಡಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ವಿವಿಧ ಸೇವಾ ಕಾರ್ಯಕ್ರಮಗಳನ್ನು ಶುಕ್ರವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.
ಸೇವಾ ಸಂಸ್ಥೆಗಳು ಸಾರ್ವಜನಿಕರಿಗೆ ಅರ್ಹ ಸೇವೆಯನ್ನು ನೀಡುವ ಮೂಲಕ ತಮ್ಮ ಸೇವಾ ಕಾರ್ಯಗಳನ್ನು ನಿರ್ವಹಿಸಬೇಕು ಈ ಬಗ್ಗೆ ಹಳೆಯಂಗಡಿ ಲಯನ್ಸ್ ಕ್ಲಬ್ ಮಾದರಿಯಾಗಿದೆ ಎಂದರು.
ಹಳೆಯಂಗಡಿ ಲಯನ್ಸ್ ವತಿಯಿಂದ ನೀಡಲಾದ ಬಸ್ಸು ನಿಲ್ದಾಣವನ್ನು ಲೋಕಾರ್ಪಣೆ ಗೊಳಿಸಿದ ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಅಗತ್ಯತೆಗಳನ್ನು ಪೂರೈಸುವಲ್ಲಿ ಹಳೆಯಂಗಡಿ ಲಯನ್ಸ್ ಕ್ಲಬ್ ಮುಂಚೂಣಿಯಲ್ಲಿದ್ದು ಇನ್ನೂ ಬಹಳಷ್ಟು ಸೇವಾಕಾರ್ಯಗಳನ್ನು ನಡೆಸುವ ಮೂಲಕ ಹಳೆಯಂಗಡಿಯ ಅಭಿವೃದ್ಧಿಯಲ್ಲಿ ಸಹಕಾರಿಯಾಗಬೇಕು ಎಂದರು.
ಈ ಸಂದರ್ಭ ಯುವಜನ ಸೇವೆ ಹಾಗೂ ಮೀನುಗಾರಿಕಾ ಸಚಿವರಾದ ಅಭಯಚಂದ್ರ ಜೈನ್,ಹಳೆಯಂಗಡಿ ಅಮ್ಮನ್ನಾ ಮೆಮೋರಿಯಲ್ ಚರ್ಚು ಸಭಾ ಪಾಲಕರಾದ ಸಬಾಸ್ಟಿಯನ್ ಜತ್ತನ್ನಾ,ಬೊಳ್ಳೂರು ಜುಮ್ಮಾ ಮಸೀದಿ ಖತೀಬರಾದ ಅಸ್ಗರ್ ಫೈಝಿ, ಹಳೆಯಂಗಡಿ ಗ್ರಾಮ ಪಂ.ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್, ಕಂಕನಾಡಿ-ಪಡೀಲ್ ಲಯನ್ಸ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಲಯನ್ಸ್ ಪ್ರಾಂಥೀಯ ಅಧ್ಯಕ್ಷ ಯಾದವ ದೇವಾಡಿಗಾ, ಪ್ರಾಂಥ್ಯ ಪ್ರಥಮ ಮಹಿಳೆ ಜಯಶ್ರೀ ಯಾದವ್, ವಲಯಾಧ್ಯಕ್ಷ ದೇವಪ್ರಸಾದ್ ಪುನರೂರು, ಓಸ್ವಲ್ಡ್ ಡಿಸೋಜಾ, ಪ್ರಾಂಥೀಯ ರಾಯಭಾರಿ ಲೋರೆನ್ಸ್ ಫೆರ್ನಾಂಡೀಸ್, ಸಮ್ಮೇಳನ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ ನಾನಿಲ್, ಉಪಾಧ್ಯಕ್ಷ ವಿಜಯ ಕುಮಾರ್ ಸೇವಾ ಕಾರ್ಯಕ್ರಮ ಸಮಿತಿ ಅಧ್ಯಕ್ಷ ವಸಂತ ಬೆರ್ನಾಡ್, ಕೋಶಾಧಿಕಾರಿ ಯಶೋಧರ ಎಲ್.ಸಾಲ್ಯಾನ್, ಹಳೆಯಂಗಡಿ ಲಯನ್ಸ್ ಅಧ್ಯಕ್ಷ ರಮೇಶ್ ಬಂಗೇರಾ, ಕಾರ್ಯದರ್ಶಿ ಶರತ್.ಪಿ, ಕೋಶಾಧಿಕಾರಿ ವಾಸು ನಾಯ್ಕ್,ಲಿಯೋ ಅಧ್ಯಕ್ಷ ಪ್ರಜ್ವಲ್ ಸಿ.ಪೂಜಾರಿ, ಸಹ ಅಧ್ಯಕ್ಷರುವಿಜಯ ಕುಮಾರ್ ಕುಬೆವೂರು, ಮಾಜಿ ಅಧ್ಯಕ್ಷರಾದ ಜಯಾನಂದ ಸುವರ್ಣ, ಮೋಹನ್ ಸುವರ್ಣ ಮೂಲ್ಕಿ ಲಯನ್ಸ್ ಅಧ್ಯಕ್ಷ ಉದಯ ಅಮೀನ್ ಮಟ್ಟು ಉಪಸ್ಥಿತರಿದ್ದರು.

ಸಮ್ಮೇಳನ ಆರ್ಥಿಕಸಮಿತಿಯ ಅಧ್ಯಕ್ಷ ಎಂ.ಭಾಸ್ಕರ್ ಸಾಲ್ಯಾನ್ ನಿರೂಪಿಸಿದರು.

Mulki-23011601

Comments

comments

Comments are closed.

Read previous post:
Mangalore-22011601
ಐಸಿಸ್ ಉಗ್ರ ಜೊತೆ ನಂಟು ಶಂಕೆ ಓರ್ವನ ಬಂಧನ

ಕಿನ್ನಿಗೋಳಿ; ಐಸಿಸ್ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ, ಶಂಕಿತ ಉಗ್ರ ಬಜಪೆ ಸಮೀಪದ ಭಟ್ರಕೆರೆ ನಿವಾಸಿ ನಜ್ಮಲ್ ಹುದಾ ಎಂಬಾತನನ್ನು ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು...

Close