ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

ನಿಡ್ದೋಡಿ : ನಾಪತ್ತೆಯಾಗಿದ್ದ ಮಹಿಳೆ ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆಯಾದ ಘಟನೆ ಮೂಡುಬಿದ್ರೆ ನಿಡ್ದೋಡಿ ಎಂಬಲ್ಲಿ ನಡೆದಿದೆ ಮೃತ ಮಹಿಳೆಯನ್ನು ರೇವತಿ ಮಡಿವಾಳ ಎಂದು ಗುರುತಿಸಲಾಗಿದೆ.

 ಸಮೀಪದ ನಿಡ್ಡೋಡಿ ನಿವಾಸಿ ರೇವತಿ 11 ದಿನಗಳ ಹಿಂದೆ ನಾಪತ್ತೆಯಾಯಾಗಿದ್ದು ಈ ಬಗ್ಗೆ ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದೇ ಸಂದರ್ಭ ಸ್ಥಳೀಯ ನಿವಾಸಿ ಶೇಖರ ಶೆಟ್ಟಿ ಎಂಬತನ ಮೇಲೆ ಸ್ಥಳೀಯರು ಸಂಶಯ ವ್ಯಕ್ತ ಪಡಿಸಿ ದೂರು ದಾಖಲಿಸಿದ್ದರು. ಮೂಡಬಿದ್ರೆ ಪೋಲಿಸರು ಶೇಖರ ಶೆಟ್ಟಿಯನ್ನು ಠಾಣೆಗೆ ಕರೆಸಿ ವಿಚಾರಿಸಿ ಬಿಟ್ಟಿದ್ದರು. ಆ ದಿನಗಳಿಂದ ಶೇಖರ ಶೆಟ್ಟಿ ನಾಪತ್ತೆಯಾಗಿದ್ದ ಎನ್ನಲಾಗಿದೆ. ಆದರೆ ನಾಪತ್ತೆಯಾಗಿದ್ದ ಶೇಖರ ಶೆಟ್ಟಿ 3 ದಿನಗಳ ಹಿಂದೆ ವಾಪಸಾಗಿದ್ದು, ಪೋಲೀಸರು ಆತನನ್ನು ಪುನಃ ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು.
ರೇವತಿಯ ಬಂಗಾರದ ಒಡವೆಗಳನ್ನು ಬ್ಯಾಂಕಿನಲ್ಲಿಟ್ಟು ಸಾಲ ತೆಗೆದ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿದ ಆದರೆ ಕೊಲೆಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ನಿನ್ನೆ ರಾತ್ರಿ ಸ್ಥಳೀಯರು ಸಭೆ ನಡೆಸಿ ಪೋಲಿಸರು ಸರಿಯಾದ ತನಿಖೆ ನಡೆಸುತ್ತಿಲ್ಲ ಈ ಬಗ್ಗೆ ಹೋರಾಟ ನಡೆಸುವುದೆಂದು ತೀರ್ಮಾನಿಸಿ, ಪೋಲಿಸರಿಗೂ ಈ ಬಗ್ಗೆ ಮಾಹಿತಿ ನೀಡಿದ್ದರು ಕೂಡಲೇ ಎಚ್ಚೆತ್ತ ಪೋಲಿಸರು, ಶೇಖರ ಶೆಟ್ಟಿಯನ್ನು ವಾಪಾಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸುವಾಗ ಕೊಲೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡ. ಇಂದು ಬೆಳ್ಳಿಗ್ಗೆ ಮೂಡಬಿದ್ರೆ ಪೋಲಿಸರು ಶೇಖರ ಶೆಟ್ಟಿಯನ್ನು ಕೊಲೆ ಮಾಡಿದ ಸ್ಥಳಕ್ಕೆ ಕರೆದುಕೊಂಡು ಬಂದು ಸ್ಥಳ ಪರಿಶೀಲಿಸಿದರು ರೇವತಿಯವರ ಶವ ಕೊಳೆತ ಸ್ಥಿತಿಯಲ್ಲಿತ್ತು, ಪ್ರಖರಣ ಬೇದಿಸುವಲ್ಲಿ ಪೊಲೀಸರು ನಿರ್ಲಕ್ಷ ವಹಿಸಿದ್ದಾರೆ ಮಾತ್ರವಲ್ಲದೆ, ಆರೋಪಿಯನ್ನು ನಮಗೆ ಒಪ್ಪಿಸಿ ನಾವೇ ಬುದ್ದಿ ಕಲಿಸುತ್ತೇವೆ ಎಂದು ಸ್ಥಳೀಯರು ಪಟ್ಟುಹಿಡಿದ್ದಿದ್ದು, ಪೋಲಿಸರ ಮತ್ತು ಸ್ಥಳೀಯರ ಮದ್ಯೆ ಮಾತಿನ ಚಕಮಕಿ ನಡೆಯಿತು. ನಿಡ್ಡೋಡಿಯಲ್ಲಿಯೇ ಟೈಲರ್ ವ್ರತ್ತಿ ನಡೆಸುತ್ತಿದ್ದ ಶೇಖರ ಶೆಟ್ಟಿ ಮಹಿಳೆಯರ ಬಳಿ ಅಸಬ್ಯವಾಗಿ ವರ್ತಿಸುತಿದ್ದ, ಅಲ್ಲದೆ ಸಾಲವನ್ನು ತೆಗೆದುಕೊಂಡಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Niddodi-230116010

Niddodi-23011604

Niddodi-23011605


Niddodi-23011608

Niddodi-230116011

Niddodi-23011606Niddodi-23011607Niddodi-23011609

Comments

comments

Comments are closed.

Read previous post:
Mulki-23011603
ನಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಮೂಲ್ಕಿ: ಬಿಲ್ಲವ ಸಮಾಜ ಸೇವಾ ಸಂಘ ಮೂಲ್ಕಿ,ಶ್ರೀ ನಾರಾಯಣ ಗುರು ಮಹಿಳಾ ಮಂಡಳಿ, ಶ್ರೀನಾರಾಯಣ ಗುರು ಆಂಗ್ಲ ಮಾದ್ಯಮ ಶಾಲೆ ಮತ್ತು ಶ್ರೀ ನಾರಾಯಣ ಗುರು ಸೇವಾದಳದ...

Close