ವಿಜಯಾ ಕಾಲೇಜು ಹೈಸ್ಕೂಲು ವಿಭಾಗದ ಐಟಿ ಸ್ಪರ್ಧೆ

ಮೂಲ್ಕಿ: ವಿದ್ಯಾರ್ಥಿಗಳಲ್ಲಿ ಪ್ರಾಪಂಚಿಕ ಜ್ಞಾನ ವೃದ್ದಿ ಹಾಗೂ ನಾಯಕತ್ವ ಗುಣಗಳಿಂದ ಆಂತರಿಕ ಸದೃಡರಾಗಿ ಬೆಳೆದಲ್ಲಿ ಭವಿಷ್ಯದ ಮಾನವಸಂಪನ್ಮೂಲದ ಅಭಿವೃದಿಗೆ ಪೂರಕ ವಾಗಲಿದೆ ಎಂದು ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠದ ಉಪಾಧ್ಯಕ್ಷ ಪ್ರೊ.ಯು ನಾಗೇಶ್ ಶೆಣೈ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜು ಕಂಪ್ಯೂಟರ್ ವಿಭಾಗದ ಆಶ್ರಯದಲ್ಲಿ ನಡೆದ ಅಂತರ್ ಹೈಸ್ಕೂಲು ವಿಭಾಗದ ಐಟಿ ಸ್ಪರ್ಧೆ ವಿಜ್ ಐಟಿ-2ಕೆ16 ಟೆಕ್‌ಪಾರ‍್ವ್‌ನ್ನು  ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ ತಂತ್ರಜ್ಞಾನಗಳ ಅರಿವು ಹಾಗೂ ಆಸಕ್ತಿ ವಿದ್ಯಾರ್ಥಿಗಳ ಉನ್ನತಿಗೆ ಪೂರಕವಾಗಿದೆ. ವಿದ್ಯಾರ್ಥಿಗಳು ಉತ್ತಮ ಚಿಂತನೆಗಳು ಹಾಗೂ ಸಾಮಾಜಿಕ ಮೌಲ್ಯಗಳನ್ನು ತಿಳಿದು ಉನ್ನತಿಗಳಿಸಲು ಈ ಸ್ಪರ್ದೆಗಳು ಉತ್ತಮ ವೇದಿಕೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲರಾದ ಪ್ರೊ.ಕೆ.ಆರ್ ಶಂಕರ್ ವಹಿಸಿದ್ದರು.
ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಪಮೀದಾ ಬೇಗಂ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಹೆಚ್.ಜಿ.ನಾಗರಾಜ ನಾಯಕ್, ಕಂಪ್ಯೂಟರ್ ವಿಭಾಗ ಮುಖ್ಯಸ್ಥೆ ಜ್ಯೋತಿ ಶಂಕರ್ ಸಾಲ್ಯಾನ್, ವಿದ್ಯಾರ್ಥಿ ಸಂಘಗಳ ಅಧ್ಯಕ್ಷ ಶೋಧನ್ ಶೆಟ್ಟಿ, ಕಂಪ್ಯೂಟರ್ ಸಂಘದ ಕಾರ್ಯದರ್ಶಿ ಧೀರಜ್ ಡಿ ಸುವರ್ಣ ಅತಿಥಿಗಳಾಗಿದ್ದರು.

ಜ್ಯೋತಿ ಶಂಕರ್ ಸಾಲ್ಯಾನ್ ಸ್ವಾಗತಿಸಿದರು. ದೀಕ್ಷಾ ವೈ ನಿರೂಪಿಸಿದರು. ಧೀರಜ್ ವಂದಿಸಿದರು.

Mulki-23011602

Comments

comments

Comments are closed.

Read previous post:
Mulki-23011601
ಲಯನ್ಸ್ ಪ್ರಾಂಥ್ಯ ಸಮ್ಮೇಳನ

ಹಳೆಯಂಗಡಿ: ಗ್ರಾಮೀಣ ಪ್ರದೇಶದಲ್ಲಿ ಪ್ರಾಮಾಣಿಕ ಹಾಗೂ ಪರಿಣಾಮಕಾರಿ ಸೇವೆ ಸಲ್ಲಿಸುವ ಮೂಲಕ ಹಳೆಯಂಗಡಿ ಲಯನ್ಸ್ ಕ್ಲಬ್ ಸಾರ್ವಜನಿಕ ವಲಯದಲ್ಲಿ ಉತ್ತಮ ಆದರಾಭಿಮಾನ ಗಳಿಸಿಕೊಂಡಿರುವುದು ಸ್ತುತ್ಯರ್ಹ ಎಂದು ಲಯನ್ಸ್...

Close