ಲಯನ್ಸ್ ಪ್ರಾಂಥೀಯ ಸಮ್ಮೇಳ ತುಡರ್

ಹಳೆಯಂಗಡಿ: ಇನ್ನೊಬ್ಬರ ನೋವಿಗೆ ಸದ್ಪಂದಿಸುವುದು ಸರ್ವ ಶ್ರೇಷ್ಠ ಬದುಕು. ಸಮಾಜದ ದೀನವರ್ಗವನ್ನು ಮುಖ್ಯ ವಾಹಿನಿಗೆ ತರುವ ಶಿಕ್ಷಣ ಆರೊಗ್ಯ ಕಾರ್ಯಗಳು ಸರ್ವ ಶ್ರೇಷ್ಠ ಇವುಗಳೊಂದಿಗೆ ಯುವ ಸಮಾಜಕ್ಕೆ ಪ್ರಾಂಪಂಚಿಕ ಜ್ಞಾನ ಭಾರತೀಯ ಸಂಸ್ಕಾರ ನೈತಿಕ ಮೌಲ್ಯಗಳು ಹಾಗೂ ನಮ್ಮ ಸಂಸ್ಕೃತಿಯನ್ನು ತಿಳಿಸುವ ಕಾರ್ಯ ಮಾಡಬೇಕು. ಯುವ ಸಮಾಜ ಓದುವ ಹವ್ಯಾಸ ಬೆಳೆಸಿಕೊಂಡರೆ ಮಾತ್ರ ಉತ್ತಮ ಜ್ಞಾನ ಸಂಪಾದನೆ ಸಾಧ್ಯ ಯುವ ಸಮಾಜವನ್ನು ಉನ್ನತಿಗೊಳಿಸುವ ಕಾರ್ಯ ಲಯನ್ಸ್ ಸದಸ್ಯರಿಂದ ನಡೆಯಬೇಕು ಎಂದು ಪತ್ರಕರ್ತ ಮನೋಹರ ಪ್ರಸಾದ್ ಹೇಳಿದರು.ಹಳೆಯಂಗಡಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಶನಿವಾರ ಹಳೆಯಂಗಡಿ ಜಿಎಂಎಲ್ ಇನ್ಫ್ರೋಕಾನ್ ಗ್ರೌಂಡ್‌ನಲ್ಲಿ ನಡೆದ ಲಯನ್ಸ್ ಜಿಲ್ಲೆ 317ಡಿ ರೀಜನ್ 5ರ ಪ್ರಾಂಥೀಯ ಸಮ್ಮೇಳ ತುಡರ್ ನಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಕೆನರಾ ಬ್ಯಾಂಕ್ ಡಿಜಿಎಂ ಕೃಷ್ಣರಾಜ್ ಮಾತನಾಡಿ, ವ್ಯಕ್ತಿ ಸಮಷ್ಠಿಯ ಸೇವೆಯೇ ದೇವರ ಪೂಜೆ ಎಂಬ ತತ್ವದ ಆಧಾರದಲ್ಲಿ ಕೆನರಾ ಬ್ಯಾಂಕ್ ಶಿಕ್ಷಣ, ಆರೋಗ್ಯ, ಸಮಾಜಸೇವಾ ಕಾರ್ಯಗಳಲ್ಲಿ ಮುಂಚೂಣಿಯಾಗಿ ತಮ್ಮನ್ನು ತೊಡಗಿಸಿಕೊಂಡಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಪ್ರಾಂತೀಯ ಅಧ್ಯಕ್ಷ ಯಾದವ ದೇವಾಡಿಗಾ ವಹಿಸಿದ್ದರು. ಲಯನ್ಸ್ ಜಿಲ್ಲೆ 317ಡಿ ರೀಜನ್ 5ರ ಪ್ರಥಮ ಮಹಿಳೆ ಜಯಶ್ರೀ ಯಾದವ್ ಪ್ರಾಂಥಿಯ ಸಮ್ಮೇಳನ ಉದ್ಘಾಟಿಸಿದರು.
ಹಳೆಯಂಗಡಿ ಜಿಎಂಎಲ್ ಇನ್ಫ್ರೋಕಾನ್ ಮುಖ್ಯಸ್ಥ ಮೋಹನ್ ಆರ್.ಕೋಟ್ಯಾನ್ ಅತಿಥಿಗಳಾಗಿದ್ದರು.
ಸೇವಾ ಕಾರ್ಯಕ್ರಮದ ಪ್ರಯುಕ್ತ ಹಳೆಯಂಗಡಿ ವಿದ್ಯಾವಿನಾಯಕ ಯುವಕ ಮಂಡಲದ ನೂತನ ಕಟ್ಟಡ ನಿರ್ಮಾಣಕ್ಕೆ ರೂ೨೫ಸಾವಿರ, ವೈದ್ಯಕೀಯ ಚಿಕಿತ್ಸೆಗಾಗಿ ರೂ50ಸಾವಿರ ಧನಸಹಾಯ ನೀಡಲಾಯಿತು.
ಸಮಾಜದಲ್ಲಿ ಜಾನಪದ ಹಾಗೂ ಪ್ರದೇಶಿಕ ಸಂಸ್ಕೃತಿ ಪಸರಿಸುವ ಕಲಾ ಕುಂಭಾ ಸಾಂಸ್ಕ್ರತಿಕ ವೇದಿಕೆ ಕುಳಾಯಿ, ತುಡಾರ್ ಕಲಾ ವೇದಿಕೆ ಪಾವಂಜೆ ಮತ್ತು ಯುವವಾಹಿನಿ ಮೂಲ್ಕಿ, ತಂಡಗಳನ್ನು ಗೌರವಿಸಲಾಯಿತು.ಯುವ ಪ್ರತಿಭೆ ಗಗನ್ ಗಾಂವ್ಕರ್ ಮತ್ತು ರಾಷ್ಟ್ರೀಯ ಕಬ್ಬಡ್ಡಿ ಪಟುಶೀಭಾ ಎನ್, ಕರ್ಕೇರಾ, ನೃತ್ಯ ಪ್ರತಿಭೆ ಅದ್ವಿಕಾ ಶೆಟ್ಟಿ, ಚಿತ್ರನಟಿ ಚಿರಶ್ರೀ ಅಂಚನ್ ಮತ್ತು ಯೋಗ ಗುರು ಜಯ ಮುದ್ದು ಶೆಟ್ಟಿ ಕೆಂಚನಕೆರೆಯವರನ್ನು ಸನ್ಮಾನಿಸಲಾಯಿತು. ವಲಯಾಧ್ಯಕ್ಷರಾದ ದೇವಪ್ರಸಾದ್ ಪುನರೂರು, ಓಸ್ವಲ್ಡ್ ಡಿಸೋಜಾ, ಪ್ರಾಂಥೀಯ ರಾಯಭಾರಿ ಲೋರೆನ್ಸ್ ಫೆರ್ನಾಂಡೀಸ್, ಸಮ್ಮೇಳನ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ ನಾನಿಲ್, ಉಪಾಧ್ಯಕ್ಷ ವಿಜಯ ಕುಮಾರ್ ಸೇವಾ ಕಾರ್ಯಕ್ರಮ ಸಮಿತಿ ಅಧ್ಯಕ್ಷ ವಸಂತ ಬೆರ್ನಾಡ್,  ಕೋಶಾಧಿಕಾರಿ ಯಶೋಧರ ಎಲ್.ಸಾಲ್ಯಾನ್, ಹಳೆಯಂಗಡಿ ಲಯನ್ಸ್ ಅಧ್ಯಕ್ಷ ರಮೇಶ್ ಬಂಗೇರಾ, ಕಾರ್ಯದರ್ಶಿ ಶರತ್.ಪಿ, ಕೋಶಾಧಿಕಾರಿ ವಾಸು ನಾಯ್ಕ್, ಲಿಯೋ ಅಧ್ಯಕ್ಷ ಪ್ರಜ್ವಲ್ ಸಿ.ಪೂಜಾರಿ, ಸಹ ಅಧ್ಯಕ್ಷರುವಿಜಯ ಕುಮಾರ್ ಕುಬೆವೂರು, ಮಾಜಿ ಅಧ್ಯಕ್ಷರಾದ ಜಯಾನಂದ ಸುವರ್ಣ, ಮೋಹನ್ ಸುವರ್ಣ ವಿವಿಧ ಕ್ಲಬ್ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು , ಸಮ್ಮೇಳನ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ ನಾನಿಲ್ ಸ್ವಾಗತಿಸಿದರು. ಸೇವಾ ಕಾರ್ಯಕ್ರಮ ಸಮಿತಿ ಅಧ್ಯಕ್ಷ ವಸಂತ ಬೆರ್ನಾಡ್ ಸೇವಾಕಾರ್ಯದ ಮಾಹಿತಿ ನೀಡಿದರು. ಆರ್ಥಿಕ ಸಮಿತಿಯ ಅಧ್ಯಕ್ಷ ಎಂ.ಭಾಸ್ಕರ್ ಸಾಲ್ಯಾನ್ ಸನ್ಮಾನಿತರನ್ನು ಪರಿಚಯಿಸಿದರು. ಡಾ.ಗಣೇಶ್ ಅಮೀನ್ ಸಂಕಮಾರ್ ಮತ್ತು ನವೀನ್ ಶೆಟ್ಟಿ ಎಡ್ಮೆಮಾರ್, ಎಂ.ಸರ್ವೋತ್ತಮ ಅಂಚನ್ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ಜಗದೀಶ ಹೊಳ್ಳ ನಿರೂಪಿಸಿದರು. ರಮೇಶ್ ಬಂಗೇರಾ ವಂದಿಸಿದರು.

Mulki-25011606

Comments

comments

Comments are closed.

Read previous post:
Kinnigoli-25011605
ನಮ್ಮ ನಡೆ ಅಮ್ಮನಡೆಗೆ ಪಾದಯಾತ್ರೆ

ಕಟೀಲು:  ಮರವೂರಿನಂದ ಕಟೀಲು ದೇವಳದ ತನಕ ನಮ್ಮ ನಡೆ ಅಮ್ಮನಡೆಗೆ ಪಾದಯಾತ್ರೆ ಕಾರ್ಯಕ್ರಮ ಜ. 24 ರಂದು ಕಟೀಲು ದೇವಳದಲ್ಲಿ  ಸಮಾಪ್ತ ಗೊಂಡಿತು. 15 ಸಾವಿರಕ್ಕೂ ಮಿಕ್ಕಿ ಜನರು...

Close